• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭ್ರಷ್ಟಾಚಾರ ಕೇಸ್: ವಿಚಾರಣೆ ಎದುರಿಸಿ ದಾಖಲೆ ಬರೆದ ಇಸ್ರೇಲ್ ಪ್ರಧಾನಿ

|

ಜೆರುಸಲೇಮ್, ಮೇ 25: ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೊಬ್ಬರ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸಿದ ಘಟನೆ ನಡೆದಿದೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಭ್ರಷ್ಟಾಚಾರ, ಮೋಸ, ನಂಬಿಕೆ ದ್ರೋಹ ಪ್ರಕರಗಳು ದಾಖಲಾಗಿದೆ. ದೇಶದ ರಾಜಕೀಯ ಅಸ್ಥಿರತೆ ನಡುವೆ ವಿಚಾರಣೆ ಎದುರಿಸಿದ್ದಾರೆ.

ಇಸ್ರೇಲಿನಲ್ಲಿ ಅತಿ ಹೆಚ್ಚು ಅವಧಿ(1996-1999 ಹಾಗೂ 2009ರಿಂದ ಇಲ್ಲಿ ತನಕ) ಪ್ರಧಾನಿ ಹುದ್ದೆ ಹೊಂದಿರುವ 70 ವರ್ಷ ವಯಸ್ಸಿನ ನೇತನ್ಯಾಹು ಅವರು ಇಸ್ರೇಲಿನ ಕಾನೂನು ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ವಿರುದ್ಧ ಭ್ರಷ್ಟಾಚಾರ, ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಇಸ್ರೇಲ್‌ನಲ್ಲಿ ರಾಜಕೀಯ ಅಸ್ಥಿರತೆ: ವರ್ಷದಲ್ಲೇ 3ನೇ ಚುನಾವಣೆ?

ಜೆರುಸಲೇಂ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ಫೇಸ್ ಮಾಸ್ಕ್ ಧರಿಸಿ ನಿಂತಿದ್ದ ನೇತನ್ಯಾಹು ಅವರು ಕುಳಿತುಕೊಳ್ಳದೆ ವಿಚಾರಣೆ ಎದುರಿಸಿದರು ಎಂದು ತಿಳಿದು ಬಂದಿದೆ. ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಲಾಗಿದೆ.

ಇಸ್ರೇಲ್ ಕಾನೂನು ಇಲಾಖೆ ಆಂತರಿಕ ವಿಚಾರಣೆ ಹಾಗೂ ಅಟಾರ್ನಿ ಜನರಲ್ ಪರಿಶೀಲನೆ ಬಳಿಕ ನೇತನ್ಯಾಹು ವಿರುದ್ಧ ತನಿಖೆಗೆ ಹಸಿರು ನಿಶಾನೆ ನೀಡಲಾಗಿತ್ತು.

ಮೂರು ಪ್ರಕರಣಗಳಲ್ಲಿ ನೇತನ್ಯಾಹು ಆರೋಪಿ

ಮೂರು ಪ್ರಕರಣಗಳಲ್ಲಿ ನೇತನ್ಯಾಹು ಆರೋಪಿ

ಮೂರು ಪ್ರಕರಣಗಳಲ್ಲಿ ನೇತನ್ಯಾಹು ಹಾಗೂ ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಉದ್ದಿಮೆದಾರರಿಂದ ಸಾವಿರಾರು ಡಾಲರ್ ಮೌಲ್ಯದ ಐಷಾರಾಮಿ ವಸ್ತುಗಳನ್ನು ಹಾಗೂ ಲಂಚವನ್ನು ಪಡೆದಿದ್ದಾರೆ ಎಂಬ ಆರೋಪವನ್ನು ಅಟಾರ್ನಿ ಜನರಲ್ ಹೊರಿಸಿದ್ದಾರೆ.

* ಮುಖ್ಯವಾಗಿ ಸಿಗಾರ್, ಶಾಂಪೇನ್ ಬಾಟಲಿಗಳನ್ನು ಪಡೆದು ಅದಕ್ಕೆ ಪ್ರತಿಯಾಗಿ ಉದ್ದಿಮೆದಾರರಿಗೆ ಅಕ್ರಮವಾಗಿ ನೆರವಾಗಿದ್ದಾರೆ.

* ಇಸ್ರೇಲಿನ ಸುದ್ದಿ ಪತ್ರಿಕೆ ಯೆದಿಯೊಟ್ ಅಹ್ರೊನೊಟ್ ನಲ್ಲಿ ಹೂಡಿಕೆ ಮಾಡಿ, ಸರ್ಕಾರದ ಬಗ್ಗೆ ಒಳ್ಳೆ ಪ್ರಚಾರ ಕೊಟ್ಟು ಸುದ್ದಿ ಪ್ರಕಟಿಸುವಂತೆ ನೋಡಿಕೊಂಡಿದ್ದಾರೆ.

* ಬೆಜೆಗ್ ಟೆಲಿಕಾಂ ಶಾಯಲ್ ಎಲೊವಿಚ್ ಷೇರುದಾರರನ್ನು ನಿಯಂತ್ರಿಸಿದ್ದು, ಸಂಸ್ಥೆ ಬಗ್ಗೆ ಪ್ರಚಾರ

ರಾಜಕೀಯ ಅಸ್ಥಿರತೆ, ಮರು ಚುನಾವಣೆ ಭೀತಿ

ರಾಜಕೀಯ ಅಸ್ಥಿರತೆ, ಮರು ಚುನಾವಣೆ ಭೀತಿ

ರಾಜಕೀಯ ಅಸ್ಥಿರತೆ ಹಿನ್ನಲೆಯಲ್ಲಿ ಸತತ ಮೂರನೇ ಚುನಾವಣೆಯತ್ತ ಹೆಜ್ಜೆಯಿಡುತ್ತಿದೆ ಎನ್ನುವ ಸಂದರ್ಭದಲ್ಲಿ ನೇತನ್ಯಾಹು ಅವರ ಆಡಳಿತಾರೂಢ ಲಿಕುಡ್ ಪಕ್ಷ ವು ಅಧಿಕಾರವನ್ನು ಉಳಿಸಿಕೊಂಡಿದೆ. ಬೆನ್ನಿ ಗಾಂಟ್ಜ್ ಜೊತೆ 18 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡಿರುವ ನೇತನ್ಯಾಹು ಸರ್ಕಾರ ಉಳಿಸಿಕೊಂಡಿದ್ದಲ್ಲದೆ, ರಾಜೀನಾಮೆ ನೀಡದೆ ವಿಚಾರಣೆ ಎದುರಿಸಿದ್ದಾರೆ. ಮೂರನೇ ಬಾರಿಗೆ ಚುನಾವಣೆ ಎದುರಿಸುವುದು ವಿಪಕ್ಷಗಳಿಗೂ ಬೇಡವಾಗಿದೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

ಆರೋಪ ಎದುರಿಸಿದರೂ ಪ್ರಧಾನಿ ರಾಜೀನಾಮೆ ಇಲ್ಲ

ಆರೋಪ ಎದುರಿಸಿದರೂ ಪ್ರಧಾನಿ ರಾಜೀನಾಮೆ ಇಲ್ಲ

ಇಸ್ರೇಲಿನ ಕಾನೂನು ಪ್ರಕಾರ, ಇಂಥ ಆರೋಪ ಎದುರಿಸಿದರೂ ಪ್ರಧಾನಿ ಸ್ಥಾನದಲ್ಲಿರುವವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಒಂದು ವೇಳೆ ಆರೋಪ ಸಾಬೀತಾದರೂ ರಾಜೀನಾಮೆ ಸಲ್ಲಿಸಬೇಕಾಗಿಲ್ಲ. 2009ರಲ್ಲಿ ಮಾಜಿ ಪ್ರಧಾನಿ ಎಹುದ್ ಓಮೆರ್ಟ್ ಇದೆ ರೀತಿ ಆರೋಪ ಎದುರಿಸಿ ಅಪರಾಧಿ ಎನಿಸಿಕೊಂಡರೂ ಶಿಕ್ಷೆ ಪಡೆದುಕೊಂಡಿದ್ದು 2016ರಲ್ಲಿ ಎಂದರೆ ಕಾನೂನು ಪ್ರಕ್ರಿಯೆ ಎಷ್ಟು ವಿಳಂಬ ಎಂಬುದನ್ನು ಮನಗಾಣಬಹುದು.

ಬ್ಲ್ಯೂ ಅಂಡ್ ವೈಟ್ ನಾಯಕರಿಗೆ ಟಾಂಗ್

ಬ್ಲ್ಯೂ ಅಂಡ್ ವೈಟ್ ನಾಯಕರಿಗೆ ಟಾಂಗ್

ಪ್ರತಿಪಕ್ಷ ಬ್ಲ್ಯೂ ಅಂಡ್ ವೈಟ್ ನಾಯಕರು ನೇತನ್ಯಾಹು ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನೇ ಚುನಾವಣೆ ವಿಚಾರವನ್ನಾಗಿ ಮಾಡಿಕೊಂಡಿದ್ದರು. ಬಹುಮತ ಸಾಬೀತ ಪಡಿಸಲು ಸಾಧ್ಯವಾಗದಂತೆ ನೋಡಿಕೊಂಡಿದ್ದರು. ಭ್ರಷ್ಟಾಚಾರದ ಆರೋಪ ಹೊತ್ತಕೊಂಡ ನೇತನ್ಯಾಹು ರಾಜೀನಾಮೆ ನೀಡಬಹುದು ಎಂದು ವಿಪಕ್ಷ ನಾಯಕ ಯಾಯಿರ್ ಕೂಡಾ ನಿರೀಕ್ಷಿಸಿದ್ದರು. ಆದರೆ, ನೇತನ್ಯಾಹು ವಿಚಾರಣೆ ಎದುರಿಸಿ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ.

English summary
Corruption trial: Prime Minister Benjamin Netanyahu lambasted Israel's justice system as he becomes first serving Israeli PM to face criminal charges as he goes on trial over corruption allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more