ಸೀಟಿಗಾಗಿ ಮಹಿಳೆಯರ ಕಿತ್ತಾಟ, ಉಟ್ಟ ಬಟ್ಟೆ ಚಿಂದಿ, ಚಿಂದಿ!
ನವದೆಹಲಿ, ಆಗಸ್ಟ್ .10: ಊರಿನಿಂದ ರೈಲಿನ ಜನರಲ್ ಬೋಗಿಯಲ್ಲಿ ಬರುವಾಗ, ಬಿಎಂಟಿಸಿ ಬಸ್ ಏರಿದಾಗ ಸೀಟಿಗಾಗಿ ಕಿತ್ತಾಟ ಮಾಮೂಲು. ಈಗ ಚುನಾವಣಾ ಟಿಕೆಟ್ ಸೀಟಿಗಾಗಿಯೂ ಕಿತ್ತಾಟ ಸಾಮಾನ್ಯವಾಗಿದೆ. ಕಿತ್ತಾಟ ಮುಂದುವರಿದು ಜಗಳವಾಗೋದು ಕಾಮನ್ ಅನ್ನುವಷ್ಟರ ಮಟ್ಟಿಗೆ ಆಗಿಹೋಗಿದೆ. ನಮ್ಮಲ್ಲಿ ಕೆಲವರು ಹೊಡೆದಾಟಕ್ಕೆ ಇಳಿದರೆ, ಇನ್ನು ಕೆಲವರು ತಮ್ಮ 'ಭಾಷಾ ಪ್ರೌಢಿಮೆ'ಯನ್ನು ಪಕ್ಕದಲ್ಲಿದ್ದ ಎಲ್ಲರಿಗೆ ಮನದಟ್ಟು ಮಾಡಿಕೊಡುತ್ತಾರೆ.
ಇದಕ್ಕೆ ದೇಶ, ಭಾಷೆ ಗಳ ಗಡಿ ಇಲ್ಲ ಬಿಡಿ. ಪಕ್ಕದ ಚೀನಾದಲ್ಲಿ ಮಹಿಳೆಯರಿಬ್ಬರು ರೈಲ್ವೆ ಸೀಟಿಗಾಗಿ ಯಾವ ಪರಿ ಕಿತ್ತಾಡಿಕೊಂಡಿದ್ದಾರೆ ಎಂದರೆ ಇಬ್ಬರ ಬಟ್ಟೆಗಳು ಚಿಂದಿ ಚಿಂದಿ! (ತೊಟ್ಟಿದ್ದ ಬಟ್ಟೆ-ಬರೆಗಳು ಅಷ್ಟೇನು ಇರಲಿಲ್ಲ ಬಿಡಿ!)[ಈ ಗುಣ ಗಂಡು ಹೆಣ್ಣು ಅರ್ಥ ಮಾಡಿಕೊಂಡರೆ!]

ಬೀಜಿಂಗ್ ನ ಸಬ್‌ವೇ ರೈಲಿನಲ್ಲಿ ಖಾಲಿ ಇದ್ದ ಸೀಟ್ ತನಗೇ ಬೇಕೆಂದು ಹಠಕ್ಕೆ ನಿಂತ ಇಬ್ಬರು ಮಹಿಳೆಯರು ಮೊದಲು ಬೈದುಕೊಂಡಿದ್ದಾರೆ. ಅದು ಮುಂದಕ್ಕೆ ಹೋಗಿ ಜಗಳವಾಗಿದೆ. ಕೊನೆಗೆ ತಾಳ್ಮೆ ಕಳೆದುಕೊಂಡ ಇಬ್ಬರು ಕೈಕೈ ಮಿಲಾಯಿಸಿ ಬಟ್ಟೆಗಳನ್ನೆಲ್ಲ ಪರಸ್ಪರ ಹರಿದು ಹಾಕಿಕೊಂಡಿದ್ದು ಪಕ್ಕದಲ್ಲಿದ್ದವರಿಗೆ ಪುಕ್ಕಟೆ ಮನರಂಜನೆ ನೀಡಿದ್ದಾರೆ.[ನಾನು ಹೇಳಿದಂತೆಯೇ ಆಗಬೇಕೆಂಬ ಹಠ ಯಾಕೆ?]
ಯೂ ಟ್ಯೂಬ್ ನಲ್ಲಿ ಹರಿದಾಡುತ್ತಿರುವ ಜಗಳದ ವಿಡಿಯೋವನ್ನು ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಸೀಟಿಗಾಗಿ ಜಗಳ ಮಾಡಿ ಆದರೆ ಕೈ ಕೈ ಮಿಲಾಯಿಸಿದರೂ ಈ ರೀತಿ ಮಾನ ಮರ್ಯಾದೆ ಮಾತ್ರ ಹರಾಜು ಹಾಕಿಕೊಳ್ಳಬೇಡಿ ಎಂಬ ಕಿವಿಮಾತನ್ನು ಅವರಿಗೆ ಯಾರೂ ಹೇಳಿಲ್ಲ!












Click it and Unblock the Notifications