ಡೊನಾಲ್ಡ್ ಟ್ರಂಪ್- ಟೈಮ್‌ ನಿಯತಕಾಲಿಕೆಯ ವರ್ಷದ ವ್ಯಕ್ತಿ

Posted By:
Subscribe to Oneindia Kannada

ನ್ಯೂಯಾರ್ಕ್, ಡಿಸೆಂಬರ್ 07: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವರ್ಷದ ವ್ಯಕ್ತಿ ಎಂದು ಟೈಮ್‌' ನಿಯತಕಾಲಿಕೆ ತನ್ನ ವೆಬ್ ಸೈಟ್ ನಲ್ಲಿ ಬುಧವಾರ ಪ್ರಕಟಿಸಿದೆ.

ಅಮೆರಿಕದ ಪ್ರಭಾವಿ ಪತ್ರಿಕೆ ಟೈಮ್, ಉದ್ಯಮಿ ಕಮ್ ರಾಜಕಾರಣಿ ಡೊನಾಲ್ಡ್ ಟ್ರಂಪ್ ಅವರನ್ನು 2016ನೇ ಸಾಲಿನ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಿದ್ದೇಕೆ ಎಂಬುದರ ಬಗ್ಗೆ ಕೂಡಾ ವೆಬ್ ಸೈಟ್ ನಲ್ಲಿ ವಿವರಣೆ ಇದೆ. ಇದೇ ಸುದ್ದಿಯನ್ನು ಎನ್ ಬಿಸಿಯಲ್ಲಿ ಪ್ರಸಾರ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, 'ಇದೊಂದು ದೊಡ್ಡ ಗೌರವ' ಎಂದಿದ್ದಾರೆ.

Donald Trump named the 2016 Time magazine person of the year

ಟೈಮ್ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನ ಪಡೆದರೆ, ಅಮೆರಿಕದ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಎರಡನೇ ಸ್ಥಾನ ಪಡೆದಿದ್ದಾರೆ ಎಂದು ಟೈಮ್ ವ್ಯವಸ್ಥಾಪಕ ಸಂಪಾದಕ ನ್ಯಾನ್ಸಿ ಗಿಬ್ಸ್ ಅವರು ತಿಳಿಸಿದ್ದಾರೆ. ಪ್ರೆಸಿಡೆಂಟ್ ಆಫ್ ದಿ ಡಿವೈಡೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಎಂದು ಟೈಮ್ ಮುಖಪುಟದಲ್ಲಿ ಶೀರ್ಷಿಕೆ ನೀಡಲಾಗಿದೆ.

ಆನ್ ಲೈನ್ ಓದುಗರ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2016ರ ಟೈಮ್ ವರ್ಷದ ವ್ಯಕ್ತಿ (ಸಾರ್ವಜನಿಕರ ಅಭಿಮತ) ಯಾಗಿ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಓದುಗರ ಸಮೀಕ್ಷೆಯಲ್ಲಿ ಮೋದಿ ಅವರು ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್‌ ಒಬಾಮಾ, ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Donald Trump has been named the 2016 Time magazine person of the year. The announcement was made on Time's website and NBC’s Today show on Wednesday morning.
Please Wait while comments are loading...