ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಉಗ್ರರು ಹೆಲಿಕ್ಯಾಪ್ಟರ್ ಹೊಡೆದುರುಳಿಸಿದ್ದು ಯಾಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಇಸ್ಲಾಮಾಬಾದ್, ಮೇ 08: ಉತ್ತರ ಪಾಕಿಸ್ತಾನದಲ್ಲಿ ಶುಕ್ರವಾರ ಉಗ್ರರು ಹೆಲಿಕ್ಯಾಪ್ಟರ್ ವೊಂದನ್ನು ಹೊಡೆದುರುಳಿಸಿದ್ದು ಘಟನೆ ಆರು ಜನರ ಸಾವಿಗೆ ಕಾರಣವಾಗಿದೆ. ಈ ಮೂಲಕ ಪ್ರಧಾನಿ ನವಾಜ್ ಷರೀಫ್ ಗೆ ತೆಹರಿಕ್ ಇ ತಾಲಿಬಾನ್ ಸಂಘಟನೆ ಸಂದೇಶವೊಂದನ್ನು ರವಾನಿಸಿದೆ.

ನಾರ್ವೆ ಮತ್ತು ಫಿಲಿಫೈನ್ಸ್ ನ ರಾಯಭಾರಿಗಳನ್ನು ಹೊತ್ತು ಸಾಗುತ್ತಿದ್ದ ಹೆಲಿಕ್ಯಾಪ್ಟರ್ ನ್ನು ಹೊಡೆದುರುಳಿಸಲಾಗಿದ್ದು ನವಾಜ್ ಷರೀಫ್ ಅವರನ್ನು ಗುರಿಯಾಗಿ ಇರಿಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ಹೆಲಿಕ್ಯಾಪ್ಟರ್ ನಲ್ಲಿದ್ದ ಎಲ್ಲ ಆರು ಜನ ಸಾವಿಗೀಡಾಗಿದ್ದು ತೆಹಿರಿಕ್-ಇ-ತಾಲಿಬಾನ್ ಘಟನೆಯ ಹೊಣೆ ಹೊತ್ತುಕೊಂಡಿದೆ.

pakistan

ನಿಜವಾಗಿ ಟಿಟಿಪಿ ಬಯಸುತ್ತಿರುವುದು ಏನು?
ಘಟನೆಯ ಹೊಣೆಯನ್ನು ತೆಹಿರಿಕ್-ಇ-ತಾಲಿಬಾನ್ ಹೊತ್ತುಕೊಳ್ಳುತ್ತದೆ ಎಂಬುದು ಗೊತ್ತಾಗಿತ್ತು. ಹಿರಿಯ ಅಧಿಕಾರಿಗಳು ಅಥವಾ ದೇಶದ ಗೌರವಕ್ಕೆ ಧಕ್ಕೆ ತರುವಂಥ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಸರ್ಕಾರಕ್ಕೆ ತಮ್ಮ ಅಸ್ತಿತ್ವ ಜಾಹೀರು ಮಾಡುವುದು ಸಂಘಟನೆಯ ಮೂಲ ಉದ್ದೇಶವಾಗಿತ್ತು. ಪೇಶಾವರದ ದಾಳಿ ನಂತರ ಪಾಕಿಸ್ತಾನ ಸರ್ಕಾರ ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆduದಿಕೊಂಡಿದ್ದೇ ಘಟನೆಗೆ ಮೂಲ ಕಾರಣ ಎಂದು ಹೇಳಲಾಗಿದೆ.

ರಕ್ತಪಾತವೇ ಬೇಕಾಗಿತ್ತು
ಪಾಕಿಸ್ತಾನದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನಾಗರೀಕರ ಮೇಲೆ ದಾಳಿ ಮಾಡುವಂಥ ಪ್ರಕರಣಗಳು ದಾಖಲಾಗುತ್ತಿದ್ದನ್ನು ನೋಡಿದ್ದೇವೆ. ಈ ಘಟನೆ ಸ್ವಲ್ಪ ವ್ಯತಿರಿಕ್ತವಾಗಿದೆ ಅಷ್ಟೇ.

ಸರ್ಕಾರಕ್ಕೆ ಮುಜುಗರ ತರುವಂಥ ಕೆಲಸ ಅಥವಾ ರಕ್ತಪಾತದ ಮೂಲಕ ಜನರನ್ನು ಭಯಭೀತರಾಗಗಿಸುವುದು ಉಗ್ರರ ಮುಖ್ಯ ಉದ್ದೇಶ. ಅದರ ಸಾಕಾರ ಮಾಡಲು ಅವರು ಎಂಥ ಕೃತ್ಯಕ್ಕಾದರೂ ಇಳಿಯುತ್ತಾರೆ. ಹೆಲಿಕ್ಯಾಪ್ಟರ್ ಉಡಾಯಿಸಿದ್ದು ಅದರ ಒಂದು ಭಾಗವೇ.

ಮುಂದಿನ ದಿನಗಳಲ್ಲಿ ಪಾಕಿಸ್ತಾನ ಈ ಬಗೆಯ ನೂರಾರು ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದರೆ ಆಶ್ಚರ್ಯವಿಲ್ಲ. ಸಾಮಾನ್ಯ ಜನರಿಗಿಂತ ವಿದೇಶಿ ಪ್ರಜೆಗಳು ಮತ್ತು ರಾಯಭಾರಿಗಳು ಉಗ್ರರ ಪ್ರಮುಖ ಟಾರ್ಗೆಟ್. ಯಾಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಬೇಕು ಎಂಬ ಉದ್ದೇಶವೂ ಇದರ ಹಿಂದೆ ಅಡಗಿರುತ್ತದೆ.

English summary
The shooting down of the chopper in Northern Pakistan which claimed six lives was a direct message to Prime Minister Nawaz Sharrif by the Tehrik-e-Taliban. The Tehrik-e-Taliban which claimed responsibility for the incident said that it had targeted Sharrif indirectly. A chopper carrying several persons including the ambassadors of Norway and Philippines had crashed after it was reportedly shot down in Northern Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X