ಕೊರೊನಾದಿಂದ ದೂರವಿರಲು ಹೋಗಿ ಗೊತ್ತಿಲ್ಲದೇ ಆಹ್ವಾನ ಕೊಟ್ಟ 46 ಮಂದಿ

ಸಿಯೋಂಗ್ನಮ್, ಮಾರ್ಚ್ 17: ಉಪ್ಪು ನೀರನ್ನು ಬಾಯಿಗೆ ಸ್ಪ್ರೇ ಮಾಡಿದರೆ ಕೊರೊನಾದಿಂ ದೂರವಿರಬಹುದು ಎನ್ನುವ ತಪ್ಪು ಕಲ್ಪನೆಯಿಂದ ಕೊರೊನಾವನ್ನು ಮೈಮೇಲೆ ಎಳೆದುಕೊಂಡಿರುವ ಘಟನೆ ದಕ್ಷಿಣ ಕೊರಿಯಾದ ಚರ್ಚ್ ಒಂದರಲ್ಲಿ ನಡೆದಿದೆ.

Recommended Video

      No need to panic about Corona says this MBBS student | Oneindia kannada

      ಚೀನಾದಲ್ಲಿ ಎಲ್ಲೆಡೆ ಕೊರೊನಾ ಹರಡಿದೆ. ಜನರು ಕೊರೊನಾದಿಂದ ದೂರವಿರಲು ಚಿತ್ರ ವಿಚಿತ್ರ ಕ್ರಮವನ್ನೆಲ್ಲಾ ಅನುಸರಿಸುತ್ತಿದ್ದಾರೆ. ಹಾಗೆಯೇ ಅಲ್ಲಿನ ಚರ್ಚ್ ಒಂದರಲ್ಲಿ ಪ್ರಾರ್ಥನೆ ವೇಳೆ ಎಲ್ಲರ ಬಾಯಿಗೂ ಉಪ್ಪು ನೀರು ಸ್ಪ್ರೇ ಮಾಡಲಾಗಿತ್ತು. ಆದರೆ ಆ ಬಾಟಲಿ ಶುಚಿ ಇಲ್ಲದ ಕಾರಣ ಒಬ್ಬರಿಂದ ಒಟ್ಟು ಚರ್ಚ್‌ನಲ್ಲಿದ್ದ 46 ಮಂದಿಗೆ ಕೊರೊನಾ ಹರಡಿದೆ.

      ನಗರದ ರಿವರ್ ಆಫ್ ಗ್ರೇಸ್ ಕಮ್ಯುನಿಟಿ ಚರ್ಚ್‌ನಲ್ಲಿ ಮಾರ್ಚ್ 8ರಂದು ಪ್ರಾರ್ಥನೆ ನಡೆಸಲಾಗಿತ್ತು. ಅಲ್ಲಿ ಕೊರೊನಾ ತಡೆಗಟ್ಟುವ ಸಲುವಾಗಿ ರೋಗನಿರೋಧಕವೆಂದು ಉಪ್ಪು ನೀರನ್ನು ಸ್ಪ್ರೇ ಬಾಟಲಿಗೆ ಅಲ್ಲಿದ್ದವರ ಬಾಯಿಗೆ ಸಿಂಪಡಿಸಲಾಗಿತ್ತು.

      Dozens Of Members Of A South Korean Church Are Infected With Coronavirus

      ಈ ವಿಚಾರದಲ್ಲಿ ಚರ್ಚ್ ನ ಪಾದ್ರಿ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆಲ್ಲಾ ನಾನೇ ಹೊಣೆ, ನಾನು ಹೇಳಿದ್ದಕ್ಕೆ ಆ ಸ್ಪ್ರೇ ಹಾಕಲಾಗಿತ್ತು ಎಂದು ಹೇಳಿದ್ದಾರೆ. ಕಾಲ್‌ ಸೆಂಟರ್‌ ಒಂದರಲ್ಲಿ 129 ಜನರಿಗೆ ಸೋಂಕು ಇರುವುದು ದೃಢವಾಗಿತ್ತು.

      ಮೊದಲಿಗೆ ಚರ್ಚ್ ನ ಪಾದ್ರಿ ಮತ್ತು ಅವರ ಪತ್ನಿ ಸೇರಿ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಚರ್ಚ್‌ಗೆ ತೆರಳಿದ್ದ 46 ಮಂದಿಯಲ್ಲೂ ಸೋಂಕು ಇರುವುದು ದೃಢಪಟ್ಟಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+