ಇಸ್ರೇಲ್ VS ಹಮಾಸ್ ಯುದ್ಧದ ಬಗ್ಗೆ ಭಾರತದ ನಿಲುವು ಏನು?

ಇಸ್ರೇಲ್ ಮತ್ತು ಹಮಾಸ್ ಉಗ್ರರ ಮಧ್ಯೆ ಭೀಕರ ಯುದ್ಧ ನಡೆಯುತ್ತಿದ್ದು, ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂದು ಇಡೀ ಜಗತ್ತು ಯತ್ನಿಸುತ್ತಿದೆ. ಆದರೂ ಯುದ್ಧ ನಿಲ್ಲುತ್ತಿಲ್ಲ, ಹೀಗಾಗಿಯೇ ವಿಶ್ವಸಂಸ್ಥೆ ಮೂಲಕ ಒತ್ತಡ ಹಾಕಲು ಕೆಲ ರಾಷ್ಟ್ರಗಳು ಮುಂದಾಗಿ ಇಂದು ಮಹತ್ವದ ಮತದಾನ ಕೂಡ ನಡೆಯಿತು. ಹಾಗಾದರೆ ಈ ಮತದಾನದಲ್ಲಿ ಭಾರತ ಯುದ್ಧ ನಿಲ್ಲಿಸುವ ಪರವಾಗಿ ಮತ ಹಾಕಿದೆಯಾ? ಅಥವಾ ವಿರುದ್ಧವಾಗಿ ಮತ ಹಾಕಿದೆಯಾ?

ಅಂದಹಾಗೆ ಇಸ್ರೇಲ್ & ಹಮಾಸ್ ಸಂಘರ್ಷ ಸಂಬಂಧ, ಗಾಜಾದಲ್ಲಿ ಮಾನವೀಯ ನೆಲೆಯ ಆಧಾರದಲ್ಲಿ ಕದನ ವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆಯ ಮಹಾಸಭೆ ನಿರ್ಣಯದಿಂದ ಭಾರತ ಈಗ ಹೊರಗುಳಿದಿದೆ. ಹಾಗೇ ಇದರ ಜೊತೆಗೆ ಭಯೋತ್ಪಾದಕ ಕೃತ್ಯಗಳನ್ನು ಜಗತ್ತು ಸಮರ್ಥನೆ ಮಾಡಿಕೊಳ್ಳಬಾರದು ಅಂತಾ ಕೂಡ ತಿಳಿಸಿದೆ. ಅಷ್ಟಕ್ಕೂ ಈ ಕುರಿತು ಕರಡು ನಿರ್ಣಯ ಮಂಡಿಸಿದ್ದ ದೇಶ ಯಾವುದು? ಯುದ್ಧ ನಿಲ್ಲಿಸಬೇಕು ಎಂದು ಎಷ್ಟು ದೇಶಗಳು ಈಗ ಮತ ಹಾಕಿವೆ? ಯುದ್ಧ ಪರ ಎಷ್ಟು ದೇಶಗಳು ಮತ ಹಾಕಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

un-resolution-seeking-gaza-ceasefire

ಪ್ರಪಂಚ ಯಾರ ಪರವಾಗಿ ನಿಂತಿದೆ?

ಅಂದಹಾಗೆ ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್‌ ಮೇಲೆ 5000ಕ್ಕೂ ಹೆಚ್ಚು ರಾಕೆಟ್‌ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಆದರೆ ಇಸ್ರೇಲ್ ಪ್ರತಿದಾಳಿ ಆರಂಭಿಸಿದ ನಂತರವೇ ಹೆಚ್ಚು ಸಾವುನೋವು ಸಂಭವಿಸಿದೆ ಎಂದು ಆರೋಪಿಸಿ ಅರಬ್ ರಾಷ್ಟ್ರಗಳು ತಿರುಗಿಬಿದ್ದಿವೆ.

ಯುದ್ಧದ ವಿರುದ್ಧ ನಿಂತ ದೇಶಗಳು ಎಷ್ಟು?

ಹೀಗೆ 'ನಾಗರಿಕರ ರಕ್ಷಣೆ, ಕಾನೂನು & ಮಾನವೀಯ ಹೊಣೆಗಾರಿಕೆಯ ಎತ್ತಿಹಿಡಿಯುವುದು' ಎಂಬ ಘೋಷ ವಾಕ್ಯದೊಂದಿಗೆ ಜೋರ್ಡಾನ್ ಮಂಡಿಸಿದ ಕರಡು ನಿರ್ಣಯವನ್ನು ವಿಶ್ವಸಂಸ್ಥೆ ನಿನ್ನೆ ಪ್ರಕಟಿಸಿತ್ತು. ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ನಿರ್ಧಾರಕ್ಕೆ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಯಾಚಿಸಿತ್ತು. ಇದೇ ಆಧಾರದಲ್ಲಿ ಇಂದು ಮತದಾನ ನಡೆದಿದ್ದು, ಯುದ್ಧ ನಿಲ್ಲಿಸಬೇಕು ಅಂತಾ ಹೇಳಿರುವ ದೇಶಗಳು ಎಷ್ಟು? ಯುದ್ಧ ಹೀಗೆ ಮುಂದುವರಿಯಲಿ ಎಂದು ಹೇಳಿರುವ ದೇಶಗಳ ಸಂಖ್ಯೆ ಎಷ್ಟು? ಬನ್ನಿ ಸಂಪೂರ್ಣವಾದ ಮಾಹಿತಿ ತಿಳಿಯೋಣ.

un-resolution-seeking-gaza-ceasefire

ಯಾವ ದೇಶದ ನಿಲುವು ಹೇಗಿದೆ?

ಆಧುನಿಕ ಜಗತ್ತಿಗೆ ಯುದ್ಧ ಬೇಕಿಲ್ಲ, ಅಭಿವೃದ್ಧಿಯೇ ಈಗ ಆಧುನಿಕ ಜಗತ್ತಿನ ಒನ್‌ಲೈನ್ ಅಜೆಂಡ ಎಂಬ ಮಾತು ಇದೆ. ಆದ್ರೆ ರಷ್ಯಾ ಮತ್ತು ಉಕ್ರೇನ್, ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಯುದ್ಧ ಶುರುವಾದ ಬಳಿಕ ಜಗತ್ತಿನ ಹಲವು ದೇಶಗಳು ರಾಗ ಬದಲಿಸಿವೆ. ಈ ಸಮಯದಲ್ಲೇ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ನಿಲ್ಲಿಸಲು ನಡೆದ ವಿಶ್ವಸಂಸ್ಥೆ ಮತದಾನದಲ್ಲಿ, 120 ಸದಸ್ಯ ರಾಷ್ಟ್ರಗಳು ಯುದ್ಧವನ್ನು ನಿಲ್ಲಿಸಬೇಕು ಅಂತಾ ಹೇಳಿದ್ದರೆ, 14 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿವೆ. ಭಾರತವೂ ಸೇರಿದಂತೆ ಒಟ್ಟಾರೆ 45 ದೇಶಗಳು ಈ ನಿರ್ಣಯದಿಂದ ಹೊರಗುಳಿದಿವೆ.

ಭಾರತ ನೀಡಿದ ವಿವರಣೆ ಏನು?

ಅಷ್ಟಕ್ಕೂ ಭಾರತ ಅಳೆದು ತೂಗಿ ಈ ನಿರ್ಣಯ ಕೈಗೊಂಡಿದೆ. ಹಾಗೇ ತನ್ನ ತಟಸ್ಥ ನೀತಿ ಮುಂದುವರಿಸಿ, ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾತು ಈಗ ಕೇಳಿಬಂದಿದೆ. ಇನ್ನು ಈ ಕುರಿತು ಅಂದ್ರೆ ಭಾರತದ ನಿರ್ಧಾರದ ಕುರಿತಾಗಿ ವಿವರಣೆಯನ್ನೂ ನೀಡಲಾಗಿದೆ. ಹಾಗಾದರೆ ಭಾರತ ತನ್ನ ನಿಲುವಿನ ಬಗ್ಗೆ ಹೇಳಿದ್ದು ಏನು? ಮುಂದೆ ಓದಿ.

ಭಾರತದ ಸಹಾಯಕ ಕಾಯಂ ಪ್ರತಿನಿಧಿ ಯೋಜ್ನಾ ಪಟೇಲ್‌ ಅವರು ವಿಶ್ವಸಂಸ್ಥೆ ರಾಯಭಾರ ಕಚೇರಿಗೆ ಈ ಕುರಿತು ವಿವರಣೆ ನೀಡಿದ್ದಾರೆ. ಆ ವಿವರಣೆ ಏನು ಅಂದ್ರೆ 'ಮಾನವೀಯತೆಗೆ ಭಯೋತ್ಪಾದನೆಯೇ ಒಂದು ಪಿಡುಗಾಗಿದ್ದು, ಅದಕ್ಕೆ ಯಾವ ಗಡಿ, ರಾಷ್ಟ್ರೀಯತೆ, ಜನಾಂಗ ಮಿತಿಯಿಲ್ಲ' ಎಂದು ಭಾರತದ ನಿಲುವು ತಿಳಿಸಿದ್ದಾರೆ. ಅಲ್ಲದೆ 'ಭಯೋತ್ಪಾದಕ ಕೃತ್ಯವನ್ನ ಜಗತ್ತು ಸಮರ್ಥನೆ ಮಾಡಿಕೊಳ್ಳಬಾರದು. ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಬದಿಗೆ ಇಟ್ಟು ನಾವೆಲ್ಲ ಒಂದಾಗಬೇಕಿದೆ' ಅಂತಾ ಈಗ ಭಾರತದ ಸಹಾಯಕ ಕಾಯಂ ಪ್ರತಿನಿಧಿ ಯೋಜ್ನಾ ಪಟೇಲ್‌ ಅವರು ವಿಶ್ವಸಂಸ್ಥೆ ರಾಯಭಾರ ಕಚೇರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+