ಅಮೆರಿಕ: ಗೆದ್ದವರ ಸಂಭ್ರಮ, ಸೋತವರ ವಿಷಾದ

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್, 9: ತೀವ್ರ ಪೈಪೋಟಿಯಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕೊನೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಮೆರಿಕ ಸಂಯುಕ್ತ ರಾಷ್ಟ್ರಗಳ 45ನೇ ಅಧ್ಯಕ್ಷರಾಗಿ ಮಂಗಳವಾರ ಆಯ್ಕೆಯಾದರು.

ಹಿಲರಿ ಕ್ಲಿಂಟನ್ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಹಲವು ಮಂದಿಗೆ ಈ ಫಲಿತಾಂಶ ಆಘಾತ ನೀಡಿದೆ. ಇನ್ನು ಈ ಫಲಿತಾಂಶ ಚೆನ್ನೈನ ಚಾಣಕ್ಯ-3 ಎಂಬ ಮೀನು ಮತ್ತು ಚೀನಾದ ಕೋತಿ, ಸೈಬಿರಿಯನ್ ಹಿಮಕರಡಿ ನುಡಿದಿದ್ದ ಭವಿಷ್ಯವನ್ನು ನಿಜಮಾಡಿದೆ.

ನ್ಯೂಯಾರ್ಕ್ ನಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ (ಸ್ಥಳೀಯ ಕಾಲಮಾನ ಮಂಗಳವಾರ ಸಂಜೆ 4.30) ಆರಂಭವಾದ ಮತ ಎಣಿಕೆಯಲ್ಲಿ ಟ್ರಂಪ್ ಅವರು ಹಲವು ಕ್ಷೇತ್ರಗಳಲ್ಲಿ ಹಿಲರಿ ಅವರಿಗಿಂತ ಮುನ್ನಡೆ ಕಾಯ್ದುಕೊಳ್ಳುತ್ತಾ ಬಂದರು.

ಚುನಾವಣೆಯಲ್ಲಿ ಅಂದಾಜು 12ಕೋಟಿಗೂ ಹೆಚ್ಚು ಜನ ಮತಚಲಾಯಿಸಿದ್ದಾರೆ. ಒಟ್ಟಿನಲ್ಲಿ ಹಲವು ಸಮೀಕ್ಷೆಗಳಲ್ಲಿ ಟ್ರಂಪ್ ಗಿಂತ ಮುನ್ನಡೆ ಕಾಯ್ದುಕೊಂಡಿದ್ದ ಹಿಲರಿ ಅವರು 218 ಮತಗಳನ್ನು ಪಡೆದು ಪರಾಭಾವ ಅನುಭವಿಸಿದರು.

ಇತ್ತ ಡೋನಾಲ್ಡ್ ಟ್ರಂಪ್ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ಮುಳಿಗೇಳುತ್ತಿದ್ದರೆ. ಅತ್ತ ಹಿಲರಿ ಬೆಂಗಲಿಗರು ವಿಷಾದಿಸುತ್ತಾ ತೀವ್ರ ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಉಪಾಧ್ಯಕ್ಷರು ಇವರೆನಾ?

ಉಪಾಧ್ಯಕ್ಷರು ಇವರೆನಾ?

ಜುಲೈ 20ರಂದು ನಡೆದಿದ್ದ ರಿಪಬ್ಲಕನ್ ಪಕ್ಷದ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಅವರನ್ನು ಪರಿಚಯಿಸಿದ್ದರು.

ಇನ್ನು ಗೆಲುವಿನ ಸಂಭ್ರದಲ್ಲಿರುವ ಟ್ರಂಪ್ ಅವರು ಅಂದು ಘೋಷಿಸಿದ್ದ ಅಭ್ಯರ್ಥಿಯನ್ನೇ ಉಪಾಧ್ಯಕ್ಷ ಪಟ್ಟಕ್ಕೆ ಏರಿಸುವ ಸಾಧ್ಯತೆ ಇದೆ.

ಬೆಂಬಲಿಗರ ಹರ್ಷೋದ್ಗಾರ

ಬೆಂಬಲಿಗರ ಹರ್ಷೋದ್ಗಾರ

ಅಮೆರಿಕ ಸಂಯುಕ್ತ ರಾಷ್ಟ್ರಗಳ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಆಯ್ಕೆ ಖಚಿತವಾಗುತ್ತಿದ್ದಂತೆ ಟ್ರಂಪ್ ಪರ ಬೆಂಬಲಿಗರು ಕೇಕೆ ಹಾಕಿ ಸಂಭ್ರಮಿಸಿದರು. ಟ್ರಂಪ್ ಅವರ ಬೆಂಬಲಿಗರ ಸಂಭ್ರಮ ಸಭೆಯಲ್ಲಿ ಮುಗಿಲು ಮುಟ್ಟಿತ್ತು.

ಗೆಲ್ಲುವುದು ನಾನೇ

ಗೆಲ್ಲುವುದು ನಾನೇ

ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ಚುನಾವಣಾ ಪೂರ್ವದಲ್ಲಿ ಭಾಗವಹಿಸಿದ್ದ ಚರ್ಚೆಯಲ್ಲಿ ಡೋನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ರತ್ತ ಮುಖ ಮಾಡಿ ಮೈಕ್ ಹಿಡಿದು ಮಾತನಾಡುತ್ತಿದ್ದರೆ. ಕ್ಲಿಂಟನ್ ಅವರು ಮಾತ್ರ ಸೋಲು ಒಪ್ಪಿಕೊಂಡತೆ ದೀನವಾಗಿ ಅಂದೇ ಮಖ ಹಾಕಿಕೊಂಡು ಕಂಡುಬಂದರು

ಹಿಲರಿ ಬೆಂಬಲಿಗರ ಅಳಲು

ಹಿಲರಿ ಬೆಂಬಲಿಗರ ಅಳಲು

ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಹಿಲರಿ ಸೋಲು ಖಚಿತವಾಗುತ್ತಿದ್ದಂತೆ ಹಿಲರಿ ಪರ ಬೆಂಬಲಿಗರು ದುಃಖ ತಾಳಲಾರದೆ ಒಂದೆಡೆ ಕುಳಿತು ದೀನವಾಗಿ ರೋದಿಸುತ್ತಿರುವುದು ಕಂಡು ಬಂತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hillary Clinton's supporters came in their thousands to cheer her victory - but instead they streamed out of her party venue in tears. And just two miles away in Manhattan, Donald Trump's legions raised the roof, chanting 'lock her up' as their candidate romped home to victory.
Please Wait while comments are loading...