ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಆಕ್ಸಿಜನ್ ಸಿಲಿಂಡರ್ ಸೇರಿ ಇತರೆ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಕೆ ಮಾಡಿದ ತೈವಾನ್

|
Google Oneindia Kannada News

ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಹಲವು ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ.

ತೈವಾನ್ ಭಾನುವಾರ 150 ಆಕ್ಸಿಜನ್ ಸಾಂದ್ರಕಗಳು ಮತ್ತು 500 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಸಿದೆ. ಭಾರತ ಮತ್ತು ತೈವಾನ್ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಸದೃಢವಾಗಿರಲಿ ಎಂದು ತೈವಾನ್ ಸರ್ಕಾರದ ಪರವಾಗಿ ಹಾರೈಸುವುದಾಗಿ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ಹೇಳಿದೆ.

ಮೊದಲ ಹಂತದಲ್ಲಿ 150 ಆಕ್ಸಿಜನ್ ಸಾಂದ್ರಕಗಳು ಹಾಗೂ 500 ಆಕ್ಸಿಜನ್ ಸಿಲಿಂಡರ್ ಗಳು ಇಂದು ನವದೆಹಲಿಗೆ ಆಗಮಿಸಿದ್ದು, ಇನ್ನೂ ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಶೀಘ್ರದಲ್ಲಿಯೇ ಭಾರತಕ್ಕೆ ಪೂರೈಸಲಾಗುವುದು ಎಂದು ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ಹೇಳಿದೆ.

COVID-19: Taiwan Delivers Oxygen Concentrators, Cylinders To India

ಉಜ್ಬೇಕಿಸ್ತಾನ್ 100 ಆಕ್ಸಿಜನ್ ಸಾಂದ್ರಕಗಳು, ರೆಮ್‌ಡೆಸಿವಿರ್ ಮತ್ತಿತರ ಔಷಧಿಯನ್ನು ಭಾರತಕ್ಕೆ ಪೂರೈಕೆ ಮಾಡಿದೆ. ಕೋವಿಡ್-19 ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಐರ್ಲೆಂಡ್, ಬೆಲ್ಜಿಯಂ, ರೊಮಾನಿಯಾ, ಲಕ್ಸೆಂಬರ್ಗ್, ಸಿಂಗಾಪುರ, ಪೋರ್ಚುಗಲ್, ಸ್ವೀಡನ್, ನ್ಯೂಜಿಲೆಂಡ್, ಕುವೈತ್, ಮಾರಿಷಿಯಸ್ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಭಾರತಕ್ಕೆ ನೆರವನ್ನು ನೀಡುತ್ತಿವೆ. ಹಲವು ರಾಷ್ಟ್ರಗಳು ಈಗಾಗಲೇ ವೈದ್ಯಕೀಯ ಸಲಕರಣೆಗಳನ್ನು ಪೂರೈಸಿವೆ.

Recommended Video

ಮಸ್ಕಿ ಗೆಲುವಿನ ನಂತರ ಮಾತಾಡಿದ ಕೆಪಿಸಿಸಿ ಅಧ್ಯಕ್ಷ !!

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಸದೃಢವಾದ ಸ್ನೇಹತ್ವ ಹೊಂದಿರುವ ಭಾರತಕ್ಕೆ ತೈವಾನ್ ವೈದ್ಯಕೀಯ ಸಲಕರಣೆಗೆಳನ್ನು ಪೂರೈಸಿದೆ. ಇನ್ನೂ ಹೆಚ್ಚಿನ ವೈದ್ಯಕೀಯ ನೆರವನ್ನು ಒದಗಿಸಲಾಗುವುದು ಎಂದು ಭಾರತದಲ್ಲಿ ತೈವಾನ್ ಪ್ರತಿನಿಧಿಸುವ ಕಚೇರಿ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ತಿಳಿಸಿದೆ.

English summary
Taiwan on Sunday delivered to India 150 oxygen concentrators and 500 oxygen cylinders to assist the country in its fight against a devastating second wave of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X