ನಾನು ಬದುಕಿದ್ದೀನಿ ಅಂತಾ ಸೌಂಡ್ ಮಾಡಿದ ಸರ್ವಾಧಿಕಾರಿ!
ಕಿಮ್ ಜಾಂಗ್ ಉನ್ ಏನೇ ಮಾಡಿದ್ರೂ ಒಂದು ಹವಾ ಸೃಷ್ಟಿ ಮಾಡ್ತಾನೆ. ಕಿಮ್ ಕಾಲಿಟ್ಟ ಜಾಗದಲ್ಲಿ ಭೂಕಂಪ ಗ್ಯಾರಂಟಿ ಅನ್ನೋದು ಅವನ ಶತ್ರುಗಳ ಮಾತು. ಅದರಲ್ಲೂ ಕಿಮ್ ಅಬ್ಬರ ಕಂಡ ಅಮೆರಿಕ ಕೂಡ ಒಂದು ಕ್ಷಣ ಬೆಚ್ಚಿಬಿದ್ದು ಒದ್ದಾಡಿತ್ತು. ಹೀಗಿದ್ದಾಗ ಉತ್ತರ ಕೊರಿಯಾ ಕಿಮ್ ನೇತೃತ್ವದಲ್ಲಿ ಉಪಗ್ರಹ ಉಡಾವಣೆಗೆ ಕೂಡ ಸಜ್ಜಾಗಿದೆ ಇಂತಹ ವಾತಾವರಣ ಸೃಷ್ಟಿ ಆಗಿರುವಾಗಲೇ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ!
ಉತ್ತರ ಕೊರಿಯಾ ಪೆಟ್ರೋಲ್ ಇದ್ದಂತೆ, ಶತ್ರುಗಳ ಸಂಖ್ಯೆ ಹೆಚ್ಚಾದಂತೆ ಇನ್ನೂ ಹೆಚ್ಚು ಹೊತ್ತಿ ಉರಿಯುತ್ತದೆ. ಅದರಲ್ಲೂ ಅಮೆರಿಕ, ದಕ್ಷಿಣ ಕೊರಿಯಾ & ಜಪಾನ್ ದೇಶಗಳನ್ನು ಕ್ಷಿಪಣಿಗಳ ಮೂಲಕ ಹೆದರಿಸಿ ಇಟ್ಟಿದ್ದಾನೆ ಕಿಮ್. ಹೀಗಿದ್ದಾಗ ಮತ್ತೆ ಮತ್ತೆ ಅದೇ ದೇಶವನ್ನು ಕೆಣಕಿ, ತಪ್ಪು ಮಾಡ್ತಿರುವ ದೊಡ್ಡಣ್ಣ ಅಮೆರಿಕ, ಪ್ರತಿಯಾಗಿ ಕ್ಷಿಪಣಿ ಪರೀಕ್ಷೆಯ ಉತ್ತರವನ್ನ ಪಡೆಯುತ್ತಿದೆ. ಇಷ್ಟುದಿನ ಬರೀ ಮಿಸೈಲ್ ಮೂಲಕ ಮಾತನಾಡುತ್ತಿದ್ದ ಕಿಮ್ ಜಾಂಗ್ ಉನ್ ಈಗ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದ್ದಾನೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಜಪಾನ್ ಅನುಮಾನ ಏನು?
ಉ.ಕೊರಿಯಾ 2024 ಜೂನ್ 3ರ ಒಳಗೆ ಉಪಗ್ರಹ ಉಡಾವಣೆ ಮಾಡುವ ಯೋಜನೆ ಹೊಂದಿದೆ, ಈ ಬಗ್ಗೆ ನಮಗೆ ಮಾಹಿತಿ ನೀಡಿದೆ ಉತ್ತರ ಕೊರಿಯಾ ಎಂದು ಜಪಾನ್ ಗಂಭೀರ ಆರೋಪವನ್ನ ಮಾಡಿದೆ. ಈಗಾಗಲೇ ಒಮ್ಮೆ ಉತ್ತರ ಕೊರಿಯಾ 'ಗೂಢಚಾರ' ಉಪಗ್ರಹವನ್ನು ಉಡಾವಣೆ ಮಾಡಿತ್ತು. ಇದೀಗ ಮತ್ತೊಂದು ಉಪಗ್ರಹ ಉಡಾವಣೆಗೆ ಮುಂದಾಗಿದೆ ಎನ್ನಲಾಗಿದೆ. ಹೀಗೆ ಉತ್ತರ ಕೊರಿಯಾದ 2ನೇ ಮಿಲಿಟರಿ 'ಗೂಢಚಾರ' ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಕಳುಹಿಸಲು ಈ ಮೂಲಕ ಉತ್ತರ ಕೊರಿಯಾ ಪ್ರಯತ್ನ ಮಾಡುತ್ತಿದೆ ಎಂದು ಜಪಾನ್ ಅನುಮಾನ ಕೂಡ ವ್ಯಕ್ತಪಡಿಸಿದೆ.
ಶತ್ರುಗಳಿಗೆ ಡೈರೆಕ್ಟ್ ವಾರ್ನಿಂಗ್!
ಬೇಡ ಅಂದ್ರೂ ಕೆಣಕುತ್ತಾ, ಸಣ್ಣಪುಟ್ಟ ವಿಷಯಕ್ಕೂ ಸರ್ವಾಧಿಕಾರಿ ವಿರುದ್ಧ ಮಾತನಾಡುತ್ತಾ ಅಮೆರಿಕ ಏನೋ ಎಡವಟ್ಟು ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ನಡುವೆ ಕಿಮ್ ಜಾಂಗ್ ಉನ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಶತ್ರುಗಳಿಗೆ ನೇರ ಎಚ್ಚರಿಕೆ ರವಾನೆ ಮಾಡಿದ್ದಾನೆ. ಅಲ್ಲದೆ ಉಪಗ್ರಹ ಉಡಾವಣೆ ಮೂಲಕ ನಡುಕ ಹುಟ್ಟಿಸಲು ಸಜ್ಜಾಗಿದ್ದಾನೆ.
ಇತ್ತೀಚೆಗಷ್ಟೇ 2024ರಲ್ಲಿ ಉತ್ತರ ಕೊರಿಯಾ ದೇಶ ಒಟ್ಟು 3 ಹೆಚ್ಚುವರಿ ಮಿಲಿಟರಿ ಗೂಢಚಾರ ಉಪಗ್ರಹ ಉಡಾವಣೆ ಮಾಡಲಿದೆ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದ. ಇದೀಗ ನೋಡಿದ್ರೆ ಬೇರೆಯದ್ದೇ ಸ್ಕೆಚ್ ಹಾಕಿರುವಂತಿದೆ ಸರ್ವಾಧಿಕಾರಿ. ಇದು ಸಂಚಲನ ಸೃಷ್ಟಿಸಿದ್ದು, ಮುಂದೆ ಏನಾಗುತ್ತೆ ಅನ್ನೋದೆ ಭಯ ಹುಟ್ಟಿಸುತ್ತಿದೆ.












Click it and Unblock the Notifications