California Wildfire: ಕಾಡಿಗೆ ಬೆಂಕಿ ಇಟ್ಟಿದ್ದು ಮನುಷ್ಯರು? ವೈರಲ್ ಆಗುತ್ತಿವೆ ವಿಡಿಯೋಗಳು!
ಅಮೆರಿಕದ ಕಾಡುಗಳಿಗೆ ಬೆಂಕಿ ಬಿದ್ದ ವಿಚಾರ ದಿನಕ್ಕೊಂದು ಅನುಮಾನ ಹುಟ್ಟು ಹಾಕಿ & ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಅದ್ರಲ್ಲೂ ಬೇಕು, ಬೇಕು ಅಂತಲೇ ಅಮೆರಿಕದ ಕಾಡುಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ಆರೋಪ ಕೂಡ ಕೇಳಿಬಂದು ಸಂಚಲನ ಸೃಷ್ಟಿಯಾಗಿದೆ. ಈಗಾಗಲೇ ಸುಮಾರು 20,000ಕ್ಕೂ ಹೆಚ್ಚು ಮನೆ & ಕಟ್ಟಡಗಳನ್ನು ಭಸ್ಮ ಮಾಡಿ ಹಾಕಿರುವ ಅಮೆರಿಕದ ಕಾಡಿನ ಬೆಂಕಿ ಏನೆಲ್ಲಾ ಅನಾಹುತ ಮಾಡಿದೆ ಗೊತ್ತಾ?
ಅಮೆರಿಕ ಪಕ್ಕಾ ಬ್ಯುಸಿನೆಸ್ ಮಾಡುವ ದೇಶ ಅನ್ನೋ ಮಾತು ಇದೆ. ಯಾಕಂದ್ರೆ ಅಮೆರಿಕದ ನಾಯಕರು ಲಾಭ ಇಲ್ಲದೆ ಯಾವುದೇ ರೀತಿ ನಿರ್ಧಾರ ಕೈಗೊಳ್ಳುವುದಿಲ್ಲ. ಹೀಗಾಗಿ ಅಮೆರಿಕ ತನ್ನ ಲಾಭ ನೋಡಿಕೊಂಡು ಹೆಜ್ಜೆ ಇಡುತ್ತದೆ ಎಂಬ ಆರೋಪ ಇದೆ. ಹೀಗಿದ್ದಾಗ, ಅಮೆರಿಕದ ಸರ್ಕಾರಕ್ಕೆ ಅತಿಹೆಚ್ಚು ಆದಾಯ ತಂದುಕೊಡುವ ಕ್ಯಾಲಿಫೋರ್ನಿಯಾ ಭಾಗದಲ್ಲೇ ಇದೀಗ ಭಾರಿ ಘೋರ ಕಾಡ್ಗಿಚ್ಚು ಹಬ್ಬಿಕೊಂಡಿದೆ. ಕ್ಷಣಕ್ಷಣಕ್ಕೂ ಈ ಬೆಂಕಿ ಮತ್ತಷ್ಟು ಪ್ರದೇಶಕ್ಕೆ ಹಬ್ಬುತ್ತಿದ್ದು ಭಯದ ವಾತಾವರಣ ಎದುರಾಗಿದೆ.

ಬೇಕು ಬೇಕು ಅಂತಾ ಬೆಂಕಿ ಇಟ್ಟರಾ?
ಒಂದು ಕಡೆ ಹೀಗೆ ಬೆಂಕಿ ಹಬ್ಬಿಕೊಂಡಿದ್ದರೆ, ಮತ್ತೊಂದು ಕಡೆ ಅದನ್ನು ಆರಿಸಲು ಅಮೆರಿಕ ಅಧಿಕಾರಿಗಳು ಪರದಾಡುತ್ತಿದ್ದಾರೆ. ಹೀಗಿದ್ದಾಗ ಕಾಡಿಗೆ ಬೆಂಕಿ ಇಟ್ಟಿದ್ದು ಮನುಷ್ಯರಾ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಇದಕ್ಕೆ ಕಾರಣ ಆಗಿರುವುದು ಸೋಷಿಯಲ್ ಮೀಡಿಯಾ ಪೂರ್ತಿ ಹಬ್ಬಿರುವ ವಿಡಿಯೋಗಳು.
ಇದೀಗ ವೈರಲ್ ಆಗುತ್ತಿರುವ ವಿಡಿಯೋಗಳು, ಅಮೆರಿಕ ಕಾಡಿನ ಬೆಂಕಿಗೆ ಮನುಷ್ಯರೇ ಕಾರಣ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿವೆ. ಅಲ್ಲದೆ, ನೂರಾರು ರೀತಿ ಅನುಮಾನ ಮೂಡುವಂತೆ ಕೂಡ ಮಾಡಿದೆ. ಅಮೆರಿಕದ ಸರ್ಕಾರ ಕೂಡ ಇಂತಹ ಆರೋಪಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಮತ್ತೊಂದು ಕಡೆ ಜನರು ಅನ್ನ & ನೀರು ಅಂತಾ ಅಲೆದಾಡುವ ಸ್ಥಿತಿ ಎದುರಾಗಿದೆ.
ಅಮೆರಿಕ ಕಾಡ್ಗಿಚ್ಚು ಮತ್ತಷ್ಟು ಭೀಕರ
ಹೀಗೆ ಹಬ್ಬಿರುವ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಕಾಡ್ಗಿಚ್ಚು ಇದೀಗ ಅಂತಿಮವಾಗಿ ಘನಘೋರ ಹಂತಕ್ಕೆ ಬಂದು ನಿಂತಿದೆ. ಜನ ಕೂಡ ಭಯಪಟ್ಟು ನರಳುತ್ತಿದ್ದು, ಮುಂದಿನ ಪರಿಸ್ಥಿತಿ ಹೇಗೆ? ಅನ್ನೋ ಚಿಂತೆಯಲ್ಲಿ ಇದ್ದಾರೆ. ಜೋ ಬೈಡನ್ ಆಡಳಿತ & ಸರ್ಕಾರ ಈಗಿನ ಪರಿಸ್ಥಿತಿ ನಿಭಾಯಿಸಲು ನರಳುತ್ತಿದೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ಈಗ ಮತ್ತೊಂದು ಕೆಟ್ಟ ವಾತಾವರಣ ಇದೀಗ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ತಲೆದೂರಿದೆ.












Click it and Unblock the Notifications