ಹುಷಾರ್..! ನಿಮ್ಮ ಮನೆ ಬೆಕ್ಕು, ನಾಯಿಗೂ ಅಟ್ಯಾಕ್ ಆಗುತ್ತೆ ಡೆಡ್ಲಿ ಕೊರೊನಾ..!
ಕೊರೊನಾ ಬರೀ ಮನುಷ್ಯರಿಗೆ ಮಾತ್ರ ಬರುತ್ತಾ..? ಈ ಪ್ರಶ್ನೆಗೆ ಈಗಾಗಲೇ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಪ್ರಾಣಿಗಳೂ 'ಕೊರೊನಾ' ಸೋಂಕಿನಿಂದ ಜೀವ ಬಿಟ್ಟಿವೆ. ಅದೆಲ್ಲಾ ಬಿಡಿ, ಈಗ ಇನ್ನೊಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಾರೆ ನೆದರ್ಲ್ಯಾಂಡ್‌ನ ಸಂಶೋಧಕರು. ಬೆಕ್ಕು, ನಾಯಿ ಸೇರಿದಂತೆ ಸಾಕು ಪ್ರಾಣಿಗಳಿಗೆ ಬೇಗನೆ ಕೊರೊನಾ ಸೋಂಕು ಅಟ್ಯಾಕ್ ಆಗುತ್ತೆ ಅಂತಾ ಎಚ್ಚರಿಕೆ ನೀಡಲಾಗಿದೆ.
ಕೊರೊನಾ ಸೋಂಕಿತರ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದರೆ ಹುಷಾರಾಗಿ ಇರಬೇಕು, ಮೈಮರೆತರೆ ಅವರ ಜೊತೆಗೆ ಅವರ ಮುದ್ದಿನ ಪ್ರಾಣಿಗೂ ಕಂಟಕ ಎದುರಾಗುತ್ತದೆ ಎನ್ನಲಾಗಿದೆ. 310 ಪ್ರಾಣಿಗಳ ಸ್ವ್ಯಾಬ್ ಪರೀಕ್ಷೆ ನಡೆಸಿದಾಗ 196 ಸಾಕು ಪ್ರಾಣಿಗಳಲ್ಲಿ ಮನಷ್ಯರಿಂದ ಕೊರೊನಾ ನಂಜು ಹಬ್ಬಿರುವುದು ಕನ್ಫರ್ಮ್ ಆಗಿದೆ.
ಕೊರೊನಾ ವೈರಸ್ ವೇಗವಾಗಿ ಹಾಗೂ ಅತ್ಯಂತ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದರೆ ಮೊದಲು ಕೊರೊನಾ ಪ್ರಾಣಿಗಳಿಗೆ ಹರಡಲು ಸಾಧ್ಯವಿಲ್ಲ ಅಂತಾ ವಾದಿಸಲಾಗುತ್ತಿತ್ತು.
ನಂತರ ನಡೆದ ಸಂಶೋಧನೆಗಳಲ್ಲಿ ಭಯಾನಕ ಸಂಗತಿಗಳು ರಿವೀಲ್ ಆಗಿತ್ತು. ಈಗಾಗಲೇ ಲಕ್ಷ ಲಕ್ಷ ಪ್ರಾಣಿಗಳು ಕೊರೊನಾ ಸೋಂಕಿನಿಂದ ಪ್ರಾಣಬಿಟ್ಟಿವೆ. ಅದರಲ್ಲೂ ಡೆನ್ಮಾರ್ಕ್ ದೇಶದಲ್ಲಿ ನಡೆದಿದ್ದ ಮಿಂಕ್ ಎಂಬ ಸ್ಥನಿಗಳ ಮಾರಣಹೋಮ ಜಗತ್ತನ್ನೇ ಭಾವುಕರನ್ನಾಗಿಸಿತ್ತು.

ಡೆನ್ಮಾರ್ಕ್ ಸರ್ಕಾರ ಕೋಟ್ಯಂತರ ಮಿಂಕ್‌ಗಳನ್ನ ಹತ್ಯೆ ಮಾಡಿತ್ತು
ಪೀಡೆ ಕೊರೊನಾ ಭೂಮಿಗೆ ಬಂದು ಅಪ್ಪಳಿಸಿದ ಬಳಿಕ ಮಾನವರು ಅನುಭವಿಸಿದಷ್ಟೇ ತೊಂದರೆಗಳನ್ನ ಪ್ರಾಣಿ ಸಂಕುಲ ಕೂಡ ಅನುಭವಿಸಿದೆ. ಅದರಲ್ಲೂ ಡೆನ್ಮಾರ್ಕ್ ಮಿಂಕ್ ಉದ್ಯಮ ಅಕ್ಷರಶಃ ಬೀದಿಗೆ ಬಿದ್ದಿದೆ. ಮಿಂಕ್ ಎಂಬ ಪುಟಾಣಿ ಸ್ತನಿಗಳ ಮೂಲಕ ಕೊರೊನಾ ವೈರಸ್ ಸುಲಭವಾಗಿ ಹರಡುತ್ತದೆ ಎಂಬುದು ತಿಳಿಯುತ್ತಿದ್ದಂತೆ ಡೆನ್ಮಾರ್ಕ್ ಸರ್ಕಾರ ಕೋಟ್ಯಂತರ ಮಿಂಕ್‌ಗಳನ್ನ ಹತ್ಯೆ ಮಾಡಿತ್ತು. ಹೀಗೆ ಹತ್ಯೆ ಮಾಡಿ ಮಿಂಕ್‌ಗಳನ್ನ ಹೂತು ಹಾಕಿತ್ತು. ಆದರೆ ಕಳೆದ ತಿಂಗಳು ಹೊಸ ಸಮಸ್ಯೆ ಶುರುವಾಗಿತ್ತು. ಕೊಲೆ ಮಾಡಿದ್ದ ಮಿಂಕ್‌ಗಳು ಭೂತದ ರೀತಿ ಸಮಾಧಿಯಿಂದ ಹೊರಬಂದು, ಮಾಲಿನ್ಯಕ್ಕೆ ಕಾರಣವಾಗಿದ್ದವು.

ಮಿಂಕ್‌ಗಳ ಕೊಳೆತ ದೇಹದಿಂದ ಬೇರೆ ರೋಗ
ಕೊರೊನಾ ಕಾರಣಕ್ಕೆ ಜಗತ್ತಿನಲ್ಲಿ ಯುರೋಪ್ ಹಾಗೂ ಅಮೆರಿಕ ಎದುರಿಸಿದಷ್ಟು ಸಂಕಷ್ಟವನ್ನು ಬೇರಾವುದೇ ದೇಶಗಳು ಕಂಡಿಲ್ಲ. ಕೊರೊನಾ ಹರಡುವ ಮುನ್ನ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ರಾಷ್ಟ್ರಗಳು ಬಡತನದ ಬೇಗೆಯಲ್ಲಿ ನರಳುತ್ತಿವೆ. ಇದೇ ರೀತಿ ಡೆನ್ಮಾರ್ಕ್ ಜನರ ಬದುಕು ಬೀದಿಗೆ ಬಿದ್ದಿದೆ. ಅದರಲ್ಲೂ ರೈತರ ಪಾಡು, ಅದರಲ್ಲೂ ಮಿಂಕ್ ಉದ್ಯಮ ನಡೆಸುತ್ತಿದ್ದ ಕೃಷಿಕರ ಪಾಡು ಶತ್ರುಗೂ ಬೇಡ ಎಂಬಂತಿದೆ. ಇಂತಹ ಹೊತ್ತಲ್ಲೇ ಕೊರೊನಾ ಕೂಡ ಪೂರ್ಣ ಮರೆಯಾಗಿಲ್ಲ, ಹಿಡಿತಕ್ಕೆ ಸಿಕ್ಕಿಲ್ಲ. ಇಷ್ಟೆಲ್ಲಾ ಕಷ್ಟಗಳು ಇರುವಾಗಲೇ ಮಿಂಕ್‌ಗಳ ಕೊಳೆತ ದೇಹದಿಂದ ಬೇರೆ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸ್ಥಳೀಯರನ್ನ ಕಾಡುತ್ತಿದೆ.

ಮಿಂಕ್ ಪ್ರಾಣಿಗಳಿಂದ ಕೊರೊನಾ
ಅಮೆರಿಕದಲ್ಲಿ ನಡೆದಿದ್ದ ಅಧ್ಯಯನದ ವರದಿ ಆಧಾರದಲ್ಲಿ ಮಿಂಕ್ ಪ್ರಾಣಿಗಳಿಂದ ಕೊರೊನಾ ಹರಡುವುದು ದೃಢವಾಗಿತ್ತು. ಈ ವರದಿ ತನ್ನ ಕೈಸೇರಿದ ತಕ್ಷಣ ತಡಮಾಡದ ಡೆನ್ಮಾರ್ಕ್ ಸರ್ಕಾರ ಸುಮಾರು 1 ಕೋಟಿ 70 ಲಕ್ಷ ಮಿಂಕ್‌ಗಳನ್ನ ಕೊಂದು ಹಾಕಿತ್ತು. ಆದರೆ ಸರ್ಕಾರದ ಕ್ರಮವೇ ಹೊಸ ಸಮಸ್ಯೆಗೆ ಕಾರಣವಾಗಿದೆ. ಹೀಗೆ ಕೋಟ್ಯಂತರ ಮಿಂಕ್‌ಗಳನ್ನು ಹೂತು ಹಾಕಿದ ಪ್ರದೇಶದಲ್ಲಿ ಹೊಸ ಆತಂಕ ಎದುರಾಗಿದೆ. ಗುಂಡಿಯಲ್ಲಿ ಹೂತಿರುವ ಕೋಟ್ಯಂತರ ಮಿಂಕ್ ಸ್ತನಿಗಳು ಈಗ ಸಮಾಧಿಯಿಂದ ಹೊರಬರುತ್ತಿವೆ. ಮಿಂಕ್‌ಗಳ ದೇಹದಿಂದ ಬಿಡುಗಡೆಯಾಗುತ್ತಿರುವ ಗ್ಯಾಸ್ ಈ ಪ್ರಕ್ರಿಯೆಗೆ ಕಾರಣವಾಗಿದೆ ಎನ್ನಲಾಗಿದೆ. ಡೆನ್ಮಾರ್ಕ್ ಶೀತ ವಲಯದ ಪ್ರದೇಶ, ಹೀಗಾಗಿ ಹೆಚ್ಚು ಚಳಿ ಇರುತ್ತದೆ. ಹೀಗೆ ಚಳಿ ಇರುವ ಪ್ರದೇಶಗಳಲ್ಲಿ ಪ್ರಾಣಿಗಳ ದೇಹ ಅಷ್ಟು ಬೇಗ ಕೊಳೆಯುವುದಿಲ್ಲ. ಈಗ ಆಗಿರುವುದೂ ಅದೇ. ಮಣ್ಣು ಮಾಡಿ ತಿಂಗಳಾದರೂ ಅರ್ಧಂಬರ್ಧ ಕೊಳೆತಿರುವ ಮಿಂಕ್‌ಗಳ ದೇಹವನ್ನು ಅದೇ ಮಿಂಕ್‌ಗಳ ದೇಹದಿಂದ ಬಿಡೆಗಡೆ ಆಗುತ್ತಿರುವ ಗ್ಯಾಸ್ ಹೊರಗೆ ತಳ್ಳುತ್ತಿದೆ.

ಮಿಂಕ್‌ಗಳ ಉಪಯೋಗ ಏನು ಎಂಬ ಪ್ರಶ್ನೆ
ಜಗತ್ತಿನಾದ್ಯಂತ ಅತಿಹೆಚ್ಚು ಮಿಂಕ್ ಸ್ತನಿಗಳನ್ನ ರಫ್ತು ಮಾಡುವ ದೇಶ ಡೆನ್ಮಾರ್ಕ್. ಅಷ್ಟಕ್ಕೂ ಈ ಮಿಂಕ್‌ಗಳ ಉಪಯೋಗ ಏನು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಮಿಂಕ್‌ಗಳ ತುಪ್ಪಳ ಅಂದರೆ ಅವುಗಳ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಈ ಚರ್ಮದಿಂದ ಕೋಟ್, ಬ್ಯಾಗ್ ಹೀಗೆ ವಿವಿಧ ರೀತಿ ವಸ್ತುಗಳನ್ನು ತಯಾರಿಸುತ್ತಾರೆ. ಒಂದೊಂದು ಮಿಂಕ್‌ನ ಚರ್ಮಕ್ಕೂ ಲಕ್ಷಾಂತರ ರೂಪಾಯಿ ಬೆಲೆ ಇದೆ. ಡೆನ್ಮಾರ್ಕ್‌ನ ವಾತಾವರಣ ಮಿಂಕ್ ಸಾಕಾಣಿಕೆಗೆ ಉತ್ತಮ ಪರಿಸರ ಒದಗಿಸಿದೆ. ಹೀಗಾಗಿ ಅಲ್ಲಿ ಮಿಂಕ್ ಸಾಕಾಣಿಕೆ ಬಹುದೊಡ್ಡ ಉದ್ಯೋಗವನ್ನೂ ಒದಗಿಸಿಕೊಟ್ಟಿದೆ. ಆದರೆ ಕೊರೊನಾ ಕಾರಣಕ್ಕೆ ಮಿಂಕ್‌ಗಳ ಹತ್ಯೆ ಮಾಡಿದ್ದು, ಮಿಂಕ್ ಸಾಕಾಣಿಕೆ ಉದ್ಯಮದ ಬೆನ್ನೆಲುಬನ್ನೇ ಮುರಿದಿದೆ. ಇನ್ನು ವಾಸ್ತವ ಪರಿಶೀಲನೆಗೆ ಅಂತಾ ಮಿಂಕ್ ಸಾಕಾಣಿಕೆದಾರರ ಜಮೀನಿಗೆ ಭೇಟಿ ನೀಡಿದ್ದ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, ರೈತರ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ್ದರು.

ಡೆನ್ಮಾರ್ಕ್ ಮಿಂಕ್ ಉದ್ಯಮವನ್ನು ಅವಲಂಬಿಸಿದೆ
ಭಾರತದಲ್ಲಿ ಹೈನುಗಾರಿಕೆ ರೀತಿಯಲ್ಲೇ ಡೆನ್ಮಾರ್ಕ್ ಮಿಂಕ್ ಉದ್ಯಮವನ್ನು ಅವಲಂಬಿಸಿದೆ. ಯುರೋಪ್‌ನಲ್ಲಿ ಮಿಂಕ್ ಸಾಕಾಣಿಕೆ ಉದ್ಯಮ ಲಕ್ಷಾಂತರ ಕೋಟಿ ವಹಿವಾಟು ನಡೆಸುತ್ತದೆ. ಇದರಲ್ಲೂ ಡೆನ್ಮಾರ್ಕ್‌ನ ಪಾಲು ತುಸು ಹೆಚ್ಚಾಗಿದೆ. ಆದರೆ ಮಿಂಕ್ ಸಾಕಾಣಿಕೆ ಅಷ್ಟು ಸುಲಭದ ಮಾತಲ್ಲ. ಮಿಂಕ್‌ಗಳ ಕುರಿತು ತುಂಬಾ ಕೇರ್ ತೆಗೆದುಕೊಳ್ಳಬೇಕು. ಅದರಲ್ಲೂ ಚಳಿ ಹೆಚ್ಚಾಗಿರುವ ಡೆನ್ಮಾರ್ಕ್ ರೀತಿಯ ವಾತಾವರಣದಲ್ಲಿ ಬೆಚ್ಚನೆ ಗೂಡನ್ನು ನಿರ್ಮಿಸಬೇಕಾಗುತ್ತದೆ. ಹೀಗೆ ಒಬ್ಬೊಬ್ಬ ಡೆನ್ಮಾರ್ಕ್ ರೈತನೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಈ ಮಿಂಕ್‌ಗಳನ್ನ ಸಾಕುತ್ತಾನೆ. ಆದರೆ ಈ ಪೀಡೆ ಕೊರೊನಾ ಡೆನ್ಮಾರ್ಕ್‌ನ ರೈತರ ಬದುಕನ್ನೂ ಬೀದಿಗೆ ತಳ್ಳಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications