• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೊಮ್ಮೆ ಯುದ್ಧ ಸಾರಿದ್ರೆ ಭಾರತಕ್ಕಿಂತ ಪಾಕಿಸ್ತಾನವೇ ಸ್ಟ್ರಾಂಗ್!

|

ನವದೆಹಲಿ, ಜೂನ್.15: ಭಾರತದ ಸುತ್ತಮುತ್ತಲಿನ ನೆರೆರಾಷ್ಟ್ರಗಳಲ್ಲಿ ಶಸ್ತ್ರಾಸ್ತ್ರಗಳ ಮೇಲೆ ಅತಿಹೆಚ್ಚು ಹಣ ಹೂಡಿಕೆ ಮಾಡುತ್ತವೆ ಎನ್ನುವ ಸತ್ಯ ಮತ್ತೊಮ್ಮೆ ಜಗತ್ಜಾಹೀರಾಗಿದೆ. ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು ಭಾರತಕ್ಕಿಂತಲೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

   ಚೀನಾದಲ್ಲಿ ಕೊರೊನ ಕಾರಣ ಮತ್ತೊಮ್ಮೆ ಲಾಕ್‌ಡೌನ್ ಮೊರೆ | Oneindia Kannada

   ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ ಟ್ಯೂಟ್ ಇಯರ್ ಬುಕ್-2020ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಚೀನಾವು 320 ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿದೆ. ಪಾಕಿಸ್ತಾನ 160 ನ್ಯೂಕ್ಲಿಯರ್ ಸಿಡಿತಲೆಗಳು ಹಾಗೂ ಭಾರತವು 150 ಸಿಡಿತಲೆಗಳನ್ನು ಹೊಂದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

   ಭಾರತಕ್ಕೆ ಉಲ್ಟಾ ಹೊಡೆದ ನೇಪಾಳ; ಹೊಸ ನಕ್ಷೆಯಲ್ಲಿ ಇರುವುದಂಥಾ ಸುಳ್ಳು?

   ಕಳೆದ ವರ್ಷವು ಚೀನಾ 290 ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿದ್ದು, ಪಾಕಿಸ್ತಾನವು 150 ರಿಂದ 160 ನ್ಯೂಕ್ಲಿಯರ್ ಸಿಡಿತಲೆ ಹಾಗೂ ಭಾರತವು 130 ರಿಂದ 140 ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

   ಚೀನಾದಲ್ಲಿ ಅತ್ಯಾಧುನಿಕ ನ್ಯೂಕ್ಲಿಯರ್ ಶಸ್ತ್ರಾಗಾರ

   ಚೀನಾದಲ್ಲಿ ಅತ್ಯಾಧುನಿಕ ನ್ಯೂಕ್ಲಿಯರ್ ಶಸ್ತ್ರಾಗಾರ

   ಚೀನಾ ತನ್ನ ಪರಮಾಣು ಶಸ್ತ್ರಾಗಾರವನ್ನು ಗಮನಾರ್ಹವಾಗಿ ಆಧುನೀಕರಣಗೊಳಿಸಲಾಗುತ್ತಿದೆ. ಭೂ ಮತ್ತು ಸಮುದ್ರ ಆಧಾರಿತ ಕ್ಷಿಪಣಿಗಳು ಮತ್ತು ಪರಮಾಣು ಸಾಮರ್ಥ್ಯದ ಯುದ್ಧ ವಿಮಾನಗಳನ್ನು ಅತ್ಯಾಧುನಿಕ ಶೈಲಿಯಲ್ಲಿ ಸಿದ್ಧಪಡಿಸಲಾಗಿದೆ.

   ನ್ಯೂಕ್ಲಿಯರ್ ಸಿಡಿತಲೆಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆ

   ನ್ಯೂಕ್ಲಿಯರ್ ಸಿಡಿತಲೆಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆ

   ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಇತ್ತೀಚಿಗಷ್ಟೇ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ವೈವಿಧ್ಯತೆ ಮತ್ತು ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿವೆ. 2019ರಲ್ಲಿ ನ್ಯೂಕ್ಲಿಯರ್ ಸಿಡಿತಲೆಗಳ ಉತ್ಪಾದನೆಯಲ್ಲಿ ಭಾರಿ ಇಳಿಕೆ ಕಂಡು ಬಂದಿರುವುದಾಗಿ ಇಯರ್ ಬುಕ್ ನಲ್ಲಿ ವರದಿ ಮಾಡಲಾಗಿದೆ. ಎಲ್ಲ ಬಗೆಯ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಅತ್ಯಾಧುನಿಕರಣ ರೀತಿಯಲ್ಲಿ ತಯಾರಿಸಲಾಗುತ್ತಿದೆ.

   ಅಮೆರಿಕಾ, ರಷ್ಯಾದಲ್ಲಿರುವ ನ್ಯೂಕ್ಲಿಯರ್ ಸಿಡಿತಲೆಗಳ ಸಂಖ್ಯೆ

   ಅಮೆರಿಕಾ, ರಷ್ಯಾದಲ್ಲಿರುವ ನ್ಯೂಕ್ಲಿಯರ್ ಸಿಡಿತಲೆಗಳ ಸಂಖ್ಯೆ

   ವಿಶ್ವದ ಶೇ.90ರಷ್ಟು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ರಷ್ಯಾ ಮತ್ತು ಅಮೆರಿಕಾ ರಾಷ್ಟ್ರಗಳೆರೆಡೇ ಹೊಂದಿವೆ. ರಷ್ಯಾದಲ್ಲಿ 6,375 ನ್ಯೂಕ್ಲಿಯರ್ ಸಿಡಿತಲೆಗಳಿದ್ದರೆ, ಅಮೆರಿಕಾದಲ್ಲಿ 5,800 ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿರುವುದಾಗಿ ವರದಿಯಲ್ಲಿ ತಿಳಿಸಿದೆ.

   ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿದ 9 ರಾಷ್ಟ್ರಗಳು

   ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿದ 9 ರಾಷ್ಟ್ರಗಳು

   ಪ್ರತಿವರ್ಷ 13,400 ನ್ಯೂಕ್ಲಿಯರ್ ಸಿಡಿತಲೆಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಈ ಪೈಕಿ ಒಂಬತ್ತು ರಾಷ್ಟ್ರಗಳು ಮಾತ್ರ ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದುವ ಅನುಮತಿಯನ್ನು ಪಡೆದುಕೊಂಡಿವೆ. ಅಮೆರಿಕಾ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ ರಾಷ್ಟ್ರಗಳು ಮಾತ್ರ ನ್ಯೂಕ್ಲಿಯರ್ ಅಣ್ವಸ್ತ್ರಗಳನ್ನು ಹೊಂದುವ ಅವಕಾಶವಿದೆ.

   English summary
   China and Pakistan have more Nuclear weapons than India: Study.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X