ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾನಾ ಸಿಂಡ್ರೋಮ್ ಬಗ್ಗೆ ನಿರ್ಲಕ್ಷ್ಯ ತೋರಿದಕ್ಕೆ ಸಿಐಎ ಮುಖ್ಯಸ್ಥರ ಉದ್ಯೋಗಕ್ಕೆ ಕುತ್ತು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಹವಾನಾ ಸಿಂಡ್ರೋಮ್ ಪ್ರಕರಣಗಳ ಏರಿಕೆ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದ ಟೀಕೆಗಳ ಹಿನ್ನೆಲೆ ಕೇಂದ್ರೀಯ ಗುಪ್ತಚರ ಸಮಿತಿಯು ತನ್ನ ವಿಯೆನ್ನಾ ಮತ್ತು ಆಸ್ಟ್ರಿಯಾದ ಮುಖ್ಯಸ್ಥರನ್ನು ತೆಗೆದು ಹಾಕಿರುವ ಬಗ್ಗೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ವಿಯೆನ್ನಾದಲ್ಲಿ ಇತ್ತೀಚಿಗೆ ರಾಯಭಾರ ಕಚೇರಿ ಸಿಬ್ಬಂದಿ ಮತ್ತು ಕೇಂದ್ರೀಯ ಗುಪ್ತಚರ ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರ ಮೇಲೆ ಹವಾನಾ ಸಿಂಡ್ರೋಮ್ ಪರಿಣಾಮ ಬೀರಿದವ ಹತ್ತಾರು ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ಕೇಂದ್ರದ ಮುಖ್ಯಸ್ಥರು ಸೂಕ್ಷ್ಮತೆಯನ್ನು ತೋರಿಸಿರುವುದು ಸಂಶಯ ವ್ಯಕ್ತಪಡಿಸಿದ್ದಾರೆ, ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಪೋಸ್ಟ್ ಹೇಳಿದೆ.

ಹವಾನಾ ಸಿಂಡ್ರೋಮ್: ಭಾರತದಲ್ಲಿ ಯುಎಸ್ ಅಧಿಕಾರಿ ಮೇಲೆ ದಾಳಿ ನಡೆಸಿದ್ಯಾರು?ಹವಾನಾ ಸಿಂಡ್ರೋಮ್: ಭಾರತದಲ್ಲಿ ಯುಎಸ್ ಅಧಿಕಾರಿ ಮೇಲೆ ದಾಳಿ ನಡೆಸಿದ್ಯಾರು?

ಕೇಂದ್ರೀಯ ಗುಪ್ತಚರ ಸಮಿತಿಯ ವಕ್ತಾರರು ವರದಿಯನ್ನು ದೃಢೀಕರಿಸಲು ಅಥವಾ ತಳ್ಳಿ ಹಾಕಲು ನಿರಾಕರಿಸಿದ್ದಾರೆ, ಆದರೆ ವಿಶ್ವದಾದ್ಯಂತ ಯುಎಸ್ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ನಿಗೂಢ ಕಾಯಿಲೆಯನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ. ಹವಾನಾ ಸಿಂಡ್ರೋಮ್ ಕಾರಣ ಮತ್ತು ಮೂಲವು ನಿಗೂಢವಾಗಿ ಉಳಿದಿದೆ ಎಂದು ಸಿಐಎ ಉಪ ನಿರ್ದೇಶಕ ಡೇವಿಡ್ ಕೋಹೆನ್ ಕಳೆದ ವಾರವೇ ಹೇಳಿದ್ದರು.

ಹವಾನಾ ಸಿಂಡ್ರೋಮ್ ಸಮಸ್ಯೆಗೆ ಚಿಕಿತ್ಸೆ ಮುಂದುವರಿಕೆ

ಹವಾನಾ ಸಿಂಡ್ರೋಮ್ ಸಮಸ್ಯೆಗೆ ಚಿಕಿತ್ಸೆ ಮುಂದುವರಿಕೆ

ಕೇಂದ್ರೀಯ ಗುಪ್ತಚರ ಸಮಿತಿ ಮತ್ತು ಪೆಂಟಗನ್ ಸೇರಿದಂತೆ ಯುಎಸ್ ಸರ್ಕಾರವು ಹವಾನಾ ಸಿಂಡ್ರೋಮ್ ಪ್ರಕರಣಗಳ ಕುರಿತಾಗಿ ತನಿಖೆ ನಡೆಸಲು ಹಾಗೂ ಸೋಂಕಿನ ಲಕ್ಷಣ ಹೊಂದಿರುವ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿಸಿದೆ.

ಹವಾನಾ ಸಿಂಡ್ರೋಮ್ ಎಂದರೇನು ಗೊತ್ತೆ?

ಹವಾನಾ ಸಿಂಡ್ರೋಮ್ ಎಂದರೇನು ಗೊತ್ತೆ?

ಕಳೆದ 2017ರಲ್ಲಿ ಕ್ಯೂಬಾದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ರಾಯಭಾರಿ ಮತ್ತು ಅಧಿಕಾರಿಗಳು ಬೀಡುಬಿಟ್ಟ ಸಂದರ್ಭದಲ್ಲಿ ವಿಚಿತ್ರವಾದ ಹೆಚ್ಚಿನ ಮತ್ತು ಕಡಿಮೆ ಶಬ್ದಗಳನ್ನು ಕೇಳಿದ ನಂತರದಲ್ಲಿ ಅಸಾಮಾನ್ಯ ದೈಹಿಕ ಸಂವೇದನೆಗಳನ್ನು ಅನುಭವಿಸಿರುವುದು ವರದಿಯಾಗಿದೆ. ಯುಎಸ್ ಸರ್ಕಾರಿ ಅಧಿಕಾರಿಗಳು ಚೀನಾ ಮತ್ತು ವಾಷಿಂಗ್ಟನ್, ಡಿಸಿ ಪ್ರದೇಶದಲ್ಲಿ ಇಂಥ ಪ್ರಕರಣಗಳು ವರದಿಯಾಗಿವೆ. ಕಳೆದ ತಿಂಗಳ ಕೊನೆಯಲ್ಲಿ ಯುೆಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಗಮನಕ್ಕೆ ಮುಂಚಿತವಾಗಿ ರಾಜಧಾನಿ ಹನೋಯಿಯಲ್ಲಿ ಹವಾನಾ ಸಿಂಡ್ರೋಮ್ ಘಟನೆಗಳು ವರದಿಯಾದ ನಂತರ ಕನಿಷ್ಠ ಇಬ್ಬರು ಯುಎಸ್ ರಾಜತಾಂತ್ರಿಕರನ್ನು ವಿಯೆಟ್ನಾಂನಿಂದ ಸ್ಥಳಾಂತರಿಸಲಾಗಿತ್ತು.

ಹವಾನಾ ರೋಗದ ಲಕ್ಷಣಗಳು

ಹವಾನಾ ರೋಗದ ಲಕ್ಷಣಗಳು

ಸಾಮಾನ್ಯವಾಗಿ ಹವಾನಾ ಸಿಂಡ್ರೋಮ್ ರೋಗ ಕಾಣಿಸಿಕೊಂಡ ಹಲವರು ತಲೆತಿರುಗುವಿಕೆ, ಆಯಾಸ, ವಾಕರಿಕೆ ಮತ್ತು ತೀವ್ರ ತಲೆನೋವು ಎದುರಿಸುತ್ತಿರುತ್ತಾರೆ. ಕೆಲವರಲ್ಲಿ ಅದೃಶ್ಯತನ ಕಾಡುತ್ತಿದ್ದು, ಹಲವರಿಗೆ ಕೆಲಸ ಮಾಡುವುದು ಅಸಾಧ್ಯದಂತೆ ಭಾಸವಾಗುತ್ತದೆ. ಕೆಲವು ಯುಎಸ್ ಅಧಿಕಾರಿಗಳಲ್ಲಿ ಶಾಶ್ವತ ಮಿದುಳಿನ ಗಾಯವಾಗಿದೆ. ಇದರ ಹಿಂದೆ ರಷ್ಯಾದ ಬೇಹುಗಾರರ ದಾಳಿ ಅಥವಾ ಕಣ್ಗಾವಲು ಕಾರ್ಯಾಚರಣೆಯ ಪರಿಣಾಮದ ಕೈವಾಡವಿರುವ ಬಗ್ಗೆ ಅನೇಕ ಯುಎಸ್ ಅಧಿಕಾರಿಗಳು ಶಂಕಿಸಿದ್ದಾರೆ, ಆದರೆ ಈ ಬಗ್ಗೆ ಸಾಕ್ಷ್ಯಗಳು ಬಲು ನಿರ್ಣಾಯಕವಾಗಲಿವೆ.

ಹವಾನಾ ದಾಳಿ ಕುರಿತು ತನಿಖೆ ಮುಂದುವರಿಕೆ

ಹವಾನಾ ದಾಳಿ ಕುರಿತು ತನಿಖೆ ಮುಂದುವರಿಕೆ

ಯುಎಸ್ ಕೇಂದ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಬರ್ನ್ಸ್ ಮತ್ತು ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ಅವ್ರಿಲ್ ಹೈನ್ಸ್ ಅಡಿಯಲ್ಲಿ ಗುಪ್ತಚರ ಸಮುದಾಯವು ನಿಗೂಢ ದಾಳಿಯ ಬಗ್ಗೆ ವ್ಯಾಪಕ ತನಿಖೆ ಕೈಗೊಂಡಿದೆ. "ನಾವು ನಿರ್ದಿಷ್ಟ ಘಟನೆಗಳು ಅಥವಾ ಅಧಿಕಾರಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಯಾವುದೇ ವ್ಯಕ್ತಿ ಅಥವಾ ಅಧಿಕಾರಿಯು ಅಸಂಬದ್ಧ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ನಾವು ಮಾರ್ಗಸೂಚಿಗಳನ್ನು ಹಾಗೂ ಶಿಷ್ಟಾಚಾರವನ್ನು ಹೊಂದಿದ್ವೇವೆ ಎಂದು ಸಿಐಎ ವಕ್ತಾರರು ಹೇಳಿದ್ದಾರೆ.

"ಅಮೆರಿಕಾದ ಸಾರ್ವಜನಿಕ ಸೇವಕರ ಆರೋಗ್ಯ ಮತ್ತು ಯೋಗಕ್ಷೇಮವು ಆಡಳಿತಕ್ಕೆ ಅತ್ಯಂತ ಮಹತ್ವದ್ದಾಗಿದೆ, ಮತ್ತು ಅಸಹಜ ಆರೋಗ್ಯ ಘಟನೆಯ ಕುರಿತು ನಮ್ಮ ಸಿಬ್ಬಂದಿಯ ಯಾವುದೇ ವರದಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಎನ್ಬಿಸಿ ನ್ಯೂಸ್ ಉಲ್ಲೇಖಿಸಿದ್ದಾರೆ.

ಹವಾನಾ ಸುದ್ದ ಬಗೆಹರಿಯದ ರಹಸ್ಯ

ಹವಾನಾ ಸುದ್ದ ಬಗೆಹರಿಯದ ರಹಸ್ಯ

ಕಳೆದ ವರ್ಷದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ವರದಿಯಲ್ಲಿ ಮೈಕ್ರೊವೇವ್ ಶಕ್ತಿಯ ಬಗ್ಗೆ ಹೇಳಲಾಗಿದೆ, ಆದರೆ ವೈಜ್ಞಾನಿಕ ಸಮುದಾಯದಲ್ಲಿ ಈ ತೀರ್ಮಾನದ ಕುರಿತು ಇನ್ನೂ ಚರ್ಚೆ ನಡೆಸಲಾಗುತ್ತಿದೆ. ಕಳೆದ ವಾರ ಸಿಐಎ ಉಪ ನಿರ್ದೇಶಕ ಡೇವಿಡ್ ಕೋಹೆನ್, ರಹಸ್ಯವನ್ನು ಬಗೆಹರಿಸುವಲ್ಲಿ ಏಜೆನ್ಸಿಯು ಹತ್ತಿರದಲ್ಲಿದೆ, ಆದರೆ ನಮಗೂ ಕೆಲವು ಮಿತಿಗಳಿವೆ ಎಂದು ಹೇಳಿದ್ದರು. "ನಾವು ಸಮಸ್ಯೆಯ ಮೂಲವನ್ನು ಕಂಡುಕೊಳ್ಳುವುದಕ್ಕೆ ಹತ್ತಿರದಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ ಜನರು ನಿರೀಕ್ಷಿಸುತ್ತಿರುವಷ್ಟು ವಿಶ್ಲೇಷಣಾತ್ಮಕ ತೀರ್ಪು ನೀಡುವಷ್ಟು ಹತ್ತಿರವಾಗಿಲ್ಲ" ಎಂದು ಹೇಳಿದ್ದಾರೆ.

English summary
CIA Removes Vienna, Austria station Chief Over Havana Syndrome Handling: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X