ಚೀನಾ VS ತೈವಾನ್: ಅಮೆರಿಕ ನಾಯಕರಿಗೆ ಚೀನಾ ವಾರ್ನಿಂಗ್?
ಬೀಜಿಂಗ್: ತೈವಾನ್ ಮೇಲೆ ಹಕ್ಕು ಸಾಧಿಸಲು ಯತ್ನಿಸ್ತಿರುವ ಚೀನಾ ಅದು ನನಗೆ ಸೇರಿದ ಜಾಗ ಅಂತಾ ಹೇಳುತ್ತಲೇ ಬಂದಿದೆ. ಈ ಕಾರಣಕ್ಕೆ ತೈವಾನ್ ಜೊತೆಗೆ ಅಮೆರಿಕ ಸ್ನೇಹ ಬೆಸೆಯಲು ಬಿಡುತ್ತಿಲ್ಲ. ಅದ್ರಲ್ಲೂ ಇಬ್ಬರ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಒಪ್ಪಂದದ ವಿರುದ್ಧ ಚೀನಾ ರೊಚ್ಚಿಗೆದ್ದು, ಯುದ್ಧಕ್ಕೂ ಸಿದ್ಧ ಎನ್ನುವ ರೀತಿ ವಾರ್ನಿಂಗ್ ಕೊಟ್ಟಿದೆ.
ಚೀನಾ ವಿರುದ್ಧ ತೈವಾನ್ ಬೆದರಿಕೆ ಎದುರಿಸುತ್ತಿದೆ ಅಂತಾ ಆರೋಪಿಸಿ ಅಮೆರಿಕ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ಒಪ್ಪಂದದ ಅಡಿಯಲ್ಲಿ ಶಸ್ತ್ರಾಸ್ತ್ರ ಪೂರೈಕೆ ಕೂಡ ಸೇರಿದೆ ಅನ್ನೋ ಆರೋಪ ಚೀನಾದ್ದು. ಈ ಕಾರಣಕ್ಕೆ ಎರಡೂ ರಾಷ್ಟ್ರದ ನಡುವೆ ಒಪ್ಪಂದ ನಡೆಯಬಾರದು ಅಂತಾ ಚೀನಾ ಹಲವು ದಿನಗಳಿಂದ ವಾರ್ನಿಂಗ್ ಕೊಡುತ್ತಲೇ ಬಂದಿದೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ತೈವಾನ್ ನಾಯಕರು ಮಾತ್ರ, ಅಮೆರಿಕದ ಜೊತೆ ಒಪ್ಪಂದ ಮಾಡಿಯೇ ತೀರುತ್ತೇವೆ ಅಂತಿದ್ದಾರೆ.

ಅಮೆರಿಕ ನಾಯಕರಿಗೆ ಚೀನಾ ವಾರ್ನಿಂಗ್?
ತೈವಾನ್ ಹಾಗೂ ಅಮೆರಿಕ ನಡುವಿನ ಒಪ್ಪಂದದ ಬಗ್ಗೆ ಬೀಜಿಂಗ್ ಇದೀಗ ಅಧಿಕೃತವಾಗಿ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಚೀನಾ ವಕ್ತಾರರು ಅಮೆರಿಕ ವಿರುದ್ಧ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ತೈವಾನ್ ವಿಚಾರದಲ್ಲಿ ಸುಖಾಸುಮ್ಮನೆ ಕೈಹಾಕದೇ, ಸೈಲೆಂಟ್ ಆಗಿದ್ರೆ ಒಳ್ಳೆಯದು ಎನ್ನುವ ರೀತಿ ಮಾತನಾಡಿದ್ದಾರೆ. ಒಂದು ವಾರದ ಹಿಂದೆ ಹೀಗೆ ಎಚ್ಚರಿಕೆ ನೀಡಿತ್ತು ಚೀನಾ. ಈಗಲೂ ಅಮೆರಿಕ ನಾಯಕರ ವಿರುದ್ಧ ಚೀನಾ ತನ್ನ ಸಿಟ್ಟು ಹೊರಹಾಕಿದೆ.
ಚೀನಾ ಸಿಟ್ಟಿಗೆ ಕಾರಣ ಏನು?
ತೈವಾನ್ ತನ್ನ ದೇಶದ ಭಾಗ ಎಂದು ಚೀನಾ ಪ್ರತಿಪಾದನೆ ಮಾಡುತ್ತಲೇ ಬಂದಿದೆ. ಅದರಲ್ಲೂ ತೈವಾನ್ ನಾಯಕರು ಅಮೆರಿಕ ಜೊತೆ ಸಂಬಂಧ ಬೆಸೆಯಲು ಹೋದರೆ ಸೇನೆಯನ್ನೇ ನುಗ್ಗಿಸಿ ವಾರ್ನಿಂಗ್ ಕೊಡುತ್ತಿದೆ. ಈ ಹೊತ್ತಲ್ಲಿ ಅಮೆರಿಕ ಕೂಡ ಚೀನಾನ ಇನ್ನಷ್ಟು ರೊಚ್ಚಿಗೆಬ್ಬಿಸಿದ ಆರೋಪ ಇದೆ. ತೈವಾನ್ (Taiwan China War) ಜೊತೆಗೆ ವ್ಯಾಪಾರ ಮಾಡುವಾಗ ಎಚ್ಚರ ಎಂದು ಒಂದು ವಾರದ ಹಿಂದಷ್ಟೇ ಅಮೆರಿಕಗೆ ಎಚ್ಚರಿಕೆ ನೀಡಿತ್ತು ಚೀನಾ.

4 ಸಾವಿರ ಕೋಟಿ ರೂ. ಶಸ್ತ್ರಾಸ್ತ್ರ ಪೂರೈಕೆ?
ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ವೇಳೆ ತೈವಾನ್‌ಗೆ ಅಮೆರಿಕ 4 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾಗಿದೆ ಎಂಬ ಮಾತು ಓಡಾಡ್ತಿದೆ. ಮತ್ತೊಂದ್ಕಡೆ ತೈವಾನ್ ಸೇನೆಗೆ ಅಗತ್ಯ ಇರುವ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನೂ ಅಮೆರಿಕ ಸೇನೆ ತೈವಾನ್‌ಗೆ ಪೂರೈಸಲು ಮುಂದಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ.
ಏನಿದು ಪದೇ ಪದೆ ಕಿರಿಕ್?
ಅಮೆರಿಕ ನಾಯಕರಿಂದ ಪದೇ ಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿ ಸಿಟ್ಟು ತರಿಸಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ಈ ನಡುವೆ ತೈವಾನ್ & ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದೆ ಚೀನಾ.
ಒಟ್ನಲ್ಲಿ ಚೀನಾ ಮತ್ತು ತೈವಾನ್ ನಡುವೆ ಇಷ್ಟುದಿನ ನಡೆಯುತ್ತಿದ್ದ ಕಿರಿಕ್ ಇದೀಗ ಹೊರ ಜಗತ್ತಿಗೂ ಗೊತ್ತಾಗುವ ರೀತಿ ಆರಂಭವಾಗಿದೆ. ಅದರಲ್ಲೂ ಅಮೆರಿಕ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನ ಇನ್ನಷ್ಟು ಹಾಳು ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ ತೈವಾನ್‌ನ ಜೊತೆಗೆ ಅಮೆರಿಕ ಮಾಡಿಕೊಳ್ಳುತ್ತಿರುವ ವಾಣಿಜ್ಯ ಒಪ್ಪಂದ ಚೀನಾಗೆ ಅಪಾಯ ಮಾಡುತ್ತೆ ಅನ್ನೋದು ಚೀನಾದ ವಾದ. ಇಷ್ಟೆಲ್ಲದರ ನಡುವೆ ಅಮೆರಿಕ ಮಾತ್ರ ಚೀನಾ ಮಾತಿಗೆ ಬೆಲೆ ನೀಡದೆ ತೈವಾನ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ.












Click it and Unblock the Notifications