ಭಾರತ ವಿರೋಧಿ ಕೆನಡಾ ಕಡೆಯಿಂದ ಶುರುವಾಯ್ತು ಹೊಸ ಕಿರಿಕ್!

ಭಾರತ ಬಲಿಷ್ಠವಾಗಿ ಬೆಳೆದು ನಿಂತಿದೆ ಹೀಗಾಗಿಯೇ ಜಗತ್ತಿನಲ್ಲಿ ಭಾರತಕ್ಕೆ ಶತ್ರುಗಳು ಕೂಡ ಹೆಚ್ಚಾಗುತ್ತಿದ್ದಾರೆ. ಆದರೆ ಈ ಶತ್ರುಗಳನ್ನ ಹೇಗೆ ನಿಭಾಯಿಸಬೇಕು ಅನ್ನೋದು ಕೂಡ ಈಗ ಭಾರತಕ್ಕೆ ಚೆನ್ನಾಗಿ ಗೊತ್ತಾಗಿದೆ. ಆದರೆ ಕೆನಡಾಗೆ ಮಾತ್ರ ಬುದ್ಧಿಯೇ ಬರುವಂತೆ ಕಾಣ್ತಿಲ್ಲ. ಈಗಾಗಲೇ ಖಲಿಸ್ತಾನಿ ಉಗ್ರರಿಗೆ ಬೆಂಬಲ ನೀಡಿ ಸರಿಯಾಗೆ ತಿರುಗೇಟು ಅನುಭವಿಸಿದ್ದ ಇದೇ ಕೆನಡಾ, ಈಗ ಭಾರತದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡ್ತಿದೆ.

ಹೌದು ಕೆನಡಾ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ನಡೆಸಿದೆ ಎಂದು ಕೆನಡಾ ಭದ್ರತಾ ಇಲಾಖೆ ಬಹಿರಂಗ ಮಾಡಿದ ಗುಪ್ತಚರ ವರದಿಯಲ್ಲಿ ಉಲ್ಲೇಖ ಆಗಿದೆ. ಈ ಮೂಲಕ ಭಾರತ & ಕೆನಡಾ ನಡುವೆ ಮತ್ತೊಮ್ಮೆ ದೊಡ್ಡ ಕಾಡ್ಗಿಚ್ಚೇ ಹೊತ್ತಿಕೊಂಡಂತಿದೆ. ಅಷ್ಟಕ್ಕೂ 2019ರ ಫೆಡರಲ್ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ನಡೆಸಿತ್ತು ಎಂಬ ಆರೋಪ ಬಗ್ಗೆ ತನಿಖೆ ನಡೆಸಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆದೇಶಿಸಿದ್ದರು. ಇದೇ ವಿಚಾರವಾಗಿ ಈಗ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ.

Canada Made Another Allegation Against The India

ಭಾರತ & ಕೆನಡಾ ಸಂಬಂಧಕ್ಕೆ ಹುಳಿ?

ಅಷ್ಟಕ್ಕೂ ಕೆನಡಾ ರಾಜಕೀಯದಲ್ಲಿ ವಿದೇಶಿ ಹಸ್ತಕ್ಷೇಪ ಜಾಲಗಳು ಆಳವಾಗಿ ಅಂತರ್ಗತವಾಗಿವೆ ಮತ್ತು ಸರ್ಕಾರದ ಪ್ರತಿಯೊಂದು ಹಂತದಲ್ಲೂ ಕಾರ್ಯನಿರ್ವಹಿಸುತ್ತದೆ. ವಿದೇಶಿ ಹಸ್ತಕ್ಷೇಪವು ಕೆನಡಾ ಪ್ರಜಾಪ್ರಭುತ್ವವನ್ನ ತೀವ್ರವಾಗಿ ದುರ್ಬಲ ಮಾಡ್ತಿದೆ ಎಂದು ಕೂಡ ಇದೇ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮೂಲಗಳನ್ನ ಉಲ್ಲೇಖಿಸಿ ಗ್ಲೋಬಲ್ ನ್ಯೂಸ್' ವರದಿಯನ್ನ ಪ್ರಕಟಿಸಿದೆ. ವಿದೇಶಿ ಹಸ್ತಕ್ಷೇಪದ ಜಾಲ ಕೆನಡಾದ್ಯಂತ ಹಾಗೂ ಸರ್ಕಾರದ ಎಲ್ಲಾ ಹಂತದಲ್ಲೂ ಸಕ್ರಿಯ ಆಗಿವೆ. ಇದರಲ್ಲಿ ಹಲವು ಜಾಲ, ಕೆನಡಾ ರಾಜಕೀಯ & ಸಾಮಾಜಿಕ ವ್ಯವಸ್ಥೆಯಲ್ಲೂ ಆಳವಾಗಿ ಬೇರೂರಿದೆ ಎಂದು ಆರೋಪ ಮಾಡಿದೆ ಈ ವರದಿ.

ಖಲಿಸ್ತಾನಿಗಳ ಪರ ಕೆನಡಾ ಬೆಂಬಲ

ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನ 2023ರ ಜೂನ್ 18ರಂದು ಕೆನಡಾ ಸರ್ರೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಹೀಗೆ ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಕೊಲೆಯಾಗಿದ್ದ ನಿಜ್ಜರ್‌ನ ವಿರುದ್ಧ ಇತ್ತು. ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಇದು ಸಾಲದು ಎನ್ನುವಂತೆ ಇದೀಗ ಕೆನಡಾ ಚುನಾವಣೆಯ ವಿಚಾರದಲ್ಲೂ ಭಾರತ ಹಸ್ತಕ್ಷೇಪ ಮಾಡಿರುವ ಆರೋಪ ಮಾಡಿದೆ ಕೆನಡಾ. ಹೀಗಾಗಿ ಈಗ ಭಾರತ & ಕೆನಡಾ ಸಂಬಂಧ ಇನ್ನಷ್ಟು ಹಳಸುವ ಅಪಾಯ ಎದುರಾಗಿದೆ.

Canada Made Another Allegation Against The India

ಭಾರತದ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಯಾಗಿಸಬೇಕಿದ್ದ ಕೆನಡಾ ಮಾತ್ರ ಹಠ ಬಿಡುತ್ತಿಲ್ಲ ಅದ್ರಲ್ಲೂ ಕೆನಡಾ ಪ್ರಧಾನಿ ತೆಗೆದುಕೊಳ್ಳುತ್ತಿರುವ ನಿರ್ಧಾರದಿಂದ ಈಗ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಭಾರತ, ಕೆನಡಾ ಸಂಬಂಧ ಸಂಪೂರ್ಣ ಹಾಳಾಗಿ ಹೋಗುವ ಹಂತ ತಲುಪಿದೆ ಎನ್ನಲಾಗಿತ್ತು. ಆದರೆ ಸಂಬಂಧ ಸುಧಾರಣೆಗೆ ಇತರ ದೇಶಗಳು ಪ್ರಯತ್ನ ಆರಂಭಿಸಿವೆ. ಹೀಗೆ, ಹೊಸ ಮಾತುಕತೆ ಆರಂಭದ ಸಮಯದಲ್ಲೇ ಕೆನಡಾ ಸರ್ಕಾರದ ನಡೆ ಮತ್ತಷ್ಟು ತಿಕ್ಕಾಟಕ್ಕೆ ದಾರಿ ಮಾಡಿಕೊಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+