Donald Trump: ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಆಟ, ಭಾರತೀಯರಿಗೆ ಪ್ರಾಣ ಸಂಕಟ!
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಅಲ್ಲೋಲ, ಕಲ್ಲೋಲ ಸೃಷ್ಟಿ ಆಗಿದೆ. ಡೊನಾಲ್ಡ್ ಟ್ರಂಪ್ ಆಡಳಿತ ಕೈಗೊಂಡ ಒಂದೊಂದು ನಿರ್ಧಾರಕ್ಕೂ ಬೆಲೆ ತೆರುವ ಪರಿಸ್ಥಿತಿ ಈಗ ನಿರ್ಮಾಣ ಆಗುತ್ತಿದೆ. ಅದರಲ್ಲೂ ಅಮೆರಿಕದ ನೆಲದಿಂದ, ಭಾರತ ಮೂಲದ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವಾಗ ಅಮಾನವೀಯವಾಗಿ ವರ್ತಸಿದ ರೀತಿ ಆಕ್ರೋಶ ಸ್ಫೋಟಕ್ಕೂ ಕಾರಣವಾಗಿದೆ.
ಅಮೆರಿಕ ಮತ್ತು ಭಾರತದ ನಡುವೆ ಅತ್ಯುತ್ತಮ ಸಂಬಂಧ ಇದ್ದು, ನೂರಾರು ವರ್ಷದಿಂದ ಕೂಡ ವ್ಯಾಪಾರ & ವ್ಯವಹಾರ ನಡೆಯುತ್ತಿದೆ. ಹೀಗಿದ್ದರೂ ಇದೀಗ ಅಕ್ರಮ ವಲಸಿಗರನ್ನು ಹೊರ ಹಾಕುವ ನೆಪದಲ್ಲಿ ಮನುಷ್ಯತ್ವ ಮರೆತು ಡೊನಾಲ್ಡ್ ಟ್ರಂಪ್ ಅವರ ಆಡಳಿತ ಈಗ ವರ್ತಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮತ್ತೊಂದು ಕಡೆ ಈ ರೀತಿ ಅಮೆರಿಕ ವರ್ತಿಸುತ್ತಿರುವ ರೀತಿ ನೋಡಿದರೆ, ಪ್ರಧಾನಿ ಮೋದಿ ಅವರ ಸರ್ಕಾರಕ್ಕೂ ಮುಜುಗರ ಈಗ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಅಮೆರಿಕದಲ್ಲಿ ವಲಸಿಗರ ಸಮಸ್ಯೆ ಹೆಚ್ಚು
ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕದ ನಂಬರ್ 1 ಪಟ್ಟ ಇದೀಗ ಕಳಚುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾಕಂದ್ರೆ ಸಾಲದ ಸುಳಿ ಜೊತೆಗೆ ಆರ್ಥಿಕ ಸಂಕಷ್ಟ ಅಮೆರಿಕಗೆ ಕಾಡುತ್ತಿದೆ. ಇಂತಹ ಸಮಯದಲ್ಲೇ ಅಕ್ರಮ ವಲಸಿಗರ ವಿಚಾರ ಮುಂದಿಟ್ಟು, ರಾಜಕೀಯ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಹೀಗಿದ್ದಾಗ ಅಮೆರಿಕ ನೆಲದಿಂದ ಭಾರತಕ್ಕೆ ಗಡಿಪಾರು ಆಗಿರುವ ಜನರು ತಮ್ಮ ಸಂಕಷ್ಟಗಳನ್ನು ಜಗತ್ತಿನ ಎದುರು ಬಿಡಿಸಿ, ಬಿಡಿಸಿ ಹೇಳುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಅಕ್ರಮ ವಲಸಿಗರ ವಿಚಾರ ಮುಂದಿಟ್ಟುಕೊಂಡು ಮೆಕ್ಸಿಕೋ ಹಾಗೂ ಕೆನಡಾ ವಿರುದ್ಧ ಟ್ಯಾಕ್ಸ್ ಯುದ್ಧ ಸಾರಿದ್ದರು. ಆದರೆ ಈ ವಿಚಾರವಾಗಿ ಕೆನಡಾ & ಮೆಕ್ಸಿಕೋ ಕೂಡ ಉಲ್ಟಾ ಹೊಡೆದಿದ್ದವು. ಆಗ ಹೆದರಿ ಸೈಲೆಂಟ್ ಆಗಿದ್ದ ಟ್ರಂಪ್ ಆಡಳಿತ ಇದೀಗ ಭಾರತ ಮತ್ತು ಭಾರತೀಯರ ಜೊತೆಗೆ ಕೂಡ ಹದ್ದುಮೀರಿ ವರ್ತಿಸುತ್ತಿದೆ ಎಂಬ ಭಾರಿ ಗಂಭೀರ ಆರೋಪ ಕೇಳಿಬರುತ್ತಿದೆ. ಇದು ಎರಡೂ ದೇಶಗಳ ಸಂಬಂಧಕ್ಕೆ ಬೆಂಕಿ ಹಚ್ಚುತ್ತಾ? ಎಂಬ ಅನುಮಾನ ಮೂಡಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳೂ ಈ ಬಗ್ಗೆ ಚಿಂತಿಸುವಂತೆ ಆಗಿದ್ದು, ಅಮೆರಿಕದ ಹೊಸ ಅಧ್ಯಕ್ಷರು ವಲಸೆ ನೀತಿಯಲ್ಲಿ ದೊಡ್ಡ ಬದಲಾವಣೆಗೆ ಮುಂದಾಗಿದ್ದಾರೆ.












Click it and Unblock the Notifications