"ಪರ್ವೇಜ್ ಮುಷ್ರಪ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ"

Posted By:
Subscribe to Oneindia Kannada

ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ ಎಂದು ಬಲೂಚಿಸ್ತಾನದ ನೈಲಾ ಕ್ವಾದ್ರಿ ಬಲೂಚ್, ಅಮೆರಿಕಕ್ಕೆ ಮನವಿ ಮಾಡಿದ್ದಾರೆ.

ನಾನು ಹಫೀಜ್ ಸಯೀದ್ ನ ದೊಡ್ಡ ಬೆಂಬಲಿಗ : ಮುಷರಫ್

ಇತ್ತೀಚೆಗೆ ತಾನೇ, ತಾವು ಲಷ್ಕರ್ ಇ ತೊಯ್ಬಾ ಭಯೋತ್ಪಾದನಾ ಸಂಘಟನೆಯ ಬೆಂಬಲಿಗೆ ಎನ್ನುವ ಮೂಲಕ ಪರ್ವೇಜ್, ತಾವು ಭಯೋತ್ಪಾದನೆಯ ಬೆಂಬಲಿಗೆ ಎಂಬುದನ್ನು ಸಾಬೀತುಪಡಿಸಿದ್ದರು. ಮಾತ್ರವಲ್ಲ, ಉಗ್ರ ಹಫೀಜ್ ಸಯ್ಯದ್ ಅಂದರೆ ತನಗೆ ಅಚ್ಚುಮೆಚ್ಚು ಎಂದು ಸಹ ಘಂಟಾಘೋಷವಾಗಿ ಹೇಳಿದ್ದ ಪರ್ವೇಜ್ ನಡೆ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

Declare Pervez Musharraf a global terrorist: Naela Quadri Baloch writes to US

'ಮಾಜಿ ಸರ್ವಾಧಿಕಾರಿ ಮುಷ್ರಫ್ ಕಾಲದಲ್ಲಿ ಸಾವಿರಾರು ಬಲೂಚಿ ಪ್ರಜೆಗಳ ಮಾರಣಹೋಮ ನಡೆಯಿತು. ಆತ ಮಾನವೀಯತೆಯ ವಿರುದ್ಧ ಸಮರ ಸಾರಿದವನು. ಆದ್ದರಿಂದ ಅವನನ್ನು ಮೊದಲು ಜಾಗತಿಕ ಉಗ್ರ ಎಂದು ಘೋಷಿಸಿ' ಎಂದು ನೈಲಾ ಕ್ವಾದ್ರಿ ಬಲೂಚ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Declare Pervez Musharraf a global terrorist, the head of the World Baloch Women Forum Naela Quadri Baloch told to US.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ