• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿಯಂತ್ರಿಸಲು ಸ್ಮಾರ್ಟ್ ಹೆಲ್ಮೆಟ್ ಬಳಸುತ್ತಿರುವ ಚೀನಾ

|
Google Oneindia Kannada News

ಚೀನಾ, ಮಾರ್ಚ್ 9: ವಿಶ್ವಾದ್ಯಂತ ನರಬಲಿ ಪಡೆಯುತ್ತಿರುವ ಕೊರೊನಾ ವೈರಸ್‌ಗೆ ಇದುವರೆಗೂ ಯಾವುದೇ ಪರಿಹಾರ ಚಿಕಿತ್ಸೆ ಕಂಡುಹಿಡಿದಿಲ್ಲ. ವೈದ್ಯಲೋಕಕ್ಕೆ ಸವಾಲಾಗಿರುವ ಕೊರೊನಾಗೆ ಚಿಕಿತ್ಸೆ ಇಲ್ಲವಾದರೂ ಅದನ್ನ ಪ್ರಾಥಮಿಕ ಹಂತದಲ್ಲಿ ನಿಯಂತ್ರಿಸುವ ಕೆಲಸ ಪ್ರಯತ್ನ ನಡೆಯುತ್ತಿದೆ.

ಕೊರೊನಾ ವೈರಸ್ ಹರಡದಂತೆ ಹಲವು ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಚೀನಾ ಪೊಲೀಸರು ಸ್ಮಾರ್ಟ್ ಹೆಲ್ಮೆಟ್ ಬಳಸುವ ಮೂಲಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಈ ಸ್ಮಾರ್ಟ್ ಹೆಲ್ಮೆಟ್ ಹಾಕಿಕೊಂಡರೆ ಕೊರೊನಾ ವೈರಸ್ ಸೋಂಕಿಗೆ ಗುರಿಯಾದವರನ್ನು ಸುಲಭವಾಗಿ ಪತ್ತೆಹಚ್ಚಬಹುದು. ಸದ್ಯ ಚೀನಾದ ಸ್ಮಾರ್ಟ್ ಹೆಲ್ಮೆಟ್‌ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಹಾಗಿದ್ರೆ, ಸ್ಮಾರ್ಟ್ ಹೆಲ್ಮೆಟ್ ಹೇಗಿದೆ. ವಿಡಿಯೋ ಮುಂದಿದೆ.

ಪಾದಾಚಾರಿಗಳ ದೇಹದ ಉಷ್ಣಾಂಶ ಪತ್ತೆ

ಪಾದಾಚಾರಿಗಳ ದೇಹದ ಉಷ್ಣಾಂಶ ಪತ್ತೆ

ಕೊರೊನಾ ವೈರಸ್ ಸೋಂಕು ತಗುಲಿದ್ಯಾ ಎಂದು ಪತ್ತೆ ಹಚ್ಚಲು ದೇಹದ ಉಷ್ಣಾಂಶದ ಮೇಲೆ ಪ್ರಮುಖವಾಗಿ ಗಮನ ಹರಿಸಲಾಗುತ್ತಿದೆ. ಉಷ್ಣಾಂಶದಲ್ಲಿ ಏರುಪೇರಾಗಿದ್ದರೆ ಆತನಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಂತಾಗುತ್ತದೆ. ಇದೀಗ, ಚೀನಾದಲ್ಲಿ ಬಳಸಲಾಗುತ್ತಿರುವ ಸ್ಮಾರ್ಟ್ ಹೆಲ್ಮೆಟ್ ದೇಹದ ಉಷ್ಣಾಂಶ ಪತ್ತೆ ಹಚ್ಚಲು ಬಹಳ ಸಹಕಾರಿಯಾಗುತ್ತಿದೆ.

ಹೆಲ್ಮೆಟ್ ಧರಿಸಿದರೆ ಉಷ್ಣಾಂಶ ಗೋಚರ

ಹೆಲ್ಮೆಟ್ ಧರಿಸಿದರೆ ಉಷ್ಣಾಂಶ ಗೋಚರ

ಸ್ಮಾರ್ಟ್ ಹೆಲ್ಮೆಟ್ ಹಾಕಿಕೊಂಡರೆ ಎದುರಗಡೆ ಇರುವ ವ್ಯಕ್ತಿಯ ದೇಹದ ಉಷ್ಣಾಂಶ ಎಷ್ಟಿದೆ ಎಂಬುದು ಡಿಜಿಟಲ್ ಆಗಿ ಗೋಚರವಾಗುತ್ತೆ. ಹಾಗಾಗಿ, ಸಾಮಾನ್ಯ ವ್ಯಕ್ತಿಯ ಉಷ್ಣಾಂಶಕ್ಕಿಂತ ಕಡಿಮೆ ಅಥವಾ ತೀರಾ ಕಡಿಮೆ ಅಥವಾ ತೀರಾ ಹೆಚ್ಚು ಉಷ್ಣಾಂಶ ಕಂಡು ಬಂದಲ್ಲಿ ಅಂತವರ ಬಗ್ಗೆ ವಿಶೇಷವಾಗಿ ಗಮನ ಹರಿಸಲು ಇದು ಸೂಕ್ತವಾಗಿದೆ. ಈ ಕಾರಣದಿಂದ ಸ್ಮಾರ್ಟ್ ಹೆಲ್ಮೆಟ್ ಚೀನಾದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮಾಸ್ಟರ್ ಪ್ಲಾನ್ ಮಾಡಿದ ಚೀನಾ

5 ಮೀಟರ್ ಅಂತರದಲ್ಲಿರುವವರ ದೇಹದ ಉಷ್ಣಾಂಶವನ್ನು ಈ ಹೆಲ್ಮೆಟ್ ಗಮನಿಸುತ್ತೆ. ಏಕಕಾಲದಲ್ಲಿ ನೂರು ಜನರು ಒಂದೆಕಡೆ ಬಂದರು ಅವರ ದೇಹದ ಉಷ್ಣಾಂಶವನ್ನು ಸೆರೆಹಿಡಿಯುವ ತಂತ್ರಜ್ಞಾನ ಈ ಸ್ಮಾರ್ಟ್ ಹೆಲ್ಮೆಟ್ ನಲ್ಲಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕೊರೊನಾ ವಿರುದ್ಧ ಚೀನಾ ಸಮರ

ಕೊರೊನಾ ವಿರುದ್ಧ ಚೀನಾ ಸಮರ

ಇದುವರೆಗೂ ಚೀನಾದಲ್ಲಿ ಅತಿ ಹೆಚ್ಚು ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಚೀನಾದಲ್ಲೇ ಈ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಚೀನಾ ಒಂದರಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದ್ದು, 3100ಕ್ಕೂ ಜನ ಸಾವನ್ನಪ್ಪಿದ್ದಾರೆ. ಚೀನಾದಿಂದ ಶುರುವಾದ ಈ ಕೊರೊನಾ ವೈರಸ್ ಈಗ ಜಗತ್ತಿನ 77ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ.

English summary
code-read cameras were adapted in China to spot fever people in crowds accurately as a method to control the novel coronavirus epidemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X