Donald Trump: ಭಾರತಕ್ಕೆ ಬರಲು ಸಜ್ಜಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾರಣ ಏನು?
ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿತ್ತು, ರಷ್ಯಾ ಮೂಲಕ ಭಾರಿ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿದೆ ಭಾರತ ಎಂಬ ಆರೋಪ ಹೊರಿಸಿ ತೆರಿಗೆ ಯುದ್ಧ ಸಾರಿತ್ತು ಅಮೆರಿಕ. ಇದರಿಂದ ಭಾರತ ರಫ್ತು ಮಾಡುವ ವಸ್ತುಗಳ ಬೆಲೆ ಏರಿಕೆ ತಲೆಬಿಸಿ ಎದುರಾಗಿ, ಅಮೆರಿಕದಲ್ಲಿ ಭಾರಿ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಇಷ್ಟೆಲ್ಲಾ ಪರಿಸ್ಥಿತಿಯ ನಡುವೆ ಇದೀಗ ಸಂಬಂಧ ಸುಧಾರಣೆಗೆ ಮುಂದಾಗಿರುವ ಅಮೆರಿಕ ತೆರಿಗೆ ಕಟ್ ಮಾಡುವ ಕುರಿತು ಕೆಲ ದಿನಗಳ ಹಿಂದಷ್ಟೇ ಮಹತ್ವದ ನಿರ್ಧಾರ ಕೈಗೊಂಡಿತ್ತು. ಇದೀಗ ಮತ್ತೊಂದು ಬಿಗ್ ಅಪ್ಡೇಟ್ ಸಿಕ್ಕಿದೆ.
ಹೌದು, ಭಾರತ & ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಖುದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರಲು ಸಜ್ಜಾಗಿದ್ದಾರೆ. ಭಾರತ & ಅಮೆರಿಕ ಸಂಬಂಧ ಸುಧಾರಣೆ ಹಿನ್ನೆಲೆಯಲ್ಲಿ, ಭಾರತದ ಜೊತೆಗೆ ಮಾತುಕತೆ ಉತ್ತಮವಾಗಿ ಸಾಗಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಸಮಯದಲ್ಲಿ ಭಾರತ ಭೇಟಿ ಬಗ್ಗೆಯು ಮುನ್ಸೂಚನೆ ನೀಡಿದ್ದಾರೆ. ಟ್ರಂಪ್ ಈಗಾಗಲೇ ಭಾರತಕ್ಕೆ ಭೇಟಿ ನೀಡಿದ್ದಾಗಿದೆ, ಮೊದಲ ಬಾರಿ ಅಧ್ಯಕ್ಷರಾಗಿದ್ದ ಸಮಯದಲ್ಲೇ ಟ್ರಂಪ್ ಭಾರತಕ್ಕೆ ಬಂದು ಹೋಗಿದ್ದಾರೆ. ಆದರೆ ಈಗ ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಟ್ರಂಪ್ ಅವರು ಈ ರೀತಿ ಹೇಳಿಕೆ ನೀಡಿರುವುದು ಭಾರಿ ಕುತೂಹಲ ಕೆರಳಿಸಿದೆ.

2026ಕ್ಕೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ!
ಅಂದಹಾಗೆ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ಸೂಚನೆ ನೀಡಿರುವ ಪ್ರಕಾರ, ಮುಂದಿನ ವರ್ಷ ಅಂದ್ರೆ 2026ಕ್ಕೆ ಭಾರತಕ್ಕೆ ಟ್ರಂಪ್ ಭೇಟಿ ನೀಡಲಿದ್ದಾರೆ. ಬಹುತೇಕ ಭಾರತದ ತೈಲ ಕಂಪನಿಗಳು ರಷ್ಯಾ ಮೂಲಕ ತೈಲ ಖರೀದಿ ನಿಲ್ಲಿಸಿಬಿಟ್ಟಿವೆ ಎಂಬ ವಿಚಾರವನ್ನ ಪ್ರಸ್ತಾಪಿಸಿದ್ದ ಡೊನಾಲ್ಡ್ ಟ್ರಂಪ್ ಇದೇ ಸಮಯದಲ್ಲಿ ತಮ್ಮ ಭಾರತ ಭೇಟಿ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ. ಆದರೆ ಟ್ರಂಪ್ ಭಾರತ ಭೇಟಿ ಇನ್ನೂ ಅಧಿಕೃತವಾಗಿಲ್ಲ, ಹೀಗಾಗಿ ಕುತೂಹಲ ಕೆರಳಿದೆ. ಮತ್ತೊಂದು ಕಡೆ ಮೋದಿ ಅವರು ನನ್ನ ಸ್ನೇಹಿತ, ಮತ್ತು ನಾವು ಮಾತನಾಡುತ್ತಿದ್ದೇವೆ ಎಂದು ಕೂಡ ಡೊನಾಲ್ಡ್ ಟ್ರಂಪ್ ಇದೇ ಸಮಯದಲ್ಲಿ ಹೇಳಿದ್ದಾರೆ.
ತೆರಿಗೆ ಇಳಿಕೆ ಮಾಡಿದ್ದ ಟ್ರಂಪ್
ಇತ್ತೀಚಿನ ದಿನಗಳಲ್ಲಿ ಅಮೆರಿಕ ಹೆಸರು ಕೇಳಿದರೆ ಸಾಕು ಹಲವು ದೇಶಗಳು ಉರಿದು ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗೇ ಅಮೆರಿಕ ಅಧ್ಯಕ್ಷರು ಹೇರಿಕೆ ಮಾಡಿದ್ದ ಭಾರಿ ದೊಡ್ಡ ಪ್ರಮಾಣದ ತೆರಿಗೆ ವಿಚಾರ ಕೂಡ ಕಿಚ್ಚು ಹೊತ್ತಿಸಿತ್ತು. ಇಷ್ಟೆಲ್ಲದರ ನಡುವೆ ಇದೀಗ ಪರಿಸ್ಥಿತಿ ತಿಳಿಯಾಗುತ್ತಾ ಇದ್ದು, ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ಹೇರಿಕೆ ಮಾಡಿದ್ದ ತೆರಿಗೆ ಇಳಿಸಿದ ನಂತರ ಡೊನಾಲ್ಡ್ ಟ್ರಂಪ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಭಾರತದ ಶತ್ರು ದೇಶಗಳಿಗೆ ಇದು ಕಣ್ಣನ್ನು ಕೆಂಪಾಗಿಸಿದ್ದು, ಹೊಟ್ಟೆ ಉರಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications