• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುರಹಂಕಾರಿ ಚೀನಾಗೆ ಎಚ್ಚರಿಕೆ ಕೊಟ್ಟ ಜರ್ಮನಿ..!

By ಅನಿಕೇತ್
|

'ನಮ್ಮನ್ನು ಹೆದರಿಸುವ ತಂತ್ರ ನೀವು ಅನುಸರಿಸಬೇಡಿ, ಏಕೆಂದರೆ ಇಲ್ಲಿ ಅಂತಹ ಗೊಡ್ಡು ಬೆದರಿಕೆ ನಡೆಯಲ್ಲ.' ಅಷ್ಟಕ್ಕೂ ಹೀಗೆ ಚೀನಾಗೆ ಡೈರೆಕ್ಟ್ ವಾರ್ನಿಂಗ್ ಕೊಟ್ಟಿದ್ದು ಯುರೋಪ್ ಸಮೂಹದ ಮೋಸ್ಟ್ ಪವರ್‌ಫುಲ್ ಕಂಟ್ರಿ ಜರ್ಮನಿ.

   ಯಾಕೋ Chinaದ್ದು ದಿನದಿಂದ ದಿನಕ್ಕೆ ಅತಿಯಾಗ್ತಾ ಇದೆ | Oneindia Kannada

   ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

   ಚೀನಾ ಶತ್ರು ತೈವಾನ್‌ಗೆ ಜೆಕ್ ಗಣರಾಜ್ಯದ ಜನಪ್ರತಿನಿಧಿಯೊಬ್ಬರು ಭೇಟಿ ಕೊಟ್ಟ ಹಿನ್ನೆಲೆ ಚೀನಾ ಬಾಯಿಗೆ ಬಂದಂತೆ ಹೇಳಿಕೆ ಕೊಟ್ಟಿತ್ತು. ಇದಕ್ಕೆ ಜರ್ಮನಿ ಖಾರವಾಗಿ ಪ್ರತಿಕ್ರಿಯಿಸಿದೆ. ನಾವು ನಮ್ಮ ಅಂತಾರಾಷ್ಟ್ರೀಯ ಗೆಳೆಯರಿಗೆ ತುಂಬಾ ಗೌರವ ಕೊಡುತ್ತೇವೆ ಹಾಗೇ ಅವರಿಂದಲೂ ಅಷ್ಟೇ ಗೌರವ ಬಯಸುತ್ತೇವೆ. ಅಕಸ್ಮಾತ್ ಬೆದರಿಕೆ ತಂತ್ರ ಅನುಸರಿಸಿದರೆ ಯುರೋಪ್‌ನಲ್ಲಿ ಅದು ನಡೆಯಲ್ಲ ಎಂದು ಜರ್ಮನಿ ವಿದೇಶಾಂಗ ಸಚಿವ ಹೈಕೊ ಮಾಸ್ ಚೀನಾ ಸಚಿವರಿಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

   ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!

   ಇದು ಚೀನಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಉಂಟುಮಾಡಿದೆ. ಯುರೋಪ್ ರಾಷ್ಟ್ರಗಳನ್ನು ಸಹಾಯದ ನೆಪದಲ್ಲಿ ಬುಟ್ಟಿಗೆ ಹಾಕಿಕೊಳ್ಳಲು ಚೀನಾ ಹಾಕಿದ್ದ ಸ್ಕೆಚ್ ಉಲ್ಟಾ ಹೊಡೆದಿದೆ. ಚೀನಾ ಮೊದಲಿನಿಂದಲೂ ಹೀಗೆ, ಸಹಾಯ ಮಾಡುವ ನೆಪದಲ್ಲಿ ಒಂದು ದೇಶದ ಬೆನ್ನಿಗೆ ನಿಲ್ಲುತ್ತದೆ. ನಂತರ ಆ ದೇಶವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ.

   ಈಗಾಗಲೇ ಆಫ್ರಿಕಾ ಹಾಗೂ ಏಷ್ಯಾ ಖಂಡದಲ್ಲಿ ಇಂತಹ ಬೆಳವಣಿಗೆ ಕಾಣಬಹುದು. ಆದರೆ ಚೀನಾದ ಈ ಕುತಂತ್ರ ಯುರೋಪ್‌ನಲ್ಲಿ ಮಕಾಡೆ ಮಲಗಿದ್ದು, ಡ್ರ್ಯಾಗನ್ ನಾಡಿಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಪಾಳಮೋಕ್ಷ ಮಾಡಲಾಗಿದೆ.

   ಚೀನಾ ವಿರುದ್ಧ ಮತ್ತೊಂದು ದೇಶದ ಬಂಡಾಯ..!

   ಜಗಳ ಶುರುವಾಗಿದ್ದು ಎಲ್ಲಿಂದ..?

   ಯುರೋಪ್ ಖಂಡದಲ್ಲಿ ಜೆಕ್ ಗಣರಾಜ್ಯ ಎಂಬ ದೇಶವಿದೆ. ಇದು ಯುರೋಪಿಯನ್ ಯೂನಿಯನ್‌ನ ಬಹುಮುಖ್ಯ ಅಂಗ. ಇತ್ತೀಚೆಗೆ ಈ ದೇಶದ ಜನಪ್ರತಿನಿಧಿಯೊಬ್ಬರು ತೈವಾನ್‌ನ ರಾಜಧಾನಿ ತೈಪೆಗೆ ಭೇಟಿ ನೀಡಿದ್ದರು. ಇದು ಚೀನಾ ಬುಡಕ್ಕೆ ಬೆಂಕಿ ಇಟ್ಟಂತಾಗಿತ್ತು. ಇಡೀ ಯುರೋಪ್ ಖಂಡವನ್ನೇ ತನ್ನ ಕೈವಶ ಮಾಡಿಕೊಳ್ಳಲು ಚೀನಾ ಯತ್ನಿಸುತ್ತಿರುವಾಗ, ಶತ್ರು ರಾಷ್ಟ್ರದ ಜೊತೆ ಯುರೋಪ್‌ನ ದೇಶವೊಂದು ಸ್ನೇಹ ಬೆಸೆಯುತ್ತಿರುವುದು ಚೀನಾಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಉದ್ರೇಕಗೊಂಡು ಮಾತನಾಡಿದ್ದರು. ಸರಿಯಾಗೇ ಪ್ರತ್ಯುತ್ತರ ನೀಡಿರುವ ಜರ್ಮನಿಯ ವಿದೇಶಾಂಗ ಸಚಿವ ಹೈಕೊ ಮಾಸ್, ಇಲ್ಲಿ ಹೆದರಿಸೋದು ಮಾಡಿದರೆ ಜಾಗ ಖಾಲಿ ಮಾಡಿ ಎಂಬ ಅರ್ಥದಲ್ಲಿ ಚೀನಾಗೆ ಎಚ್ಚರಿಕೆ ಕೊಟ್ಟುಬಿಟ್ಟರು. ಇದನ್ನು ಕೇಳಿದ ಚೀನಾ ಸಚಿವ ತಬ್ಬಿಬ್ಬಾಗಿ ಕೂತುಬಿಟ್ಟರು.

   Fact Check: ಚೀನಾದ ಸುಖೋಯ್ ಯುದ್ಧ ವಿಮಾನವನ್ನು ಉರುಳಿಸಿದ ತೈವಾನ್

   ತೈವಾನ್ ಜೊತೆ ನಿರಂತರ ಕಾಳಗ

   ಚೀನಾ ಎಂಬ ಸಾಮ್ರಾಜ್ಯಶಾಹಿ ದೇಶಕ್ಕೆ ಅದೆಷ್ಟು ಭೂಮಿ ಇದ್ದರೂ ಸಾಲುವುದಿಲ್ಲ. ತನ್ನ ನೆರೆ ರಾಷ್ಟ್ರಗಳಿಗೆ ಗಡಿ ವಿಚಾರವಾಗಿ ಟಾರ್ಚರ್ ಮಾಡೋದೇ ಚೀನಾದ ಖಯಾಲಿ. ಹೀಗೆ ಚೀನಾ ಈ ಹಿಂದೆ ತನ್ನ ಜಾಗವಾಗಿದ್ದ ತೈವಾನ್ ಮೇಲೆ ಕಣ್ಣಿಟ್ಟಿದೆ. ತೈವಾನ್ ಚೀನಾದಿಂದ ದೂರವಾಗಿ ಸುಮಾರು ಮುಕ್ಕಾಲು ಶತಮಾನ ಉರುಳಿದೆ. ಆದರೂ ಚೀನಾ ತೈವಾನ್ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇತ್ತೀಚೆಗೆ ಅಮೆರಿಕ ತೈವಾನ್ ಜೊತೆಗೆ ರಾಜತಾಂತ್ರಿಕ ಸಂಬಂಧ ಬೆಸೆಯಲು ಮುಂದಾಗಿತ್ತು. ಅಲ್ಲಿಂದ ಈ ಬೆಂಕಿ ಹೊತ್ತಿತ್ತು. ಆದರೆ ಜೆಕ್‌ ರಿಪಬ್ಲಿಕ್‌ನ ಜನಪ್ರತಿನಿಧಿ ತೈವಾನ್‌ಗೆ ಭೇಟಿ ನೀಡಿದ ನಂತರ ಸಿಟ್ಟು ಮತ್ತಷ್ಟು ಹೆಚ್ಚಾಗಿದೆ. ಈ ಸೇಡನ್ನು ತೀರಿಸಿಕೊಳ್ಳುವ ಭರದಲ್ಲಿ ಚೀನಾ ಸರಿಯಾದ ಪೆಟ್ಟು ತಿಂದಿದೆ.

   English summary
   Germany warned Chinese counterpart against threats toward European allies, as the top official from Beijing reinforced his accusation that a Czech lawmaker’s visit to Taiwan had crossed a line.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X