California Wildfire: ಅಮೆರಿಕ ಕಾಡ್ಗಿಚ್ಚು ಮತ್ತಷ್ಟು ಭೀಕರ, ಜನರ ಪರಿಸ್ಥಿತಿ ಹರೋಹರ
ಅಮೆರಿಕದಲ್ಲಿ ಕಾಡ್ಗಿಚ್ಚು ಆವರಿಸಿಕೊಂಡ ಮರುಕ್ಷಣವೇ ಎಲ್ಲವೂ ಸರ್ವನಾಶವಾಗಿ ಹೋಗಿ, ಜನರ ಬದುಕು ಬೀದಿಗೆ ಬಿದ್ದಿದೆ. ಹಾಲಿವುಡ್ ಸಿನಿಮಾ ಮೂಲಕ ಹೀರೋ & ಹೀರೋಯಿನ್ ಪಾತ್ರಗಳನ್ನ ಮಾಡಿದ್ದ ನಟ & ನಟಿಯರಿಗೆ ಇದೀಗ ತಮ್ಮ ಜೀವ ಉಳಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಸಂಗತಿ ಈಗ ರಿವೀಲ್ ಆಗುತ್ತಿದ್ದು, ತೀವ್ರ ಆತಂಕ ಎದುರಾಗಿದೆ.
ಹೌದು, ಅಮೆರಿಕದ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಹಬ್ಬಿರುವ ಕಾಡಿನ ಬೆಂಕಿ ತೀವ್ರ ಸ್ವರೂಪ ಪಡೆದು ಈಗಾಗಲೇ ಸಾವಿರಾರು ಮನೆಗಳನ್ನ ಭಸ್ಮ ಮಾಡಿ ಹಾಕಿದೆ. ಇನ್ನೊಂದು ಕಡೆ ಜನರು ಕೂಡ ಜೀವ ಉಳಿಸಿಕೊಂಡು ಬದುಕಲು ಊರು ಬಿಟ್ಟು ಬೇರೆ ಬೇರೆ ಕಡೆಗೆ ಓಡುತ್ತಿದ್ದಾರೆ. ಮತ್ತೊಂದು ಕಡೆ ಕಾರುಗಳಲ್ಲಿ ಹೊರಗೆ ಹೋಗಬೇಡಿ, ನೇರವಾಗಿ ನೀವು ಸಮುದ್ರಗಳ ಬಳಿ ಬನ್ನಿ ಎಂಬ ಸಂದೇಶ ಕೂಡ ನೀಡಲಾಗಿದೆ. ಇದೆಲ್ಲವನ್ನೂ ನೋಡುತ್ತಿದ್ರೆ ಪ್ರಳಯದ ಭಾವನೆ ಮೂಡಿದೆ.

ಅಮೆರಿಕ ಕಾಡ್ಗಿಚ್ಚು ಮತ್ತಷ್ಟು ಭೀಕರ
ಹೀಗೆ ಹಬ್ಬಿರುವ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಕಾಡ್ಗಿಚ್ಚು ಇದೀಗ ಅಂತಿಮವಾಗಿ ಘನಘೋರ ಹಂತಕ್ಕೆ ಬಂದು ನಿಂತಿದೆ. ಜನ ಕೂಡ ಭಯಪಟ್ಟು ನರಳುತ್ತಿದ್ದು, ಮುಂದಿನ ಪರಿಸ್ಥಿತಿ ಹೇಗೆ? ಅನ್ನೋ ಚಿಂತೆಯಲ್ಲಿ ಇದ್ದಾರೆ. ಜೋ ಬೈಡನ್ ಆಡಳಿತ & ಸರ್ಕಾರ ಈಗಿನ ಪರಿಸ್ಥಿತಿ ನಿಭಾಯಿಸಲು ನರಳುತ್ತಿದೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ಈಗ ಮತ್ತೊಂದು ಕೆಟ್ಟ ವಾತಾವರಣ ಇದೀಗ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ತಲೆದೂರಿದೆ.
ಊರು & ಕಾರು ಬಿಟ್ಟು ಓಡಿ ಹೋದ ಜನ!
ಕ್ಯಾಲಿಫೋರ್ನಿಯಾ ಅದ್ರಲ್ಲೂ ಲಾಸ್ ಏಂಜಲೀಸ್ ಬೆಂಕಿಯ ಕೂಪವಾಗಿ ಬದಲಾಗಿದ್ದು, ರಾತ್ರಿ ಕತ್ತಲೆಯಲ್ಲಿ ನೋಡಲು ಥೇಟ್ ನರಕದ ರೀತಿ ಭಾಸವಾಗುತ್ತಿದೆ. ಹಾಗೇ ಬೆಂಕಿ ಕಿಡಿಗೆ ಗಾಳಿ ಜೋರಾಗಿ ಬೀಸುತ್ತಾ ಕಾಡ್ಗಿಚ್ಚು ಮತ್ತಷ್ಟು ಸ್ಥಳಗಳಿಗೆ ಹಬ್ಬಿಕೊಳ್ಳುತ್ತಿದೆ. ಇದು ಭಾರಿ ಆತಂಕ ಸೃಷ್ಟಿ ಮಾಡುತ್ತಿದೆ. ಏನು ಮಾಡಬೇಕು? ಎಲ್ಲಿ ಹೋಗಬೇಕು? ಅನ್ನೋದು ಈ ಸಮಯದಲ್ಲಿ ತಿಳಿಯದೆ ಜನ ಸಮುದ್ರ ತೀರದಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ ಜನ ಜೀವ ಉಳಿಸಿಕೊಳ್ಳುವ ಅಬ್ಬರದಲ್ಲಿ ಊರು & ಕಾರು ಬಿಟ್ಟು ಓಡಿ ಹೋಗುತ್ತಿದ್ದಾರೆ.
ಹಾಗೇ ಅಮೆರಿಕದ ಜನ ಇದೀಗ ಅಧ್ಯಕ್ಷ ಜೋ ಬೈಡನ್ & ಅವರ ಆಡಳಿತದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇನ್ನೊಂದು ವಾರದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬರಲಿದ್ದು, ಹೊಸ ಸರ್ಕಾರವು ಅಮೆರಿಕದಲ್ಲಿ ಆಡಳಿತಕ್ಕೆ ಎಂಟ್ರಿ ಕೊಡಲಿದೆ. ಈ ಸಮಯದಲ್ಲೇ ಹಿಂಗೆಲ್ಲಾ ಆಗಿ ಹೋಗಿದ್ದು, ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಮೊದಲ ದಿನವೇ ದೊಡ್ಡ ಸವಾಲು ಎದುರಾಗಲಿದೆ.












Click it and Unblock the Notifications