ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಭದ್ರತೆ ಬಗ್ಗೆ ಕಳವಳ ಮೂಡಿಸಿದ್ದ ಚೀನಾ ಸಂಶೋಧನಾ ನೌಕೆಗೆ ಪ್ರವೇಶವಿಲ್ಲ ಎಂದ ಶ್ರೀಲಂಕಾ

|
Google Oneindia Kannada News

ಕೊಲಂಬೊ, ಆಗಸ್ಟ್ 12: ಶ್ರೀಲಂಕಾದ ಹಂಬಂಟೋಟ ಬಂದರಿಗೆ ತಲುಪಬೇಕಾಗಿದ್ದ ಚೀನಾದ ಸಂಶೋಧನಾ ನೌಕೆ ಯುವಾನ್ ವಾಂಗ್ 5 ನಿಗದಿತವಾಗಿ ಬಂದರನ್ನು ತಲುಪುವುದಿಲ್ಲ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಭಾರತದ ಭದ್ರತೆಯ ಅಪಾಯದ ಬಗ್ಗೆ ಈ ಚೀನಾ ನೌಕೆ ಆತಂಕ ಸೃಷ್ಟಿಸಿತ್ತು.

ತನ್ನ ಅನುಮತಿಯಿಲ್ಲದೆ ಯಾವುದೇ ಹಡಗು ಬಂದರಿಗೆ ಪ್ರವೇಶಿಸುವಂತಿಲ್ಲ ಎಂದು ಹಂಬಂಟೋಟ ಬಂದರಿನ ಹಾರ್ಬರ್ ಮಾಸ್ಟರ್ ಹೇಳಿದ್ದಾರೆ ಎಂದು newsfirst.lk ವೆಬ್‌ಸೈಟ್ ವರದಿ ಮಾಡಿದೆ. ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗು 'ಯುವಾನ್ ವಾಂಗ್ 5' ಗುರುವಾರ ಹಂಬಂಟೋಟ ಬಂದರನ್ನು ತಲುಪುವುದಿಲ್ಲ ಎಂದು ಅದು ಹೇಳಿದೆ.

ಶ್ರೀಲಂಕಾ ಕಡೆ ಹೊರಟ ಚೀನಾ ಹಡಗು: ಭದ್ರತೆಯ ಬಗ್ಗೆ ಭಾರತದ ಆತಂಕಶ್ರೀಲಂಕಾ ಕಡೆ ಹೊರಟ ಚೀನಾ ಹಡಗು: ಭದ್ರತೆಯ ಬಗ್ಗೆ ಭಾರತದ ಆತಂಕ

ದ್ವೀಪ ರಾಷ್ಟ್ರದ ಬಂದರಿನಲ್ಲಿ ಹಡಗಿನ ಉಪಸ್ಥಿತಿಯ ಬಗ್ಗೆ ಭಾರತವು ಆತಂಕವನ್ನು ವ್ಯಕ್ತಪಡಿಸಿದ ಮತ್ತು ಅದರ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಬಹುದು ಎಂದು ಶ್ರೀಲಂಕಾಕ್ಕೆ ತಿಳಿಸಿದ ಕೆಲವು ದಿನಗಳ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Chinese Spy Ship Yuan Wang 5 Wont Dock At Sri Lankas Hambantota : Port Authorities

ಶ್ರೀಲಂಕಾ ಸರ್ಕಾರವು ಈ ವಿಷಯದ ಕುರಿತು "ಹೆಚ್ಚಿನ ಸಮಾಲೋಚನೆಗಳನ್ನು ಮಾಡುವವರೆಗೆ" ಹಂಬಂಟೋಟ ಬಂದರಿನಲ್ಲಿ ತನ್ನ ಸಂಶೋಧನಾ ನೌಕೆಯ ಭೇಟಿಯನ್ನು ಮುಂದೂಡುವಂತೆ ಚೀನಾ ಸರ್ಕಾರಕ್ಕೆ ಮನವಿ ಮಾಡಿತ್ತು.

ದಿ ಲಾಸ್ಟ್ ವಾರ್... ಬೆಚ್ಚಿಬೀಳಿಸುತ್ತೆ ಮಾಜಿ ಸೇನಾಧಿಕಾರಿ ಪ್ರವೀಣ್ ಸಾವ್ನೀ ಬರೆದ ಪುಸ್ತಕದಿ ಲಾಸ್ಟ್ ವಾರ್... ಬೆಚ್ಚಿಬೀಳಿಸುತ್ತೆ ಮಾಜಿ ಸೇನಾಧಿಕಾರಿ ಪ್ರವೀಣ್ ಸಾವ್ನೀ ಬರೆದ ಪುಸ್ತಕ

ಆಗಸ್ಟ್ 11ರಂದು ಹಂಬಂಟೋಟಗೆ ಬರಬೇಕಿತ್ತು
ಯುವಾನ್ ವಾಂಗ್ 5 ಜುಲೈ 13 ರಂದು ಚೀನಾದ ಜಿಯಾಂಗ್‌ಯಿನ್‌ನಿಂದ ನಿರ್ಗಮಿಸಿತು ಮತ್ತು 'ಮರುಪೂರಣ' ಉದ್ದೇಶಗಳಿಗಾಗಿ ಆಗಸ್ಟ್ 11-17 ರವರೆಗೆ ಬಂದರಿನಲ್ಲಿ ನಿಲುಗಡೆ ಮಾಡುವ ನಿರೀಕ್ಷೆ ಇತ್ತು.

ಬಾಹ್ಯಾಕಾಶ ಮತ್ತು ಉಪಗ್ರಹ ಟ್ರ್ಯಾಕಿಂಗ್‌ಗಾಗಿ ನೇಮಕಗೊಂಡಿರುವ ಪತ್ತೇದಾರಿ ನೌಕೆಯು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಉಪಗ್ರಹ ನಿಯಂತ್ರಣ ಮತ್ತು ಸಂಶೋಧನಾ ಟ್ರ್ಯಾಕಿಂಗ್ ನಡೆಸುವ ನಿರೀಕ್ಷೆಯಿದೆ.

Chinese Spy Ship Yuan Wang 5 Wont Dock At Sri Lankas Hambantota : Port Authorities

ಶ್ರೀಲಂಕಾ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಹೇಳಿಕೆ ನೀಡಿದ್ದು, ಈ ವಿಷಯದ ಕುರಿತು ಹೆಚ್ಚಿನ ಸಮಾಲೋಚನೆಗಳನ್ನು ಮಾಡುವವರೆಗೆ ಹಂಬಂಟೋಟದಲ್ಲಿ ಯುವಾನ್ ವಾಂಗ್ 5 ಆಗಮನದ ದಿನಾಂಕವನ್ನು ಮುಂದೂಡುವಂತೆ ಸಚಿವಾಲಯವು ವಿನಂತಿ ಮಾಡುತ್ತದೆ. ಶ್ರೀಲಂಕಾದ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೊಲಂಬೊದಲ್ಲಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಾಯಭಾರ ಕಚೇರಿಗೆಈ ಬಗ್ಗೆ ಪರಿಗಣಿಸುತ್ತದೆ ಎಂದು ಭಾವಿಸಿರುವುದಾಗಿ ತಿಳಿಸಿದೆ.

ಭಾರತವು ತನ್ನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಿದೆ.

ಚೀನಾದ ಹಡಗಿನ ಪ್ರಸ್ತಾವಿತ ಭೇಟಿಯ ವರದಿಗಳ ಬಗ್ಗೆ ಪ್ರಶ್ನೆಗೆ ಉತ್ತರಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಈ ಹಡಗು ಆಗಸ್ಟ್‌ನಲ್ಲಿ ಹಂಬಂಟೋಟಕ್ಕೆ ಭೇಟಿ ನೀಡುವ ಪ್ರಸ್ತಾವಿತ ವರದಿಗಳ ಬಗ್ಗೆ ನಮಗೆ ತಿಳಿದಿದೆ" ಎಂದು ಹೇಳಿದರು.

"ಭಾರತದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಅಭಿವೃದ್ಧಿಯನ್ನು ಸರ್ಕಾರವು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವುಗಳನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಅವರು ಹೇಳಿದರು.

Recommended Video

ಊರ್ವಶಿ ರೌಟೇಲಾ ಹೇಳಿಕೆಗೆ ಫುಲ್ ಗರಂ‌ ಆದ ರಿಷಬ್ ಪಂತ್ ತಿರುಗೇಟು ಕೊಟ್ಟಿದ್ದು ಹೀಗೆ.. | *Cricket | OneIndia

English summary
The Harbour Master for the Hambantota Port has said that no vessel can enter the port without his permission, the newsfirst.lk website reported. The possible move comes days after India expressed apprehensions over the Chinese research vessel Yuan Wang 5 ship’s presence in the island nation and told Sri Lanka that it could pose a threat to its national security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X