• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಮೋದಿ,ಚೀನಾ ಟಿವಿಯಿಂದ ಭಾರತದ ನಕ್ಷೆಗೆ ಕತ್ತರಿ

By Mahesh
|

ಬೀಜಿಂಗ್, ಮೇ.15: ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶವನ್ನು ಭೂಪಟದಿಂದ ಮಾಯ ಮಾಡಿ ಚೀನಾದ ಸರ್ಕಾರಿ ಸ್ವಾಮ್ಯದ ವಾಹಿನಿ ಸಿಸಿಟಿವಿ ಸುದ್ದಿ ಪ್ರಸಾರ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಈ ರೀತಿ ಪ್ರಮಾದ ಸಂಭವಿಸಿರುವುದು ಗಮನಾರ್ಹವಾಗಿದೆ.

ಭಾರತ ಭೂಪಟಕ್ಕೆ ಕತ್ತರಿ ಹಾಕಿದ್ದು, ಭೂಪಟದಲ್ಲಿ ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳನ್ನು ತೆಗೆದು ಹಾಕಿರುವ ಚಿತ್ರದೊಂದಿಗೆ ಮೋದಿ ಅವರು ಚೀನಾಕ್ಕೆ ಭೇಟಿ ನೀಡಿರುವ ಸುದ್ದಿಯನ್ನು ಅಧಿಕೃತ ಮಾಧ್ಯಮ ಸಿಸಿಟಿವಿ ಪ್ರಸಾರ ಮಾಡಿದೆ.

ಸುದ್ದಿ ಪ್ರಸಾರ ವೇಳೆ ಭಾರತ ಹಾಗೂ ಚೀನಾ ಭೂಪಟವನ್ನು ತೋರಿಸಲಾಗಿದೆ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದ ದೃಶ್ಯವನ್ನು ಪ್ರಸಾರಿಸಲಾಗಿದೆ.

ಭಾರತ ಹಾಗೂ ಚೀನಾ ನಡುವೆ ಅರುಣಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರ ಗಡಿ ವಿಚಾರದ ಕುರಿತು ಕಿತ್ತಾಟ ನಡೆಯುತ್ತಲೇ ಇದೆ. 18 ಸುತ್ತಿನ ವಿಶೇಷ ಮಾತುಕತೆ ನಡೆದಿದೆ. ಗಡಿ ಭಾಗದಲ್ಲಿ ಸದಾ ಕಾಲ ಆತಂಕದ ವಾತಾವರಣ ಮುಂದುವರೆದಿದೆ. ವಿವಾದ ಇರುವುದು 2,000 ಕಿ.ಮೀ ವ್ಯಾಪ್ತಿ ಎಂದು ಚೀನಾ ವಾದಿಸಿದರೆ, 4,000 ಕಿ.ಮೀ ವ್ಯಾಪ್ತಿ ಎಂದು ಭಾರತ ದಾಖಲೆ ಒದಗಿಸುತ್ತಾ ಬಂದಿದೆ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಭಾರತ ಹಾಗೂ ಚೀನಾ ಶುಕ್ರವಾರ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ, ಇದರಲ್ಲಿ ದೂರದರ್ಶನ ಹಾಗೂ ಸಿಸಿಟಿವಿ ನಡುವೆ ಸಹಕಾರ ನೀಡುವ ಒಪ್ಪಂದವೂ ಸೇರಿದೆ. (ಪಿಟಿಐ)

English summary
A controversy was kicked up on Thursday with China's state-owned television CCTV showing India's map without Jammu & Kashmir and Arunachal Pradesh while reporting on Prime Minister Narendra Modi's visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X