ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೇಷನ್‌ನಲ್ಲಿ ಜನರಿಗೆ ಗಸಗಸೆ ಹೂವು ಮಾರಿದ ಪ್ರಧಾನಿ ರಿಷಿ ಸುನಕ್!

|
Google Oneindia Kannada News

ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಸೆಂಟ್ರಲ್ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಟ್ಯೂಬ್ ಸ್ಟೇಷನ್‌ನಲ್ಲಿ ಗುರವಾರ ಗಸಗಸೆ ಹೂವುಗಳನ್ನು ಮಾರಾಟ ಮಾಡುವ ಮೂಲಕ ಪ್ರಯಾಣಿಕರನ್ನು ಆಶ್ಚರ್ಯಗೊಳಿಸಿದರು. ಪ್ರಧಾನಿಯಾಗಿ ಮೊದಲ ಬಾರಿ ಸಾರ್ವಜನಿಕ ಸ್ಥಳದಲ್ಲಿ ಸುನಕ್ ಅವರ ಉಪಸ್ಥಿತಿಯಲ್ಲಿ ಸಾಮಾನ್ಯ ಜನರಿಗೆ ಬಂದು ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿತು.

ಜನರು ತಮ್ಮ ನೆಚ್ಚಿನ ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಅವರೊಂದಿಗೆ ಸ್ವಲ್ಪ ಚರ್ಚೆ ನಡೆಸಿದರು. ಕಳೆದ ಗುರುವಾರ ಬೆಳಗ್ಗೆ ಸುಮಾರು 8 ಗಂಟೆಗೆ ರಾಯಲ್ ಬ್ರಿಟಿಷ್ ಲೀಜನ್ (ಆರ್‌ಬಿಎಲ್) ವಾರ್ಷಿಕ ಗಸಗಸೆ ಮನವಿಯ ಸಂದರ್ಭದಲ್ಲಿ ನಿಧಿ ಸಂಗ್ರಹಿಸಲು ಹಲವಾರು ಸೇನಾ ಸಿಬ್ಬಂದಿ ಮತ್ತು ನಾಗರಿಕ ಸೇವಕ ಸ್ಟೀಫನ್ ಲೆ ರೌಕ್ಸ್ ಭಾಗವಹಿಸಿದ್ದರು.

ಪ್ರಧಾನಿ ಮೋದಿ ಮತ್ತು ರಿಷಿ ಸುನಕ್ ನಡುವೆ ಮೊದಲ ಫೋನ್ ಕರೆ ಪ್ರಧಾನಿ ಮೋದಿ ಮತ್ತು ರಿಷಿ ಸುನಕ್ ನಡುವೆ ಮೊದಲ ಫೋನ್ ಕರೆ

ಬ್ರಿಟನ್‌ನ ಆರ್ಥಿಕತೆಯು ಹಿಂಜರಿತದಲ್ಲಿದೆ. ಹಣದುಬ್ಬರವು ಗಗನಕ್ಕೇರುತ್ತಿದೆ ಮತ್ತು ರಾಜಕೀಯ ಅಸ್ಥಿರತೆಯೂ ಕಂಡುಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ನೂತನ ಪ್ರಧಾನಿ ರಿಷಿ ಸುನಕ್ ಅವರ ಮುಂದೆ ದೊಡ್ಡ ಸವಾಲುಗಳಿರುವುದು ಸ್ಪಷ್ಟವಾಗಿದೆ.

Commuters surprised as UK PM Rishi Sunak sells poppies at London tube station

ಇದರ ಹೊರತಾಗಿಯೂ ಪ್ರಧಾನಿ ಸುನಕ್ ಅವರ ವಿಶಿಷ್ಟ ಶೈಲಿಯನ್ನು ನೋಡಲಾಗಿದೆ. ಹೌದು, ಸುನಕ್ ಲಂಡನ್ ಟ್ಯೂಬ್ ಸ್ಟೇಷನ್‌ನಲ್ಲಿ ಪ್ರಯಾಣಿಕರಿಗೆ ಗಸಗಸೆ (ಇದು ಒಂದು ರೀತಿಯ ಹೂವು) ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ತಮ್ಮ ಉನ್ನತ ನಾಯಕನ ಈ ರೀತಿ ಮಾರಟ ಮಾಡಿರುವುದನ್ನು ಕಂಡು ಜನರು ಆಶ್ಚರ್ಯಚಕಿತರಾದರು.

ನೂತನ ಪ್ರಧಾನಿ ಸಂತೋಷದಿಂದ ಸ್ವಾಗತಿಸಿದ ಜನರು; ಬೆಳಗ್ಗೆ ವೆಸ್ಟ್‌ಮಿನ್‌ಸ್ಟರ್‌ನ ಟ್ಯೂಬ್ ಸ್ಟೇಷನ್‌ಗೆ ಆಗಮಿಸಿದ ಜನರು ಪಿಎಂ ರಿಷಿ ಸುನಕ್ ಗಸಗಸೆಗಳ ಹೂವಿನ ಬಾಕ್ಸ್‌ ಹಿಡಿದುಕೊಂಡು ಸಾರ್ವಜನಿಕರೊಂದಿಗೆ ಮಾತನಾಡುತ್ತಿರುವುದನ್ನು ನೋಡಿದಾಗ ದಿಗ್ಭ್ರಮೆಗೊಂಡರು.

ಲಂಡನ್‌ನ ವೆಸ್ಟ್‌ಮಿನಿಸ್ಟರ್ ಟ್ಯೂಬ್ ಸ್ಟೇಷನ್‌ನಲ್ಲಿ ಪ್ರಯಾಣಿಕರು ದಟ್ಟಣೆಯಲ್ಲಿ ಪ್ರಧಾನಿ ರಿಷಿ ಸುನಕ್ ಕಂಡು ಸಂತೋಷದಿಂದ ಸ್ವಾಗತಿಸಿದರು. ವಾಸ್ತವವಾಗಿ ಪಿಎಂ ಸುನಕ್ ಅವರು ಸೇನೆಯ ಪರವಾಗಿ ನಿಧಿಸಂಗ್ರಹಣೆಯ ಉಪಕ್ರಮದ ಭಾಗವಾಗಿ ಗಸಗಸೆಗಳನ್ನು ಮಾರಾಟ ಮಾಡಲು ನಿಲ್ದಾಣದಲ್ಲಿ ಹಾಜರಿದ್ದರು.

Commuters surprised as UK PM Rishi Sunak sells poppies at London tube station

ಬ್ರಿಟನ್‌ನಲ್ಲಿ ಗಸಗಸೆ ಎಂದು ಕರೆಯಲ್ಪಡುವ ಕೃತಕ ಹೂವುಗಳನ್ನು ಸೈನಿಕರ ನೆನಪಿಗಾಗಿ ಮತ್ತು ಗೌರವಾರ್ಥವಾಗಿ ಧರಿಸಲಾಗುತ್ತದೆ. ಇದಕ್ಕಾಗಿ, ಈ ಹೂವುಗಳನ್ನು ಮಾರಾಟ ಮಾಡುವ ಮೂಲಕ ಮಿಲಿಟರಿ ಕಲ್ಯಾಣಕ್ಕಾಗಿ ಹಣವನ್ನು ಸಂಗ್ರಹಿಸುವ ವಾರ್ಷಿಕ ಅಭಿಯಾನವನ್ನು ಈ ದಿನಗಳಲ್ಲಿ ನಡೆಸಲಾಗುತ್ತದೆ.

ಈ ಬಾರಿ ಪಿಎಂ ಸುನಕ್ ಲಂಡನ್‌ನಲ್ಲಿ ರಾಯಲ್ ಬ್ರಿಟಿಷ್ ಲೀಜನ್ ಮಾಡಿದ ಗಸಗಸೆ ದಿನದ ಮನವಿಯಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಸಮಯ ಕಳೆದರು.

ಲಂಡನ್‌ ಜನರಿಗೆ ಪ್ರಧಾನಿ ಸುನಕ್ 'ಡೌನ್ ಟು ಅರ್ಥ್'

ಸಾರ್ವಜನಿಕ ಸ್ಥಳದಲ್ಲಿ ಪಿಎಂ ಸುನಕ್ ಅವರ ಉಪಸ್ಥಿತಿಯಿಂದಾಗಿ ಸಾಮಾನ್ಯ ಜನರಿಗೆ ತಮ್ಮ ನೆಚ್ಚಿನ ಪಿಎಂ ಜೊತೆ ಮಾತನಾಡಲು ಅವಕಾಶ ಸಿಕ್ಕಿತು. ಅನೇಕರು ತಮ್ಮ ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಂಡರು ಮತ್ತು ಅವರೊಂದಿಗೆ ಸ್ವಲ್ಪ ಚರ್ಚೆ ನಡೆಸಿದರು. ಇದಾದ ನಂತರ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಭಾರತೀಯ ಮೂಲದ ಮೊದಲ ಬ್ರಿಟಿಷ್ ಪ್ರಧಾನಿಯೊಂದಿಗೆ ಸಂವಾದದ ಅನುಭವವನ್ನು ಜನರು ಅದ್ಭುತವೆಂದು ರೇಟ್ ಮಾಡಿದ್ದಾರೆ.

ಪಿಎಂ ಸುನಕ್ ಅವರಿಗೆ ರಾಯಲ್ ಬ್ರಿಟಿಷ್ ಲೀಜನ್ ಪರವಾಗಿ ಧನ್ಯವಾದ ಸಲ್ಲಿಸಲಾಯಿತು. ದಟ್ಟಣೆಯ ಸಮಯದಲ್ಲಿ ಉನ್ನತ ನಾಯಕರು ಆಗಮಿಸಿ ಈ ಉದಾತ್ತ ಪ್ರಯತ್ನಕ್ಕೆ ಸಮಯ ಮೀಸಲಿಟ್ಟಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು. ಏಕಾ-ಏಕಿ ಬ್ರಿಟನ್ ಪ್ರಧಾನಿಯನ್ನು ಕಂಡು ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದಿರುವುದು ಕುತೂಹಲ ಮೂಡಿಸಿದೆ. ಸುನಕ್‌ನಿಂದ 5 ಪೌಂಡ್‌ಗಳಿಗೆ ಗಸಗಸೆ ಖರೀದಿಸಿದ ಲೆವಿಸ್ ಎಂಬ ವ್ಯಕ್ತಿ, ನಮ್ಮ ಪ್ರಧಾನಿ 'ಡೌನ್‌ಟು ಅರ್ಥ್' ಎಂದು ಹೇಳಿದರು.

English summary
The newly elected Prime Minister of United Kingdom Rishi Sunak was spotted selling poppies at the Westminster Tube Station in central London recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X