ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಪಾಲುದಾರರಾಗಬೇಕೇ ಹೊರತು ಪ್ರತಿಸ್ಪರ್ಧಿಗಳಲ್ಲ: ಚೀನಾ

|
Google Oneindia Kannada News

ನವದೆಹಲಿ, ಜುಲೈ 11: ಭಾರತ ಮತ್ತು ಚೀನಾ ಪಾಲುದಾರರಾಗಿರಬೇಕೇ ಹೊರತು ಪ್ರತಿಸ್ಪರ್ಧಿಗಳಲ್ಲ ಎಂದು ಚೀನಾ ರಾಯಭಾರಿ ಸನ್ ವೀಡಾಂಗ್ ತಿಳಿಸಿದ್ದಾರೆ.

Recommended Video

Drone Prathap ಇಷ್ಟು ದಿನ ಹೇಳಿದ್ದೆಲ್ಲಾ ಸುಳ್ಳಾ ? | Oneindia Kannada

ಎರಡೂ ದೇಶಗಳು ಪರಸ್ಪರ ನಂಬಿಕೆ ಇಟ್ಟುಕೊಳ್ಳಬೇಕು, ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಬಾರದಂತೆ ನೋಡಿಕೊಳ್ಳಬೇಕು. ಚೀನಾವು ಯುದ್ಧೋಚಿತ ದೇಶವಲ್ಲ. ಗಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಏನಾಯಿತು ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಭಾರತ-ಚೀನಾ ಯೋಧರ ಘರ್ಷಣೆ; ವೈರಲ್ ಆದ ವಿಡಿಯೋಭಾರತ-ಚೀನಾ ಯೋಧರ ಘರ್ಷಣೆ; ವೈರಲ್ ಆದ ವಿಡಿಯೋ

ಗಡಿಯ ಪ್ರಶ್ನೆಯು ಅಧ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾದದ್ದು ,ಚೀನಾ ಮತ್ತು ಭಾರತಕ್ಕೆ ಮುಖಾಮುಖಿಯಾಗುವದಕ್ಕಿಂತಲೂ ಶಾಂತಿ ಬೇಕಾಗಿದೆ. ಶೂನ್ಯ ಮೊತ್ತದ ಆಟಕ್ಕಿಂತಲೂ ಗೆಲುವಿನ ಸಹಕಾರ ಬೇಕಾಗಿದೆ.ನಂಬಿಕೆಯನ್ನು ಬೆಳೆಸಬೇಕಾಗಿದೆ. ಸಂಬಂಧಗಳು ಹಿಂದೆ ಆಗುವ ಬದಲು ಮುಂದುವರೆಯಬೇಕು ಎಂದು ಅವರು ಹೇಳಿದ್ದಾರೆ.

Chinese Ambassador Says India, China Should Be Partners Not Rivals

ಶಾಂತಿ ಮತ್ತು ಸಂಯಮದಿಂದ ಭಾರತ ಹಾಗೂ ಚೀನಾ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಸನ್ ವೀಡಾಂಗ್ ತಿಳಿಸಿದ್ದಾರೆ. ಗಡಿ ವಿಚಾರ ಕುರಿತು ಅಂತಿಮ ಇತ್ಯರ್ಥ ಬಾಕಿ ಇದ್ದು, ಗಡಿ ಪ್ರದೇಶಗಳಲ್ಲಿ ಶಾಂತಿ ನೆಮ್ಮದಿ ಕಾಪಾಡಲು ಎರಡೂ ದೇಶಗಳು ಒಪ್ಪಿಗೆ ಸೂಚಿಸಿದ್ದಾರೆ.

ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ನಡುವೆ ಏರ್ಪಟ್ಟಿದ್ದ ಘರ್ಷಣೆಯಲ್ಲಿ ಭಾರತದಲ್ಲಿ 20 ಸೈನಿಕರು ಮೃತಪಟ್ಟಿದ್ದಾರೆ. ಈ ರೀತಿ ಆಗಬಾರದಿತ್ತು. ಗಡಿಯಲ್ಲಿರುವ ಪರಿಸ್ಥಿತಿಯನ್ನು ಚೀನಾ ಅಥವಾ ಭಾರತಕ್ಕೆ ನೋಡಲು ಸಾಧ್ಯವಿಲ್ಲ.

ಚೀನಾ-ಭಾರತ ದ್ವೇಷವನ್ನು ಮರೆತು ಮತ್ತೆ ಒಂದಾಗುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.

English summary
China and India should be partners rather than rivals, Chinese Ambassador to India Sun Weidong said on Friday, adding that the two countries should build mutual trust and should not allow differences to interfere with bilateral relations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X