• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧಿಕಾರದಿಂದ ಇಳಿಯುತ್ತಿದ್ದಂತೆಯೇ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಚೀನಾ

|

ಬೀಜಿಂಗ್, ಜನವರಿ 21: ಅಮೆರಿಕದ ನಿರ್ಗಮಿತ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ಡೊನಾಲ್ಡ್ ಟ್ರಂಪ್ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಇತರೆ 27 ಉನ್ನತ ಅಧಿಕಾರಿಗಳ ಮೇಲೆ ಚೀನಾ ನಿರ್ಬಂಧ ವಿಧಿಸಿದೆ. ಚೀನಾ ವಿರುದ್ಧ ದ್ವೇಷ ಸಾಧಿಸಿದ್ದು ಮತ್ತು ತನ್ನ ಹಿತಾಸಕ್ತಿಗಳಿಗೆ ಹಾನಿ ಮಾಡಲು ಹುಚ್ಚು ನಡೆಗಳನ್ನು ಅವರು ಅನುಸರಿಸಿದ್ದರು ಎಂದು ಅದು ಆರೋಪಿಸಿದೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅವರು ವಾಷಿಂಗ್ಟನ್‌ನಲ್ಲಿ ಬುಧವಾರ ಪ್ರಮಾಣವಚನ ಸ್ವೀಕರಿಸಿ, ಡೊನಾಲ್ಡ್ ಟ್ರಂಪ್ ಅಧಿಕಾರ ತ್ಯಜಿಸಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೂಲಕ ತಮ್ಮ ನಾಲ್ಕು ವರ್ಷಗಳ ಆಡಳಿತದುದ್ದಕ್ಕೂ ಚೀನಾ ವಿರೋಧಿ ನಿಲುವು ಪ್ರದರ್ಶಿಸಿಕೊಂಡುಬಂದಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧ ಬೀಜಿಂಗ್ ಸೇಡು ತೀರಿಸಿಕೊಂಡಿದೆ.

ತೈವಾನ್‌ಗೆ ಅಮೆರಿಕ ರಾಯಭಾರಿ ಭೇಟಿ ನೀಡಿದರೆ, ಭಾರಿ ಬೆಲೆ ತೆರಬೇಕಾದೀತು: ಚೀನಾತೈವಾನ್‌ಗೆ ಅಮೆರಿಕ ರಾಯಭಾರಿ ಭೇಟಿ ನೀಡಿದರೆ, ಭಾರಿ ಬೆಲೆ ತೆರಬೇಕಾದೀತು: ಚೀನಾ

ಚೀನಾ ಸರ್ಕಾರ ಮತ್ತು ಅದರ ಸರ್ಕಾರಿ ಮಾಧ್ಯಮಗಳ ವಿರುದ್ಧ ನಿರಂತರ ಟೀಕಾಪ್ರಹಾರ ನಡೆಸುತ್ತಿದ್ದ ಪೊಂಪಿಯೋ, ಕ್ಸಿಂಜಿಯಾಂಗ್ ಯಿಘುರ್ ಸ್ವಾಯತ್ತ ಪ್ರದೇಶದಲ್ಲಿ ಯಿಘುರ್ ಮುಸ್ಲಿಮರ ವಿರುದ್ಧ ಚೀನಾ ಹತ್ಯಾಕಾಂಡ ನಡೆಸಿದೆ ಎಂದು ತಮ್ಮ ಕಚೇರಿಯಲ್ಲಿನ ಕೊನೆಯ ದಿನದಂದು ಕೂಡ ಆರೋಪಿಸಿದ್ದರು. ಇದರಿಂದ ಅವರ ವಿರುದ್ಧ ಕೋಪಗೊಂಡಿರುವ ಚೀನಾ ನಿರ್ಬಂಧದ ಕ್ರಮಕ್ಕೆ ಮುಂದಾಗಿದೆ. ಮುಂದೆ ಓದಿ.

ಚೀನಾ-ಅಮೆರಿಕ ಸಂಬಂಧ ಹಾಳುಮಾಡಿದರು

ಚೀನಾ-ಅಮೆರಿಕ ಸಂಬಂಧ ಹಾಳುಮಾಡಿದರು

'ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ಚೀನಾ ವಿರೋಧಿ ರಾಜಕಾರಣಿಗಳು, ತಮ್ಮ ಸ್ವಾರ್ಥ ರಾಜಕೀಯ ಹಿತಾಸಕ್ತಿಗಳು ಮತ್ತು ಪೂರ್ವಗ್ರಹ ಹಾಗೂ ಚೀನಾ ವಿರುದ್ಧದ ದ್ವೇಷದಿಂದ, ಚೀನೀಯರು ಮತ್ತು ಅಮೆರಿಕನ್ನರ ಹಿತಾಸಕ್ತಿಗಳಿಗೆ ಯಾವುದೇ ಮಹತ್ವ ನೀಡದೆ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಹುಚ್ಚು ಸರಣಿ ಕ್ರಮಗಳನ್ನು ರೂಪಿಸಿ, ಪ್ರಚೋದಿಸಿ ಮತ್ತು ಅನುಸರಿಸಿದರು. ಚೀನಾದ ಹಿತಾಸಕ್ತಿಗಳನ್ನು ಕಡೆಗಣಿಸಿದರು. ಚೀನಾದ ಜನರ ಮೇಲೆ ದಬ್ಬಾಳಿಕೆ ಮಾಡಿದರು ಮತ್ತು ಚೀನಾ-ಅಮೆರಿಕ ಸಂಬಂಧವನ್ನು ಗಂಭೀರವಾಗಿ ಹದಗೆಡಿಸಿದರು' ಎಂದು ಚೀನಾ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ಸಾರ್ವಭೌಮದ ಉಲ್ಲಂಘನೆ

ಸಾರ್ವಭೌಮದ ಉಲ್ಲಂಘನೆ

'ಚೀನಾ ಸರ್ಕಾರವು ತನ್ನ ರಾಷ್ಟ್ರೀಯ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸಲು ದೃಢ ನಿರ್ಧಾರ ತೆಗೆದುಕೊಂಡಿದೆ. ಚೀನಾದ ಸಾರ್ವಭೌಮವನ್ನು ಗಂಭೀರವಾಗಿ ಉಲ್ಲಂಘಿಸಿದ ಮತ್ತು ಚೀನಾ ಸಂಬಂಧಿತ ವಿಚಾರಗಳಲ್ಲಿನ ಅಮೆರಿಕದ ಅಂತಹ ನಡೆಗಳಿಗೆ ಮುಖ್ಯವಾಗಿ ಹೊಣೆಗಾರರಾದ 28 ಜನರ ಮೇಲೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ' ಎಂದು ಅದು ತಿಳಿಸಿದೆ.

ಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿ

ಪ್ರಮುಖ ಅಧಿಕಾರಿಗಳು

ಪ್ರಮುಖ ಅಧಿಕಾರಿಗಳು

ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿನ ವ್ಯಾಪಾರ ಇಲಾಖೆ ಮುಖ್ಯಸ್ಥ ಪೀಟರ್ ನವಾರೊ, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ರಾಬರ್ಟ್ ಒಬ್ರಿಯಾನ್ ಮತ್ತು ಜಾನ್ ಬೋಲ್ಟನ್, ಆರೋಗ್ಯ ಕಾರ್ಯಕರ್ತ ಅಲೆಕ್ಸ್ ಅಜರ್, ವಿಶ್ವಸಂಸ್ಥೆಯ ರಾಯಭಾರಿ ಕೆಲ್ಲಿ ಕ್ರಾಫ್ಟ್ ಮತ್ತು ಟ್ರಂಪ್ ಅವರ ಮಾಜಿ ಆಪ್ತ ಸ್ಟೀವ್ ಬನಾನ್ ನಿರ್ಬಂಧಕ್ಕೆ ಒಳಗಾದವರಲ್ಲಿ ಸೇರಿದ್ದಾರೆ.

ಚೀನಾ, ಹಾಂಕಾಂಗ್ ಬರುವಂತಿಲ್ಲ

ಚೀನಾ, ಹಾಂಕಾಂಗ್ ಬರುವಂತಿಲ್ಲ

'ಈ ವ್ಯಕ್ತಿಗಳು ಹಾಗೂ ಅವರ ಕುಟುಂಬದ ಸದಸ್ಯರು ಚೀನಾ ಮುಖ್ಯಭೂಮಿ, ಹಾಂಕಾಂಗ್ ಮತ್ತು ಚೀನಾದ ಮಕಾವೊ ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅವರು ಮತ್ತು ಅವರೊಂದಿಗೆ ನಂಟು ಹೊಂದಿರುವ ಕಂಪೆನಿಗಳು ಹಾಗೂ ಸಂಸ್ಥೆಗಳು ಕೂಡ ಚೀನಾದಲ್ಲಿ ಯಾವುದೇ ವ್ಯವಹಾರ ನಡೆಸದಂತೆ ನಿಬಂಧನೆ ಹೇರಲಾಗಿದೆ' ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಚೀನಾದ 8 ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳ ಮೇಲೆ ನಿಷೇಧ ಹೇರಿದ ಅಮೆರಿಕಚೀನಾದ 8 ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳ ಮೇಲೆ ನಿಷೇಧ ಹೇರಿದ ಅಮೆರಿಕ

English summary
China sanctioned outgoing US Secretary of state Mike Pompeo and 27 other top officials of former President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X