ಅಮೆರಿಕ ನಿಲುವು ಬದಲು, ಭಾರತಕ್ಕೆ ದೇವಯಾನಿ
ವಾಷಿಂಗ್ಟನ್, ಜ.10: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಜತೆ ಅಮಾನವೀಯವಾಗಿ ನಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಅಮೆರಿಕ ತನ್ನ ಧೋರಣೆಯನ್ನು ಬದಲಿಸಿಕೊಂಡಿದೆ.
ವೀಸಾದಲ್ಲಿ ತಪ್ಪು ಮಾಹಿತಿ ನೀಡಿದ್ದ ಆರೋಪ ಎದುರಿಸುತ್ತಿರುವ ಭಾರತೀಯ ರಾಯಭಾರಿ ದೇವಯಾನಿ ಕೋಬ್ರಗಡೆ ಅವರಿಗೆ ರಿಲೀಸ್ ನೀಡಲಾಗಿದ್ದು, ಭಾರತಕ್ಕೆ ತೆರಳಲು ಅಮೆರಿಕ ಅನುಮತಿ ನೀಡಿದೆ.
ಈ ಪ್ರಕರಣದಲ್ಲಿ ಕ್ಷಮೆ ಕೇಳಬೇಕು ಮತ್ತು ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಅಮೆರಿಕಕ್ಕೆ ಭಾರತ ಮಾಡಿದ ಮನವಿ ಕಸದ ಬುಟ್ಟಿಗೆ ಬಿದ್ದಿದೆ. ವೀಸಾದಲ್ಲಿ ತಪ್ಪು ಮಾಹಿತಿ ನೀಡಿದ್ದ ಆರೋಪ ಎದುರಿಸುತ್ತಿರುವ ಭಾರತೀಯ ರಾಯಭಾರಿ ದೇವಯಾನಿ ಕೋಬ್ರಗಡೆ ಅವರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ದೇವಯಾನಿ ಭಾರತಕ್ಕೆ ತೆರಳಲು ಅಮೆರಿಕಾ ಸರ್ಕಾರ ಅನುಮತಿ ನೀಡಿದೆ.

ಈ ಬಗ್ಗೆ ಕಳೆದ ರಾತ್ರಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಭಾರತದ ಮನವಿಗೆ ಸಮ್ಮತಿ ಸೂಚಿಸಿದ್ದಾರೆ. ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಮುಂದುವರೆಸುವ ನಿಟ್ಟಿನಲ್ಲಿ ರಾಜತಾಂತ್ರಿಕ ವಿನಾಯಿತಿ ಆಧಾರದಲ್ಲಿ ದೇವಯಾನಿಗೆ ಅನುಮತಿ ನೀಡಲಾಗಿದೆ.
ಆದರೆ, ಮುಂದಿನ ವಿಚಾರಣೆಗಳಿಗೆ ದೇವಯಾನಿ ಹಾಜರಾಗಬೇಕಾಗುತ್ತದೆ ಎಂದು ಅಮೆರಿಕಾ ತಿಳಿಸಿದೆ. ಮನೆ ಕೆಲಸದಾಕೆ ಸಂಬಳದ ಬಗ್ಗೆ ಅಮೆರಿಕ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದ ಪ್ರಕರಣದಲ್ಲಿ ದೇವಯಾನಿ ಬಂಧನಕ್ಕೊಳಗಾಗಿದ್ದರು. ದೇವಯಾನಿಯ ಬಂಧನದ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ದೇವಯಾನಿಗೆ ಒದಗಿಸಿದ್ದ ರಾಜತಾಂತ್ರಿಕ ರಕ್ಷಣೆಯನ್ನ (ಇಮ್ಯೂನಿಟಿ) ಭಾರತ ಹಿಂಪಡೆಯುವುದಿಲ್ಲವೆಂಬುದು ಖಾತ್ರಿಯಾದ ಮೇಲೆ ಅಮೆರಿಕವು ದೇವಯಾನಿಗೆ ಸ್ವದೇಶಕ್ಕೆ ಮರಳಲು ಅವಕಾಶ ನೀಡಿದೆ.
ದೇವಯಾನಿ ಪ್ರಕರಣದ ಬೆಳವಣಿಗೆಗಳ ಮುಖ್ಯಾಂಶ ಇಲ್ಲಿ ಓದಿ:
* ಭಾರತಕ್ಕೆ ಯುಎಸ್ ರಾಯಭಾರಿ ನ್ಯಾನ್ಸಿ ಪೊವೆಲ್ ಅವರು ವಿದೇಶಾಂಗ ಖಾತೆ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
* ದೇವಯಾನಿ ಜತೆಗಿನ ಅಮಾನವೀಯ ವರ್ತನೆಗೆ ಅಮೆರಿಕ ವಿಷಾದ ವ್ಯಕ್ತಪಡಿಸಿತ್ತು. ಇದನ್ನು ತಿರಸ್ಕರಿಸಿದ್ದ ಭಾರತ, ವಿಷಾದ ವ್ಯಕ್ತಪಡಿಸಿದರೆ ಸಾಲದು ಅಮೆರಿಕ ತನ್ನ ತಪ್ಪಿಗಾಗಿ ಕ್ಷಮೆ ಕೋರಬೇಕು ಎಂದು ಪಟ್ಟುಹಿಡಿದಿದೆ.
* ದೇವಯಾನಿ ವಿರುದ್ಧ ದಾಖಲಿಸಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಕಮಲ್ ನಾಥ್ ಭಾರತ ಒತ್ತಾಯಿಸಿದೆ. ಆದರೆ, ಕಾನೂನು ಪ್ರಕಾರ ವಿಚಾರಣೆ ನಡೆಯಲೇಬೇಕು ಎಂದು ಅಮೆರಿಕ ಹೇಳಿದೆ.
* ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಅಮೆರಿಕ ಕ್ಷಮೆಯಾಚಿಸಲೆ ಬೇಕು ಎಂದು ಒತ್ತಾಯಿಸಿದ್ದಾರೆ.
* ಈ ನಡುವೆ ದೇವಯಾನಿ ಅವರ ಮನೆ ಕೆಲಸಗಾರ್ತಿ ಸಂಗೀತ ರಿಚರ್ಡ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಭಾರತಕ್ಕೆ ಆಕೆ ಕಾಲಿಡುತ್ತಿದ್ದಂತೆ ಬಂಧಿಸುವ ಸಾಧ್ಯತೆಯಿದೆ. ದೆಹಲಿ ಕೋರ್ಟ್ ಸಂಗೀತ ಹಾಗೂ ಆಕೆ ಪತಿ ಫಿಲಿಫ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
* ದೇವಯಾನಿ ತಂದೆ ಉತ್ತಮ್ ಖೋಬ್ರಾಗಡೆ ಅವರು ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯ ಸಿಗದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಹೂಡುವುದಾಗಿ ಹೇಳಿದ್ದಾರೆ.
* ಈ ನಡುವೆ ಸಂಗೀತ ರಿಚರ್ಡ್ ಒಬ್ಬ ಯುಎಸ್ ಗೂಢಚಾರಿಣಿ ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications