ಚೀನಾ v/s ಅಮೆರಿಕ ರಾಜತಾಂತ್ರಿಕ ''ನಿರ್ಬಂಧ'' ಯುದ್ಧ..!
ಚೀನಾ-ಅಮೆರಿಕ ಮಧ್ಯೆ ರಾಜತಾಂತ್ರಿಕ ಯುದ್ಧ ಬೀದಿ ಕಾಳಗವಾಗಿ ಮಾರ್ಪಟ್ಟಿದೆ. ಅತ್ತ ತನ್ನ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ಅಮೆರಿಕ ವಿಧಿಸಿದ ನಿರ್ಬಂಧಗಳಿಗೆ ವಿರುದ್ಧವಾಗಿ ಚೀನಾ ಕೂಡ ಅಂತಹದ್ದೇ ನಿರ್ಬಂಧ ವಿಧಿಸಲು ಮುಂದಾಗಿದೆ. ವಾಷಿಂಗ್ಟನ್‌ನ ಚೀನಾ ರಾಯಭಾರ ಕಚೇರಿಯ ಸಿಬ್ಬಂದಿ ಮೇಲೆ ಅಮೆರಿಕ ನಾನಾ ನಿರ್ಬಂಧಗಳನ್ನು ವಿಧಿಸಿದೆ.
ಅಮೆರಿಕದ ಚೀನಾ ರಾಯಭಾರ ಕಚೇರಿ ಅಧಿಕಾರಿಗಳು ವಿಶ್ವ ವಿದ್ಯಾಲಯಗಳಿಗೆ ಭೇಟಿ ನೀಡಲು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅನುಮತಿಯನ್ನು ಪಡೆಯಬೇಕೆಂಬ ನಿರ್ಬಂಧ ಹೇರಲಾಗಿದೆ. ಅಲ್ಲದೆ 50 ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಅಗತ್ಯವಾಗಿದೆ. ಇಂತಹ ನಿಕೃಷ್ಟ ನಿರ್ಬಂಧಗಳಿಂದ ಕೆರಳಿ ಕೆಂಡವಾಗಿರುವ ಚೀನಾ, ತನ್ನ ದೇಶದಲ್ಲೂ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿ ಮೇಲೆ ಇಂತಹದ್ದೇ ನಿರ್ಬಂಧ ಹೇರಲು ಮುಂದಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಅಮೆರಿಕದಲ್ಲಿ ರಾಯಭಾರ ಕಚೇರಿ ಸಿಬ್ಬಂದಿ ಅಧಿಕಾರಕ್ಕೆ ಅಡ್ಡಿ ಮಾಡಿರುವುದು ಖಂಡನೀಯ ಎಂದು ಎಚ್ಚರಿಸಿದೆ. ಅಲ್ಲದೆ ಚೀನಾ ಹಾಗೂ ಹಾಂಕಾಂಗ್‌ನಲ್ಲಿರುವ ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿ ಮೇಲೆ ಹಲವು ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಇದು ಎರಡು ದೈತ್ಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಮತ್ತೆ ಕಿಚ್ಚು ಹಚ್ಚಿದೆ.

ವಾಣಿಜ್ಯ ಯುದ್ಧ v/s ರಾಜತಾಂತ್ರಿಕ ಯುದ್ಧ..!
ಅಮೆರಿಕ ಹಾಗೂ ಚೀನಾ ನಡುವೆ ವಾಣಿಜ್ಯ ಯುದ್ಧ ಆರಂಭವಾಗಿ ವರ್ಷಗಳೇ ಕಳೆದಿವೆ. ಎರಡೂ ರಾಷ್ಟ್ರಗಳು ಪರಸ್ಪರ ತೆರಿಗೆ ಸಮರವನ್ನೇ ಸಾರಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಸ್ತುಗಳ ಮೇಲೆ ಭಾರಿ ಪ್ರಮಾಣದ ತೆರಿಗೆ ಹೇರುವ ಮೂಲಕ ಚೀನಾ ನಾಯಕರನ್ನು ಕೆರಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚೀನಾ ಸರ್ಕಾರ ಅಮೆರಿಕದ ಸರಕುಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿತ್ತು. ಇದು ವಾಣಿಜ್ಯ ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ ಎರಡೂ ದೇಶಗಳಲ್ಲಿ ಇದರ ಪರಿಣಾಮ ಅನುಭವಿಸಿದ್ದು ಮಾತ್ರ ಸಾಮಾನ್ಯ ಗ್ರಾಹಕ. ಈಗ ಎರಡೂ ದೇಶಗಳ ರಾಜತಾಂತ್ರಿಕ ಯುದ್ಧದಿಂದ ಬಡಪಾಯಿ ಅಧಿಕಾರಿಗಳು ಅಪ್ಪಚ್ಚಿಯಾಗುತ್ತಿದ್ದಾರೆ.
ಹ್ಯೂಸ್ಟನ್ ಬಳಿಕ ಮತ್ತೊಂದು ರದ್ಧಾಂತ..!
ಕಳೆದ ಜುಲೈನಲ್ಲಿ ಇದೇ ರೀತಿ ಅಮೆರಿಕ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಕಚ್ಚಾಟ ದೊಡ್ಡ ಮಟ್ಟಕ್ಕೆ ತಿರುಗಿತ್ತು. ಆಗ ಹ್ಯೂಸ್ಟನ್‌ನಲ್ಲಿನ ಚೀನಾ ರಾಯಭಾರ ಕಚೇರಿ ಮುಚ್ಚಲು ಅಮೆರಿಕ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಚೀನಾದ ನೈರುತ್ಯ ನಗರ ಚೆಂಗ್ಡುನಲ್ಲಿರುವ ಅಮೆರಿಕಾ ದೂತಾವಾಸ ಕಚೇರಿಗೆ ಬೀಗ ಜಡಿದು ಸೇಡು ತೀರಿಸಿಕೊಳ್ಳಲು ಚೀನಾ ಮುಂದಾಗಿತ್ತು. ಹೀಗೆ ಎರಡೂ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಮ್ಮ ಮಾನ ತಾವೇ ಹರಾಜು ಹಾಕಿಕೊಂಡಿದ್ದವು. ಈಗ ಕೆಸರೆರಚಾಟ ಮತ್ತೆ ನಡೆಯುತ್ತಿದ್ದು, ಕೊರೊನಾ ಜಗತ್ತಿನ ಆರ್ಥಿಕತೆಯನ್ನು ಬಾಧಿಸುತ್ತಿರುವಾಗಲೇ 2 ದೈತ್ಯ ರಾಷ್ಟ್ರಗಳ ಕಚ್ಚಾಟ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಮುನ್ಸೂಚನೆ ಸಿಕ್ಕಂತಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications