ಚುನಾವಣೆಯಲ್ಲಿ ಟ್ರಂಪ್ ಮಗನಿಂದ ನೀತಿ ಸಂಹಿತೆ ಉಲ್ಲಂಘನೆ?

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್, 9: ಚುನಾವಣಾ ನೀತಿ ಸಂಹಿತೆ ಪ್ರಕಾರ ಮತ ಹಾಕಿರುವ ವಿವರವನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ. ಆದರೆ ಟ್ರಂಪ್ ಪುತ್ರ ಎರಿಕ್ ಟ್ರಂಪ್ ತಮ್ಮ ತಂದೆಗೆ ಮತ ಚಲಾಯಿಸುವುದಾಗಿ ಘೋಷಿಸಿ ವಿವಾದ ಸೃಷ್ಟಿಸಿದ್ದಾರೆ.

ಸಾಲದೆಂಬಂತೆ ಬ್ಯಾಲೆಟ್ ಪೇಪರ್ ಅನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಕಟಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಎರಿಕ್ ಟ್ರಂಪ್, "ನಾನು ನಮ್ಮ ತಂದೆಗೆ ಮತ ಹಾಕಿದ್ದೇನೆ. ಅಮೆರಿಕದ ಉಜ್ವಲ ಭವಿಷ್ಯಕ್ಕಾಗಿ ಅವರು ಕೃಷಿ ಮಾಡುತ್ತಾರೆ" ಎಂದು ಅವರು ಹೇಳಿದ್ದಾರೆ.

Donald Trump's son Eric Trump tweets photo of ballet paper

ವಿವಾದ ಉಂಟಾಗುತ್ತಿದ್ದಂತೆಯೇ ಎಚ್ಚರಗೊಂಡ ಎರಿಕ್ ಟ್ರಂಪ್ ಸ್ವಲ್ಪ ಸಮಯದ ಬಳಿಕ ಮಾಡಿರುವ ಟ್ವಿಟ್ ಅನ್ನು ಅವರು ತೆಗೆದಿದ್ದಾರೆ. ನ್ಯೂಯಾರ್ಕ್ ಚುನಾವಣಾ ನೀತಿ ಸಂಹಿತೆ ಪ್ರಕಾರ ಯಾವ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂಬುದನ್ನು ಪ್ರಕಟಿಸುವಂತಿಲ್ಲ.

ಈಗ ಟ್ರಂಪ್ ಪುತ್ರ ಈ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಚುನಾವಣಾ ಅಧಿಕಾರಿಗಳು ಟ್ರಂಪ್ ಪುತ್ರನ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Donald Trump's son Eric Trump tweets photo of ballet paper

ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಬ್ಯಾಲೆಟ್ ಪೇಪರ್ ಅನ್ನು ಬಹಿರಂಗವಾಗಿ ಪ್ರಕಟಿಸುವುದಕ್ಕೆ ನಿಷೇಧ ಹೇರಲಾಗಿದೆ. ಆದರೆ ನ್ಯೂಯಾರ್ಕ್ ನಲ್ಲಿ ಮಾತ್ರ ಮತವಿವರ ಬಹಿರಂಗಪಡಿಸುವುದಲ್ಲದೆ. ಪ್ರಕಟಿಸುವುದಕ್ಕೂ ಸಹ ನಿಷೇಧವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eric Trump found himself in hot water after tweeting a photo of his completed ballot with the oval over his father’s name filled in.
Please Wait while comments are loading...