• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಮತ್ತೆ ಕೊರೊನಾ ಆತಂಕ; ಗುವಾಂಗ್‌ಜೌನಲ್ಲಿ ಲಾಕ್‌ಡೌನ್

|
Google Oneindia Kannada News

ಬೀಜಿಂಗ್, ಜೂನ್ 01: ಕೊರೊನಾ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿದ್ದ ಚೀನಾದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿವೆ.

ಚೀನಾದ ದಕ್ಷಿಣ ಭಾಗದ ಗುವಾಂಗ್ ಜೌ ನಗರದಲ್ಲಿ ಮಂಗಳವಾರ ಹನ್ನೊಂದು ಪ್ರಕರಣಗಳು ಪತ್ತೆಯಾಗಿದ್ದು, ಮತ್ತೆ ಲಾಕ್‌ಡೌನ್ ಹೇರಲಾಗಿದೆ. ಗ್ವಾಂಗ್‌ಡಂಗ್ ಪ್ರಾಂತ್ಯದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಯಾರೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಚೀನಾದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಸೋಂಕು, ವಿಮಾನಗಳ ಹಾರಾಟ ಸ್ಥಗಿತಚೀನಾದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಸೋಂಕು, ವಿಮಾನಗಳ ಹಾರಾಟ ಸ್ಥಗಿತ

ಚೀನಾದ ಇತರೆ ಸ್ಥಳಗಳಿಗೆ ಪ್ರಯಾಣಿಸಲು ಬಯಸುವವರಿಗೆ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಶಾಲೆ, ಮನರಂಜನೆ, ಮಾರುಕಟ್ಟೆಗಳನ್ನು ಮುಚ್ಚಲಾಗಿದೆ.

ಈಚೆಗೆ ಗುವಾಂಗ್ ಜೌನಲ್ಲಿ ಮೂವತ್ತಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲೇ ವಿಮಾನ ಹಾರಾಟವನ್ನು ಸೋಮವಾರ ಸ್ಥಗಿತಗೊಳಿಸಲಾಗಿತ್ತು.

ಗ್ವಾಂಗ್‌ಡಂಗ್ ಪ್ರದೇಶದಲ್ಲಿ ಈ ನಗರವಿದ್ದು ಇದು ಹಾಂಗ್‌ಕಾಂಗ್ ಸಮೀಪದಲ್ಲಿದೆ. ಇದು ವಾಣಿಜ್ಯ ಹಾಗೂ ಕೈಗಾರಿಕಾ ಕೇಂದ್ರವಾಗಿದ್ದು, ಸದ್ಯಕ್ಕೆ ಇಲ್ಲಿ ಎಲ್ಲವನ್ನೂ ಲಾಕ್‌ ಮಾಡಲಾಗಿದೆ. ಗುವಾಂಗ್‌ಜೌ ನಗರದಲ್ಲಿ ಪ್ರಯಾಣ ನಿರ್ಬಂಧ ಹೇರಿದ್ದು, ವಿಮಾನ, ರೈಲು ಅಥವಾ ಖಾಸಗಿ ವಾಹನಗಳ ಮೂಲಕ ಗುವಾಂಗ್‌ಜೌ ನಗರದಿಂದ ಬೇರೆಡೆಗೆ ಪ್ರಯಾಣಿಸುವವರು ಕಡ್ಡಾಯವಾಗಿ 72 ಗಂಟೆಯೊಳಗಿನ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಚೀನಾದಲ್ಲಿ ಪತ್ತೆಯಾಗಿರುವ ಈ ಸೋಂಕು ಭಾರತ ಮೂಲದ ರೂಪಾಂತರ ಸೋಂಕು. 75 ವರ್ಷದ ಮಹಿಳೆಯಲ್ಲಿ ಮೇ 21ರಂದು ಈ ಸೋಂಕು ಪತ್ತೆಯಾಗಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

English summary
China’s southern Guangzhou city is under lockdown to contain Covid outbreak from becoming more widespread
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X