ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧಿಯ ಸಣ್ಣ ವಯಸ್ಸಿನ ಫೋಟೋ ಹಾಕಿ ಚೀನಾ ಪೊಲೀಸರ ಎಡವಟ್ಟು

|
Google Oneindia Kannada News

ನೈರುತ್ಯ ಚೀನಾದ ಪೊಲೀಸರು ತಾವು ಮಾಡಿದ ಘನಂದಾರಿ ಕೆಲಸಕ್ಕೆ ಕ್ಷಮೆ ಕೋರಿದ್ದಾರೆ. ಅಪರಾಧಿಯೊಬ್ಬನ ಫೋಟೋವನ್ನು ಹಾಕುವ ಜಾಗದಲ್ಲಿ ಆತನ ಬಾಲ್ಯದ ಫೋಟೋ ಹಾಕಿ, ನಗೆಪಾಟಲಾಗಿದ್ದಾರೆ. ಈ ಫೋಟೋವನ್ನು ಮಂಗಳವಾರದಂದು ಝೆನ್ ಕ್ಸಿಯಾಂಗ್ ನ ಯುನ್ನಾನ್ ಪ್ರಾಂತ್ಯದ ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಪೊಲೀಸರು ಒಟ್ಟು ನೂರು ಫೋಟೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನಾಲ್ಕು ಮಕ್ಕಳ ಭಾವಚಿತ್ರಗಳಾಗಿದ್ದು, ಅದರಲ್ಲೂ ಒಂದು ಫೋಟೋ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಪ್ರಾಥಮಿಕ ಶಾಲೆ ಓದುವ ವಯಸ್ಸಿನ ವಿದ್ಯಾರ್ಥಿ ನೀಲಿ ಶರ್ಟ್ ಹಾಕಿದ್ದು, ಅಮಾಯಕನಾಗಿ ಕ್ಯಾಮೆರಾ ಕಡೆಗೆ ನೋಡುತ್ತಿದ್ದಾನೆ.

ಭಾರತದಿಂದಲೇ ನನ್ನ ಉತ್ತರಾಧಿಕಾರಿ ಎಂದು ಚೀನಾಕ್ಕೆ ಟಾಂಗ್ ಕೊಟ್ಟ ದಲೈಲಾಮಭಾರತದಿಂದಲೇ ನನ್ನ ಉತ್ತರಾಧಿಕಾರಿ ಎಂದು ಚೀನಾಕ್ಕೆ ಟಾಂಗ್ ಕೊಟ್ಟ ದಲೈಲಾಮ

ಜಿ ಕಿಂಗೈ, ಪುರುಷ, ಹನ್ ಜನಾಂಗ... ಸಾರ್ವಜನಿಕವಾಗಿ ಅತಿರೇಕದ ವರ್ತನೆ ಮಾಡಿದ ಪ್ರಕರಣದಲ್ಲಿ ಬೇಕಾಗಿದ್ದಾನೆ ಎಂದು ಪೊಲೀಸ್ ಘೋಷಣೆಯ ನೋಟಿಸ್ ನಲ್ಲಿದೆ. ಅದರಲ್ಲಿ ಐಡಿ ಸಂಖ್ಯೆ ಕೂಡ ಇದೆ. ಯಾವಾಗ ಈ ಫೋತೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಪೊಲೀಸರನ್ನು ಟ್ರೋಲ್ ಮಾಡಲು ಶುರುವಾಯಿತೋ ಆಗ ಎಚ್ಚೆತ್ತು, ನಮ್ಮ ಬಳಿ ಆತನ ಈಚಿನ ಫೋಟೋ ಇರಲಿಲ್ಲ ಎಂದು ಪೊಲೀಸರು ಸಮರ್ಥನೆ ನೀಡಿದ್ದಾರೆ.

Chinese police trolled for using criminals childhood picture on wanted poster

ಆತನ ಕಣ್ಣು, ಮೂಗು, ಕಿವಿ, ಬಾಯಿ, ಕಣ್ಣು ಹುಬ್ಬು ಹೀಗೆ ಆತನ ಚಹರೆಯಲ್ಲಿ ಅಂಥ ಬದಲಾವಣೆ ಆಗಿಲ್ಲ. ಬೇರೆ ಯಾವುದೇ ಸುಳಿವಿದ್ದರೆ ಜನರೇ ನೀಡಲಿ ಎಂದಿದ್ದಾರೆ ಪೊಲೀಸರು. ಆದರೆ ಯಾವಾಗ ವಿಪರೀತ ಟೀಕೆ ವ್ಯಕ್ತವಾಯಿತೋ ಪೊಲೀಸರು ಕ್ಷಮೆ ಕೋರಿದ್ದರೆ.

English summary
Police in a county in southwestern China have apologised for posting a picture of a criminal - from when he was a child. The photo was released on Tuesday by officers in Zhenxiong county, Yunnan province, reports South China Morning Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X