ಪಾಕ್‌ನಲ್ಲಿ 2 ಬುಡಕಟ್ಟು ಜನಾಂಗದವರ ನಡುವೆ ಘರ್ಷಣೆ: 15 ಸಾವು

ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಎರಡು ಬುಡಕಟ್ಟುಗಳ ನಡುವೆ ಘರ್ಷಣೆ ಸಂಭವಿಸಿದೆ. ಸೋಮವಾರ ನಡೆದ ಈ ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಮಂಗಳವಾರ ವರದಿ ಮಾಡಿದೆ.

ಕೊಹತ್ ಜಿಲ್ಲೆಯ ಪೇಶಾವರದಿಂದ ನೈಋತ್ಯಕ್ಕೆ 35 ಕಿಮೀ ದೂರದಲ್ಲಿರುವ ದರ್ರಾ ಆದಮ್ ಖೇಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸನ್ನಿಖೇಲ್ ಮತ್ತು ಝರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಗಣಿ ಡಿಲಿಮಿಟೇಶನ್ ಕುರಿತು ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡು ಬುಡಕಟ್ಟು ಜನಾಂಗದ ಗುಂಪು ಪರಸ್ಪರ ಗುಂಡು ಹಾರಿಸಿಕೊಂಡಿವೆ.

Clash between 2 tribes over coal mine allocation in Pakistan

ಮೃತದೇಹಗಳು ಮತ್ತು ಗಾಯಗೊಂಡವರನ್ನು ಪೇಶಾವರ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರ ನಿಖರ ಸಂಖ್ಯೆ ತಕ್ಷಣವೇ ತಿಳಿದುಬಂದಿಲ್ಲ. ಆದರೆ ಗುಂಡಿನ ಚಕಮಕಿಯಲ್ಲಿ ಎರಡೂ ಕಡೆಯಿಂದ ಸಾವುನೋವುಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮತ್ತು ಇತರ ಭದ್ರತಾ ಪಡೆಗಳ ಜಂಟಿ ತಂಡಗಳು ಸ್ಥಳಕ್ಕೆ ಧಾವಿಸಿ ಎರಡು ಬುಡಕಟ್ಟುಗಳ ನಡುವಿನ ಗುಂಡಿನ ದಾಳಿಯನ್ನು ನಿಲ್ಲಿಸಿವೆ. ಘಟನೆಗೆ ಸಂಬಂಧಿಸಿದಂತೆ ದರ್ರಾ ಆದಮ್ ಖೇಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Clash between 2 tribes over coal mine allocation in Pakistan

ಸನ್ನಿಖೇಲ್ ಮತ್ತು ಝರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಕಲ್ಲಿದ್ದಲು ಗಣಿ ಡಿಲಿಮಿಟೇಶನ್ ಕುರಿತು ಕಳೆದೆರಡು ವರ್ಷಗಳಿಂದ ವಿವಾದ ಮುಂದುವರಿದಿದ್ದು, ಈ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಹಲವಾರು ಬಾರಿ ರಾಜಿ ನಡೆಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+