ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಪಾಕ್-ಚೀನಾ ಮಧ್ಯೆ ಖಾಸಗಿ ಬಸ್ ಸೇವೆ

ನವದೆಹಲಿ, ನವೆಂಬರ್ 6: ಭಾರತದ ಪ್ರಬಲ ವಿರೋಧದ ಮಧ್ಯೆಯೂ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಪಾಕ್ ಹಾಗೂ ಚೀನಾ ಖಾಸಗಿ ಬಸ್ ಸೇವೆ ಆರಂಭಿಸಿವೆ. ಪಾಕಿಸ್ತಾನದ ಲಾಹೋರ್ ಹಾಗೂ ಚೀನಾದ ಕಶ್ಗರ್ ಮಧ್ಯೆ ಸಂಚರಿಸುವ ಈ ಬಸ್ ಗೆ ಸೋಮವಾರ ರಾತ್ರಿ ಚಾಲನೆ ನೀಡಲಾಯಿತು.

ಲಾಹೋರ್ ನ ಗುಲ್ಬರ್ಗ್ ಪ್ರದೇಶದಿಂದ ಮೊದಲ ಬಸ್ ಕಶ್ಗರ್ ಗೆ ತೆರಳಿತು. ಒಂದು ಕಡೆಯ ಪ್ರಯಾಣಕ್ಕೆ 30 ಗಂಟೆ ಸಮಯ ಆಗುತ್ತದೆ. ಈ ಬಸ್ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನದ ಪ್ರದೇಶದ ಮೂಲಕ ಸಂಚರಿಸುತ್ತದೆ.

"ಚೀನಾ ಮತ್ತು ಪಾಕಿಸ್ತಾನದ ಈ ಬಸ್ ಸೇವೆಯು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ ಮೂಲಕ ಸಂಚರಿಸುತ್ತದೆ. ಅದು ಈಗಾಗಲೇ ಕರೆದುಕೊಂಡಿರುವ ಚೀನ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಹೆಸರಿನಲ್ಲಿ. ಇದಕ್ಕೆ ಭಾರತದಿಂದ ಪ್ರಬಲ ಪ್ರತಿಭಟನೆ ವ್ಯಕ್ತಪಡಿಸಲಾಗಿತ್ತು" ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಈಚೆಗೆ ಹೇಳಿದ್ದರು.

China-Pakistan

ಪಿಒಕೆ ಮೂಲಕ ಸಾಗುವ ಎಕನಾಮಿಕ್ ಕಾರಿಡಾರ್ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಪಾಕಿಸ್ತಾನದಿಂದ ರೌಂಡ್ ಟ್ರಿಪ್ ಪ್ರಯಾಣಕ್ಕೆ ಪ್ರಯಾಣಿಕರೊಬ್ಬರು ತಲಾ 23 ಸಾವಿರ ಪಾಕಿಸ್ತಾನಿ ರುಪಾಯಿ ನೀಡಬೇಕಾಗುತ್ತದೆ. ಇನ್ನು ಲಾಹೋರ್ ನಿಂದ ಕಶ್ಗರ್ ಗೆ ಒಂದು ಕಡೆಯ ಪಯಣಕ್ಕೆ ತಲಾ 13 ಸಾವಿರ ಪಾಕಿಸ್ತಾನಿ ರುಪಾಯಿ ತಗುಲುತ್ತದೆ.

ಪ್ರಯಾಣಿಕರ ಬಳಿ ಪಾಸ್ ಪೋರ್ಟ್, ವೀಸಾ ಹಾಗೂ ವಾಪಸಾಗುವ ಟಿಕೆಟ್ ಇರಬೇಕು. ಇಪ್ಪತ್ತು ಕೇಜಿಗಿಂತ ಹೆಚ್ಚು ತೂಕದ ಬ್ಯಾಗೇಜ್ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಅಂದಹಾಗೆ ಚೀನಾ ಹಾಗೂ ಪಾಕಿಸ್ತಾನ ಮಧ್ಯೆ ಯಾವುದೇ ಗಡಿ ಪ್ರದೇಶ ಇಲ್ಲ. ಇರುವ ಏಕೈಕ ದಾರಿ ಅಂದರೆ ಅದು ಪಾಕ್ ಆಕ್ರಮಿತ ಕಾಶ್ಮೀರ. ಇಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ಗಡಿ ಹಂಚಿಕೊಳ್ಳುತ್ತವೆ. ಅದನ್ನು ಪಿಒಕೆಯನ್ನು ಆಕ್ರಮಿಸುವ ಮೂಲಕ ಪಾಕಿಸ್ತಾನ ಕಡಿತಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+