Nobel Award: ನೊಬೆಲ್ ಪ್ರಶಸ್ತಿ ಪ್ರಕಟ, ಯಾರಿಗೆ ಸಿಕ್ಕಿದೆ ಗೊತ್ತಾ?
ಜಗತ್ತಿನ ಅತ್ಯಂತ ದುಬಾರಿ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿರುವ 'ನೊಬೆಲ್' ವಿಜ್ಞಾನಿಗಳ ಪಾಲಿಗೆ ಆಸ್ಕರ್ ಅವಾರ್ಡ್ ಇದ್ದಂತೆ. ಇದೀಗ 2023ರ 'ನೊಬೆಲ್ ಪ್ರಶಸ್ತಿ' ಪ್ರಕಟವಾಗಿದೆ. ಅದರಲ್ಲೂ ಇಡೀ ಜಗತ್ತನ್ನೇ ಕಾಡಿದ್ದ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಸಹಾಯ ಮಾಡಿದ ಧೀರರಿಗೆ ಈ ಬಾರಿ 'ನೊಬೆಲ್ ಪ್ರಶಸ್ತಿ' ಒಲಿದು ಬಂದಿದೆ. ಹಾಗಾದರೆ 2023ರ ನೊಬೆಲ್ ಪ್ರಶಸ್ತಿ ಪಡೆದ ಸಾಧಕರು ಯಾರು? ಯಾವ ದೇಶದವರು?
3 ವರ್ಷದ ಹಿಂದೆ ಇಡೀ ಜಗತ್ತು 'ಕೊರೊನಾ' ಎಂಬ ಮಹಾಮಾರಿಗೆ ಬೆಚ್ಚಿಬಿದ್ದಿತ್ತು. ಈ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳುವುದೇ ಕಷ್ಟ ಎಂಬಂತಾಗಿತ್ತು. ಆದರೆ ಆ ಸಮಯದಲ್ಲಿ ವ್ಯಾಕ್ಸಿನ್ ಮಾತ್ರ ಮನುಷ್ಯರನ್ನು ಉಳಿಸೋಕೆ ಸಾಧ್ಯ ಎಂದು ವಿಜ್ಞಾನಿಗಳು ಅರಿತಿದ್ದರು. ಇದೇ ಕಾರಣಕ್ಕೆ ಕೊರೊನಾ ವಿರುದ್ಧ ಲಸಿಕೆಗೆ ಸಾಕಷ್ಟು ದೇಶಗಳು ಯತ್ನಿಸಿದ್ದವು. ಆದರೆ ಈ ಪ್ರಯತ್ನದಲ್ಲಿ ಕೆಲ ಸಂಶೋಧಕರು ಗೆದ್ದರು. ಇದೀಗ ಕೊರೊನಾ ಲಸಿಕೆ ಸಂಶೋಧನೆಗೆ ಸಹಾಯ ಮಾಡಿದ್ದ ವಿಜ್ಞಾನಿಗಳಿಗೆ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಸಿಕ್ಕಿದೆ.

'ನೊಬೆಲ್ ಪ್ರಶಸ್ತಿ' ಸಾಧಕರು ಇವರು!
ಹೌದು, ಕ್ಯಾಟಲಿನ್ ಕಾರಿಕೋ ಹಾಗೂ ಡ್ರೂ ವೈಸ್‌ಮನ್ ಅವರಿಗೆ 2023ರ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ. ಇಂದು ಘೋಷಣೆಯಾದ ಪ್ರಶಸ್ತಿಯಲ್ಲಿ ಕ್ಯಾಟಲಿನ್ & ವೈಸ್‌ಮನ್‌ಗೆ ಸಿಹಿಸುದ್ದಿ ಸಿಕ್ಕಿದೆ. ಈ ಇಬ್ಬರು ವಿಜ್ಞಾನಿಗಳು ಕ್ರೂರಿ 'ಕೊರೊನಾ' ವಿರುದ್ಧ ಹೋರಾಡೋಕೆ ಎಂಆರ್‌ಎನ್‌ಎ (mRNA) ಲಸಿಕೆ ಸಂಶೋಧನೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದರು. ಇದೀಗ ಕ್ಯಾಟಲಿನ್ ಕಾರಿಕೋ ಮತ್ತು ಡ್ರೂ ವೈಸ್‌ಮನ್ ಅವರ ಈ ಶ್ರಮವನ್ನ ಪರಿಗಣಿಸಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
69 ಲಕ್ಷ ಜನರು ಬಲಿಯಾಗಿದ್ದರು
'ಕೊರೊನಾ' 2019ರಲ್ಲಿ ಪತ್ತೆಯಾದ ಬಳಿಕ ಇಡೀ ಜಗತ್ತು ನರಳಿ ಹೋಗಿತ್ತು. ಕೊರೊನಾ ಕಂಟಕ ಈವರೆಗೂ ಸುಮಾರು 69,59,316 ಜನರ ಸಾವಿಗೆ ಕಾರಣವಾಗಿದ್ದರೆ, ಸುಮಾರು 77,08,75,433 ಕೊರೊನಾ ಕೇಸ್‌ಗಳು ಈವರೆಗೆ ಪತ್ತೆಯಾಗಿವೆ. ಹಾಗೇ ಕೊರೊನಾ ಲಸಿಕೆ ನೀಡುವ ಅಭಿಯಾನ ಕೂಡ ವೇಗವಾಗಿ ಸಾಗಿದ್ದು, ಇಲ್ಲಿಯವರೆಗೂ 13,50,52,62,477 ಡೋಸ್ ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ. ಹೀಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆಯ ಪಾತ್ರ ಮಹತ್ವದ್ದು. ಹೀಗಾಗಿಯೇ ಈ ಶ್ರಮವನ್ನು ಗರುತಿಸಿ ಇದೀಗ ವೈದ್ಯಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ.
ಒಟ್ನಲ್ಲಿ 'ಕೊರೊನಾ' ಕಂಟಕದಿಂದ ಮನುಷ್ಯರನ್ನು ಪಾರು ಮಾಡಿದವರಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ವಿಜ್ಞಾನಿಗಳ ಶ್ರಮಕ್ಕೆ ಗೌರವವನ್ನ ಸಲ್ಲಿಸಲಾಗಿದೆ. ಜಗತ್ತಿನಲ್ಲಿ ಅತ್ಯಂತ ದುಬಾರಿ ಪ್ರಶಸ್ತಿ ಎಂದು 'ನೊಬೆಲ್ ಪ್ರಶಸ್ತಿ'ಯನ್ನ ಕರೆಯಲಾಗುತ್ತೆ. ಸುಮಾರು 1 ಮಿಲಿಯನ್ ಡಾಲರ್ ಬಹುಮಾನವನ್ನ ಪ್ರಶಸ್ತಿ ಒಳಗೊಂಡಿರುತ್ತದೆ. ಹೀಗಾಗಿ ಸುಮಾರು 8 ಕೋಟಿ ರೂಪಾಯಿಗೂ ಹೆಚ್ಚು ಹಣ ಪ್ರಶಸ್ತಿ ಪಡೆದ ಸಾಧಕರಿಗೆ ಸಿಗಲಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications