• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಲ್ಲೇ ಮೊದಲ ಬಾರಿಗೆ ಚೀನಾದಲ್ಲಿ ಮಾನವನಲ್ಲಿ H10N3 ಹಕ್ಕಿ ಜ್ವರ ಪತ್ತೆ

|
Google Oneindia Kannada News

ಬೀಜಿಂಗ್, ಜೂ. 1: ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಹೆಚ್ 10 ಎನ್ 3 (H10N3) ಹಕ್ಕಿ ಜ್ವರವು ಮಾನವನಲ್ಲಿ ದೃಢಪಟ್ಟಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.

Recommended Video

   ಪ್ರಪಂಚದಲ್ಲೇ ಮೊದಲ ಬಾರಿಗೆ ಮಾನವನ ದೇಹದಲ್ಲಿ ಕಾಣಿಸಿಕೊಂಡ H10N3 ವೈರಸ್ | Oneindia Kannada

   ಪೂರ್ವ ಪ್ರಾಂತ್ಯದ ನಗರವಾದ ಜಿಯಾಂಗ್ಸುನಲ್ಲಿ ವಾಸಿಸುತ್ತಿರುವ 41 ವರ್ಷ ವಯಸ್ಸಿನ ಪುರುಷನೋರ್ವನಲ್ಲಿ ಈ H10N3 ಹಕ್ಕಿ ಜ್ವರ ಪತ್ತೆಯಾಗಿದ್ದು ಈ ಸೋಂಕು ಕೋಳಿಮಾಂಸ ಸೇವನೆಯಿಂದ ಹಕ್ಕಿಯಿಂದ ಮಾನವನಿಗೆ ಹರಡಿದೆ ಎಂದು ಕೂಡಾ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

   ಕೊರೊನಾಗೂ ಮುನ್ನ ವುಹಾನ್‌ ಲ್ಯಾಬ್‌ನ 3 ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗಿದ್ದರುಕೊರೊನಾಗೂ ಮುನ್ನ ವುಹಾನ್‌ ಲ್ಯಾಬ್‌ನ 3 ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗಿದ್ದರು

   ಇನ್ನು ಈ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುವ ಅಪಾಯವು ತುಂಬಾ ಕಡಿಮೆಯಾಗಿದೆ. ಈ ಹಿಂದೆ ಜಗತ್ತಿನಲ್ಲಿ H10N3 ಹಕ್ಕಿ ಜ್ವರ ಮಾನವನಲ್ಲಿ ಪತ್ತೆಯಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಎನ್‌ಎಚ್‌ಸಿ ತಿಳಿಸಿದೆ.

   ಚೀನೀ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಕಳೆದ ವಾರ ರೋಗಿಯಿಂದ ರಕ್ತದ ಮಾದರಿಯಲ್ಲಿ ಸಂಗ್ರಹಿಸಿದ್ದು ಅದರಲ್ಲಿ H10N3 ಹಕ್ಕಿ ಜ್ವರ ದೃಢಪಟ್ಟಿದೆ. ಸ್ಥಳೀಯ ಅಧಿಕಾರಿಗಳು ರೋಗಿಯ ಸಂಪರ್ಕಗಳನ್ನು ಪತ್ತೆಹಚ್ಚಿದ್ದು ಅವರ ರಕ್ತದ ಮಾದರಿಯನ್ನು ಕೂಡಾ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.

   ಈ ಪ್ರದೇಶದ ಜನರು ಅನಾರೋಗ್ಯ ಅಥವಾ ಸತ್ತ ಕೋಳಿಗಳ ಸಂಪರ್ಕದಿಂದ ದೂರವಿರಬೇಕು. ಪಕ್ಷಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

   ನಾನಾ-ನೀನಾ: ಕೊರೊನಾವೈರಸ್ ಹಿಂದೆ ಇರುವುದೇ ಚೀನಾ!?ನಾನಾ-ನೀನಾ: ಕೊರೊನಾವೈರಸ್ ಹಿಂದೆ ಇರುವುದೇ ಚೀನಾ!?

   ಆಹಾರ ನೈರ್ಮಲ್ಯದ ಬಗ್ಗೆ ಗಮನ ಹರಿಸಬೇಕು, ಮಾಸ್ಕ್‌ ಧರಿಸಬೇಕು, ಜಾಗರೂಕರಾಗಿರಬೇಕು, ಜ್ವರ ಮತ್ತು ಉಸಿರಾಟದ ಸಮಸ್ಯೆಯ ಲಕ್ಷಣಗಳು ಕಂಡು ಬಂದರೆ ಪರೀಕ್ಷಿಸಬೇಕು ಎಂದು ಎನ್‌ಎಚ್‌ಸಿ ಸಲಹೆ ನೀಡಿತು.

   China reports first human case of H10N3 bird flu

   ಫೆಬ್ರವರಿಯಲ್ಲಿ, ಚೀನಾ ಪೂರ್ವ ಪ್ರಾಂತ್ಯದ ಜಿಯಾಂಗ್ಸುನಲ್ಲಿರುವ ಕರಾವಳಿ ನಗರವಾದ ಲಿಯಾನ್ಯುಂಗಾಂಗ್‌ನಲ್ಲಿ ಎಚ್ 5 ಎನ್ 8 ಏವಿಯನ್ ಇನ್ಫ್ಲುಯೆನ್ಸ್‌ನ ಮೊದಲ ಪ್ರಕರಣವನ್ನು ಚೀನಾ ವರದಿ ಮಾಡಿತ್ತು. ಈ ಪ್ರದೇಶದಲ್ಲಿ ಕಾಡು ಪಕ್ಷಿಗಳಲ್ಲಿ ಹೆಚ್ಚು ರೋಗಕಾರಕ ಏವಿಯನ್ ಇನ್ಫ್ಲುಯೆನ್ಸ್‌ ರೋಗ ಪತ್ತೆಯಾಗಿದೆ.

   ಏಪ್ರಿಲ್‌ನಲ್ಲಿ, ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಶೆನ್ಯಾಂಗ್ ಎಂಬ ನಗರದ ಕಾಡು ಪಕ್ಷಿಗಳಲ್ಲಿ ಹೆಚ್ಚು ರೋಗಕಾರಕ H5N6 ಏವಿಯನ್ ಜ್ವರ ಕಂಡುಬಂದಿದೆ.

   (ಒನ್ಇಂಡಿಯಾ ಸುದ್ದಿ)

   English summary
   China reports first human case of H10N3 bird flu, There has not been any case of human infection of H10N3 reported in the world before said China's National Health Commission.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X