ಅಮೆರಿಕ ಅಧ್ಯಕ್ಷ ಟ್ರಂಪ್ ಗೆ 1001 ರಾಖಿಗಳು
ಚಂಡೀಗಢ, ಆಗಸ್ಟ್ 07: ಸೋದರ-ಸೋದರಿ ಬಾಂಧವ್ಯದ ಪ್ರತೀಕವಾಗಿರುವ ರಕ್ಷಾ ಬಂಧನ ಹಬ್ಬ ಸೋಮವಾರದಂದು ಭಾರತದೆಲ್ಲೆಡೆ ಆಚರಿಸಲ್ಪಡುತ್ತಿದೆ.
ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ 1001 ರಾಖಿಗಳನ್ನು ಉಡುಗೊರೆಯಾಗಿ ಕಳುಹಿಸಿಕೊಡಲಾಗಿದೆ. ಹರ್ಯಾಣದ ಮುಸ್ಲಿಂ ಸಮುದಾಯವೇ ಹೆಚ್ಚಾಗಿರುವ ಗ್ರಾಮವೊಂದರ ಮಹಿಳೆಯರು ಮತ್ತು ಯುವತಿಯರು ಈ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ಮರೋರಾ ಗ್ರಾಮದ ಮಹಿಳೆಯರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಾಖಿಗಳನ್ನು ಕಳುಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಹೆಸರನ್ನ ಸಾಂಕೇತಿಕವಾಗಿಟ್ಟುಕೊಂಡು ಈ ಗ್ರಾಮದಲ್ಲಿ ಎನ್‌ಜಿಒ ಒಂದು ಕಾರ್ಯನಿರ್ವಹಿಸುತ್ತಿದೆ ಎಂಬುದು ಮತ್ತೊಂದು ವಿಶೇಷವಾಗಿದೆ.
ಈ ಗ್ರಾಮದಲ್ಲಿರುವ ಮಹಿಳೆಯರು ಮತ್ತು ಯುವತಿಯರು 1001 ರಾಖಿಗಳನ್ನು ಡೊನಾಲ್ಡ್ ಟ್ರಂಪ್‌ಗಾಗಿ ತಯಾರಿಸಿದ್ದು, 501 ರಾಖಿಗಳನ್ನು ನರೇಂದ್ರ ಮೋದಿಗಾಗಿ ತಯಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ಅವರನ್ನು ಈ ಗ್ರಾಮದ ಮಹಿಳೆಯರು ಹಾಗೂ ಯುವತಿಯರು ಅಣ್ಣಂದಿರೆಂದು ಪರಿಗಣಿಸಿದ್ದಾರೆ. ಈಗಾಗಲೇ ಡೊನಾಲ್ಡ್ ಟ್ರಂಪ್ ಅವರಿಗೆ ರಾಖಿಗಳನ್ನು ಕಳುಹಿಸಿಕೊಡಲಾಗಿದ್ದು ಆಗಸ್ಟ್ 7 ರಂದು ರಾಖಿಗಳು ತಲುಪಲಿದೆ ಎಂದು ತಿಳಿದುಬಂದಿದೆ.












Click it and Unblock the Notifications