ಫೆ.14ರವರೆಗೂ ಬ್ರಿಟನ್ ವಿಮಾನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ
ನವದೆಹಲಿ, ಜನವರಿ.27: ರೂಪಾಂತರ ಕೊರೊನಾವೈರಸ್ ಸೋಂಕಿನ ಭೀತಿ ಹಿನ್ನೆಲೆ ಇಂಗ್ಲೆಂಡ್ ನಿಂದ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಫೆಬ್ರವರಿ.14ರವರೆಗೂ ವಿಸ್ತರಿಸಲಾಗಿದೆ.
ಬ್ರಿಟಿಷ್ ವಿಮಾನಯಾನ, ವರ್ಜಿನ್ ಅಟ್ಲಾಂಟಿಕಾ ವಿಮಾನಯಾನ ಮತ್ತು ಭಾರತದ ಸಹಕಾರಿ ವಿಮಾನಯಾನ ಸಚಿವಾಲಯವು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಫೆಬ್ರವರಿ.14ರವರೆಗೂ ಭಾರತ ಮತ್ತು ಬ್ರಿಟನ್ ನಡುವಿನ ವಿಮಾನಯಾನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕೇಂದ್ರ ವಿಮಾನಯಾನ ಸಚಿವಾಲಯದ ಪ್ರಕಾರ, ಎರಡು ರಾಷ್ಟ್ರಗಳ ನಡುವೆ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಿಲ್ಲ. ಅದರ ಬದಲಿಗೆ ನಿಗದಿತ ಪ್ರಮಾಣದಲ್ಲಿ ಮಾತ್ರ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ವಾರದಲ್ಲಿ 30 ವಿಮಾನಗಳ ಸಂಚಾರಕ್ಕೆ ಅನುಮತಿ:
ಭಾರತ ಮತ್ತು ಇಂಗ್ಲೆಂಡ್ ನಡುವೆ ವಾರದಲ್ಲಿ 30 ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈ ಪೈಕಿ 15 ವಿಮಾನಗಳು ಭಾರತದಿಂದ ಇಂಗ್ಲೆಂಡ್ ಗೆ ತೆರಳಿದರೆ, 15 ವಿಮಾನಗಳು ಇಂಗ್ಲೆಂಡ್ ನಿಂದ ಭಾರತಕ್ಕೆ ಸಂಚರಿಸಲಿವೆ. ಪ್ರಸ್ತುತ ದೆಹಲಿ, ಮುಂಬೈ, ಹೈದ್ರಾಬಾದ್ ಮತ್ತು ಬೆಂಗಳೂರಿನಿಂದ ಮಾತ್ರ ಇಂಗ್ಲೆಂಡ್ ಗೆ ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸುವುದಕ್ಕೆ ಅವಕಾಶ ನೀಡಲಾಗಿದೆ.












Click it and Unblock the Notifications