• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಬ್ಯಾಂಕ್‌ನಿಂದ ಕೊರೊನಾ ಪೀಡಿತ ದೇಶಗಳಿಗೆ ಆರ್ಥಿಕ ನೆರವು

|

ಬೆಂಗಳೂರು, ಮಾರ್ಚ್ 04 : ಕೊರೊನಾ ವೈರಸ್ ಹಬ್ಬಿರುವ ದೇಶಗಳಿಗೆ ವಿಶ್ವಬ್ಯಾಂಕ್ ಆರ್ಥಿಕ ನೆರವನ್ನು ಘೋಷಣೆ ಮಾಡಿದೆ. ಪ್ರಪಂಚದಾದ್ಯಂತ ಇದುವರೆಗೂ 3202 ಜನರು ಕೊರೊನಾಗೆ ಬಲಿಯಾಗಿದ್ದಾರೆ. 93,158 ಪ್ರಕರಣಗಳು ದಾಖಲಾಗಿವೆ.

ವಿಶ್ವಬ್ಯಾಂಕ್ ಒಟ್ಟು 12 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೀಡಲಿದೆ. ತುರ್ತು ಚಿಕಿತ್ಸೆ, ಮಾರ್ಗಸೂಚಿ ರಚನೆ, ತಾಂತ್ರಿಕ ಸಹಾಯಗಳಿಗಾಗಿ ಈ ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ.

ಕೊರೊನಾ; ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು, ಸಚಿವರ ಟ್ವೀಟ್

ವಿಶ್ವದಾದ್ಯಂತ ಚೀನಾ ಹೊರತುಪಡಿಸಿ 74 ದೇಶಗಳಲ್ಲಿ ಕೊರೊನಾ ವೈರಸ್ ಹರಡಿದೆ. ಒಟ್ಟು 93, 158 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಚೀನಾ ಒಂದರಲ್ಲಿಯೇ 80,261 ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ ಕೊರೊನಾ: ಹಂಪಿಯಲ್ಲಿ ಪ್ರವಾಸಿಗರ ಪರಿಶೀಲನೆ

ಬುಧವಾರ ಮುಂಜಾನೆ ವೇಳೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3202. ಇದರಲ್ಲಿ ಚೀನಾದಲ್ಲಿ 2947 ಜನರು ಮೃತಪಟ್ಟಿದ್ದಾರೆ. ಇರಾನ್‌ನಲ್ಲಿ 77, ಇಟಲಿಯಲ್ಲಿ 52, ದಕ್ಷಿಣ ಕೊರಿಯಾದಲ್ಲಿ 28, ಜಪಾನ್‌ನಲ್ಲಿ 13, ಅಮೆರಿಕದಲ್ಲಿ 6, ಫ್ರಾನ್ಸ್‌ನಲ್ಲಿ 3 ಜನರು ಮೃತಪಟ್ಟಿದ್ದಾರೆ.

ಪರಿಷತ್ ಅಧಿವೇಶನದಲ್ಲೂ ಕಾಡಿದ ಕೊರೊನಾ ವೈರಸ್ ಆತಂಕ

ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ವಿಶ್ವಸಂಸ್ಥೆಯ 64ನೇ ವಾರ್ಷಿಕ ಅಧಿವೇಶನದ ಮೇಲೆಯೂ ಪರಿಣಾಮ ಬೀರಿದೆ. ಮಾರ್ಚ್ 9ರಿಂದ 20ರ ತನಕ ನಡೆಯಬೇಕಿದ್ದ ಅಧಿವೇಶನವನ್ನು ಒಂದು ದಿನಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ.

English summary
World Bank announced $12 billion in immediate support for countries suffering from Coronavirus. This package will include emergency financing, policy advice and technical assistance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X