ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕೆಲ ಪ್ರಾಂತ್ಯಗಳಲ್ಲಿ ವಾಟ್ಸಾಪ್ ನಿಷೇಧ: ಅಮೆರಿಕ

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಸೆಪ್ಟೆಂಬರ್ 26: ಕ್ಷಿಪ್ರ ಸಂದೇಶ ರವಾನೆಯ ವಾಟ್ಸಾಪ್ ಆ್ಯಪ್ ಸೇವೆಯನ್ನು ಚೀನಾದ ಕೆಲ ಪ್ರಾಂತ್ಯಗಳಲ್ಲಿ ನಿಷೇಧಿಸಲಾಗಿದೆ ಎಂದು ಅಮೆರಿಕದ 'ದ ಓಪನ್ ಅಬ್ಸರ್ವೇಟರಿ ಆಫ್ ನೆಟ್ವರ್ಕ್ ಇಂಟರ್ ಫೆರೆನ್ಸ್ (ಒಒಎನ್ಐ)' ಸಂಸ್ಥೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ವಾಟ್ಸಾಪ್ ಸಂಸ್ಥೆಯ ಮಾಲೀಕತ್ವವನ್ನು ಅಮೆರಿಕದ ಫೇಸ್ ಬುಕ್ ಸಂಸ್ಥೆ ಹೊಂದಿದೆ. ಈ ಸಂಸ್ಥೆಯ ಪ್ರಕಾರ, ಸೆ. 19ರಿಂದಲೇ ಚೀನಾದ ಕೆಲ ಪ್ರಾಂತ್ಯಗಳಲ್ಲಿ ವಾಟ್ಸಾಪ್ ಅನ್ನು ಉದ್ದೇಶಪೂರ್ವಕವಾಗಿ ಅಲ್ಲಿನ ಸರ್ಕಾರ ನಿಷೇಧಿಸಿದೆ ಎಂದು ಒಒಎನ್ಐ ತಿಳಿಸಿದೆ.

China has blocked WhatsApp says an American organisation

ಆದರೆ, ಈ ಬಗ್ಗೆ ವಾಟ್ಸಾಪ್ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇತರ ಮೂಲಗಳ ಪ್ರಕಾರ, ವಾಟ್ಸಾಪ್ ಗಳಲ್ಲಿ ಹರಿದಾಡಿದ ಕೆಲ ಸಂದೇಶಗಳು ಚೀನಾದ ಕೆಲ ಪ್ರಾಂತ್ಯಗಳಲ್ಲಿ ಉದ್ವಿಗ್ನ ವಾತಾವರಣ ಉಂಟು ಮಾಡಿದ ಹಿನ್ನೆಲೆಯಲ್ಲಿ, ಆ ಭಾಗಗಳಲ್ಲಿ ಮಾತ್ರ ಚೀನಾ ಸರ್ಕಾರ ವಾಟ್ಸಾಪ್ ಗೆ ನಿರ್ಬಂಧ ವಿಧಿಸಿದೆ.

ಈ ಬಗ್ಗೆ ಚೀನಾ ಹಾಗೂ ಅಮೆರಿಕ ಸರ್ಕಾರಗಳೂ ಅಧಿಕೃತ ಪ್ರಕಟಣೆ ನೀಡಿಲ್ಲ. ಆದಾಗ್ಯೂ, ಚೀನಾದ ಈ ನಡೆ ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವಿನ ದ್ವೇಷದ ದಳ್ಳುರಿಯ ಪರಿಣಾಮವಿರಬಹುದೇ ಎಂದು ಶಂಕಿಸುವಂತೆ ಮಾಡಿದೆ.

English summary
Instant messaging service WhatsApp has been largely blocked in China, alleges America. The Open Observatory of Network Interference (OONI), a global observation network for detecting censorship, surveillance and traffic manipulation announces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X