Get Updates
Get notified of breaking news, exclusive insights, and must-see stories!

ಸ್ಟೀಫನ್ ಹಾಕಿಂಗ್ ಲೇಖನಕ್ಕೆ ಮುಗಿಬಿದ್ದ ಜನ, ಕೇಂಬ್ರಿಡ್ಜ್ ವಿವಿ ವೆಬ್ಸೈಟ್ ಕ್ರಾಶ್

ಲಂಡನ್, ಅಕ್ಟೋಬರ್ 24: ಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಪಿಎಚ್ಡಿ ಸಿದ್ಧಾಂತ ಓದಲು ಜನರು ಮುಗಿಬಿದ್ದಿದ್ದರಿಂದ ಕೇಂಬ್ರಿಂಡ್ಜ್ ವಿಶ್ವವಿದ್ಯಾಲಯದ ವೆಬ್ಸೈಟ್ ಕ್ರಾಶ್ ಆಗಿತ್ತು. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಇದೊಂದು ಪವಾಡವೇ ಸರಿ.

ಮೊದಲ ಬಾರಿಗೆ ಜಗದ್ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಪಿಎಚ್ಡಿ ಸಿದ್ಧಾಂತವನ್ನು ಉಚಿತವಾಗಿ ಓದಲು ಕೇಂಬ್ರಿಡ್ಜ್ ವಿವಿ ಅವಕಾಶ ಮಾಡಿಕೊಟ್ಟಿತ್ತು. 1966ರ 'ಪ್ರಾಪರ್ಟೀಸ್ ಆಫ್ ಎಕ್ಸ್ಪಾಂಡಿಂಗ್ ಯುನಿವರ್ಸಿಟಿ' ಸಿದ್ಧಾಂತವನ್ನು ಪಬ್ಲಿಕೇಶನ್ ವಿಭಾಗದಲ್ಲಿ ಮಧ್ಯರಾತ್ರಿ 12.01 ನಿಮಿಷಕ್ಕೆ ಓದಲು ಬಿಡಲಾಗಿತ್ತು.

Cambridge University website crashes ad readers flock to read Stephen Hawking's PhD thesis

ಉಚಿತವಾಗಿ ಓದಲು ಅವಕಾಶ ನೀಡಿದ್ದೇ ತಡ ಸಂಶೋಧಕರು, ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತರು ಲೇಖನ ಓದಲು ಮುಗಿಬಿದ್ದಿದ್ದರು. ಹೀಗಾಗಿ ವಿಶ್ವದ ಪ್ರಖ್ಯಾತ ವಿವಿ ಕೇಂಬ್ರಿಡ್ಜ್ ವೆಬ್ಸೈಟ್ ಕ್ರಾಶ್ ಆಗಿತ್ತು. ಇಲ್ಲಿಯವರೆಗೆ 60,000ಕ್ಕೂ ಹೆಚ್ಚು ಜನರು ಅವರ ಸಿದ್ಧಾಂತಗಳನ್ನು ಓದಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಲೇಖನಕ್ಕೆ ಅಧ್ಭುತ ಪ್ರತಿಕ್ರಿಯೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸ್ಟೀಫನ್ ಹಾಕಿಂಗ್, "ನನ್ನ ಸಂಶೋಧನೆಗಳು ಮಾತ್ರವಲ್ಲ ಎಲ್ಲಾ ಖ್ಯಾತರ ಸಂಶೋಧನೆಗಳನ್ನು ಉಚಿತವಾಗಿ ಓದಲು ಅವಕಾಶ ನೀಡಬೇಕು," ಎಂದು ಹೇಳಿದ್ದಾರೆ. ಅವರು ಅತ್ಯಂತ ಪ್ರಭಾವಿ ವೈಜ್ಞಾನಿಕ ಕೃತಿಗಳಲ್ಲಿ ಒಂದಾದ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್" ಅನ್ನೂ ಬರೆದಿದ್ದಾರೆ.

ಕೇಂಬ್ರಿಂಡ್ಜ್ ವಿವಿಯ ಗ್ರಂಥಾಲಯದಲ್ಲಿ 75ವರ್ಷದ ಸ್ಟೀಫನ್ ಹಾಕಿಂಗ್ ಸಿದ್ಧಾಂತಗಳಿಗೆ ಭಾರೀ ಬೇಡಿಕೆ ಇದೆ. ಈ ಹಿಂದೆ ಇವರ ಪಿಎಚ್ಡಿ ಲೇಖನ ಓದಲು 65 ಪೌಂಡ್ ಗಳನ್ನು ಕೇಂಬ್ರಿಂಡ್ಜ್ ಲೈಬ್ರರಿಗೆ ಪಾವತಿ ಮಾಡಬೇಕಾಗಿತ್ತು. ಇದೀಗ ಉಚಿತವಾಗಿ ಓದಲು ಅವಕಾಶ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+