ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಹಿಂಗಿಲ್ಲ ಅಗ್ನಿಯ ಹಸಿವು: ಕರಕಲಾಯ್ತೇ ಕ್ಯಾಲಿಫೋರ್ನಿಯಾ?!

|
Google Oneindia Kannada News

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿಕೆಲ ದಿನಗಳಿಂದ ಆರಂಭವಾಗಿರುವ ಕಾಳ್ಗಿಚ್ಚು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. 1.4 ಲಕ್ಷಕ್ಕೂ ಹೆಚ್ಚು ಎಕರೆ ಜಾಗವನ್ನು ಸುಟ್ಟು ಕರಕಲಾಗಿಸಿದ ಮೇಲೂ ಅಗ್ನಿಯ ಹಸಿವು ಹಿಂಗಿದಂತಿಲ್ಲ!

ಮರಗಳು, ಐಷಾರಾಮಿ ಮನೆಗಳು ಎಲ್ಲವೂ ಸುಟ್ಟು, ಸ್ಮಶಾನಸದೃಶ ವಾತಾವರಣ ಸೃಷ್ಟಿಯಾಗಿದೆ. ಕ್ಯಾಲಿಫೋರ್ನಿಯಾದ ಅಗ್ನಿಶಾಮಕದಳದ ಅರ್ಧದಷ್ಟು ಸಿಬ್ಬಂದಿಗಳು ಈ ಬೆಂಕಿ ಆರಿಸುವ ಕಾರ್ಯದಲ್ಲೇ ನಿರತರಾಗಿದ್ದರೂ ಬೆಂಕಿ ಮಾತ್ರ ಆರಿಲ್ಲ!

ಕ್ಯಾಲಿಫೋರ್ನಿಯಾ: ಕಾಳ್ಗಿಚ್ಚಿಗೆ 2 ಬಲಿ, 1.4 ಲಕ್ಷ ಎಕರೆ ಜಾಗ ಬೆಂಕಿಗಾಹುತಿಕ್ಯಾಲಿಫೋರ್ನಿಯಾ: ಕಾಳ್ಗಿಚ್ಚಿಗೆ 2 ಬಲಿ, 1.4 ಲಕ್ಷ ಎಕರೆ ಜಾಗ ಬೆಂಕಿಗಾಹುತಿ

ಈ ದುರಂತದಲ್ಲಿ ಇಬ್ಬರು ಪ್ರಾಣಕಳೆದುಕೊಂಡಿದ್ದರೆ, ಸುಮಾರು 1,90,000 ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಿಂದ ಹೆಚ್ಚು ಸಾವು-ನೋವು ಸಂಭವಿಸಿಲ್ಲ. ಕೋಟ್ಯಂತರ ಆಸ್ತಿ ಹಾನಿಯಂತೂ ಸಂಭವಿಸಿದೆ.

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಎದೆನಡುಗಿಸುವ ವಿಡಿಯೋ, ಚಿತ್ರಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಎದೆನಡುಗಿಸುವ ವಿಡಿಯೋ, ಚಿತ್ರ

ಒಂದೆಡೆ ಕ್ಯಾಲಿಫೋರ್ನಿಯಾವನ್ನು ನಡುಗಿಸಿದ ಭೀಕರ ಕಾಳ್ಗಿಚ್ಚಿನ ದೃಶ್ಯ ಮನಸ್ಸನ್ನು ಘಾಸಿಗೊಳಿಸಿದರೆ, ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿ ವಿಂಟರ್ ಲೈಟ್ ಪ್ರದರ್ಶನದ ಮನಮೋಹನಕ ಚಿತ್ತಾರ ಕಣ್ಣಿಗೆ ಕೊಂಚ ತೃಪ್ತಿ ನೀಡುತ್ತದೆ. ಇದರೊಂದಿಗೆ ದೇಶ-ವಿದೇಶದ ಕೆಲವು ಮಹತ್ವದ ಘಟನೆಗಳ ಚಿತ್ರ ಇಲ್ಲಿದೆ.

ಬೆಂಕಿ ಬಿದ್ದಿದೆ ಕಾಡಿಗೆ ಓ ಬೇಗ ಬನ್ನಿ...

ಬೆಂಕಿ ಬಿದ್ದಿದೆ ಕಾಡಿಗೆ ಓ ಬೇಗ ಬನ್ನಿ...

ಕ್ಯಾಲಿಫೋರ್ನಿಯದ ಕಾರ್ಪೆಂಟೆರಿಯಾದಲ್ಲಿ ಉಂಟಾದ ಕಾಳ್ಗಿಚ್ಚಿನ ದೃಶ್ಯವೊಂದು ಕ್ಷಣಕಾಲ ಮನಸ್ಸನ್ನು ನಿರ್ಲಿಪ್ತಗೊಳಿಸಿತ್ತದೆ. ಈ ಬೆಂಕಿ ಅದೆಷ್ಟು ಜೀವವೈವಿಧ್ಯಗಳನ್ನು, ಸಸ್ಯಪ್ರಭೇದಗಳನ್ನು ಬಲಿತೆಗೆದುಕೊಂಡಿದೆಯೋ ದೇವರೇ ಬಲ್ಲ. ಅದೆಷ್ಟು ಜನ ತಮ್ಮ ನೆಚ್ಚಿನ ಮನೆಕಳೆದುಕೊಂಡರೋ ಗೊತ್ತಿಲ್ಲ. ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಒಣ ಹವೆ ಮತ್ತು ಗಾಳಿ ಹೆಚ್ಚಿದ್ದರಿಂದ ಈ ಕಾಳ್ಗಿಚ್ಚು ಸಂಭವಿಸಿದೆ ಎನ್ನಲಾಗಿದೆ.

ಬಣ್ಣ ಬಣ್ಣದ ಚಿತ್ತಾರ

ಬಣ್ಣ ಬಣ್ಣದ ಚಿತ್ತಾರ

ಗರ್ಮನಿಯ ಫ್ರಾಂಕ್ ಫರ್ಟ್ ನ ಪಾಲ್ಮೆಂಗರ್ಟನ್ ಎಂಬ ಪಾರ್ಕ್ ವೊಂದರಲ್ಲಿ ಏರ್ಪಡಿಸಿದ್ದ ವಿಂಟರ್ ಲೈಟ್ ಎಂಬ ವಿನೂತನ ಪ್ರದರ್ಶನ ಕಾರ್ಯಕ್ರಮದಲ್ಲಿ ಬಣ್ಣ ಬಣ್ಣದ ಲೇಸರ್ ಲೈಟ್ಗಳ ಹಿನ್ನೆಲೆಯಲ್ಲಿ ಪಾರ್ಕು, ನೀರು, ಬ್ರಿಡ್ಜ್ ಎಲ್ಲವೂ ಸೇರಿ ಭೂಲೋಕಕ್ಕೇ ಸ್ವರ್ಗದ ಸೌಂದರ್ಯವನ್ನೇ ತಂದಂತೆನ್ನಿಸಿತ್ತು.

ಫುಟ್ಬಾಲ್ ದಂತಕಥೆ ಕೋಲ್ಕತ್ತಾದಲ್ಲಿ!

ಫುಟ್ಬಾಲ್ ದಂತಕಥೆ ಕೋಲ್ಕತ್ತಾದಲ್ಲಿ!

ಅರ್ಜೆಟಿನಾದ ಫುಟ್ಬಾಲ್ ದಂತಕಥೆ, ಮಾಜಿ ಫುಟ್ಬಾಲ್ ಆಟಗಾರ ಡಿಯಾಗೊ ಮರಡೊನಾ ಕೋಲ್ಕತ್ತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರೊಂದಿಗೆ ಫುಟ್ಬಾಲ್ ಆಡಲಿದ್ದಾರೆ!

ಅಬ್ಬಬ್ಬಾ ಚಳಿ, ಚಳಿ..!

ಅಬ್ಬಬ್ಬಾ ಚಳಿ, ಚಳಿ..!

ಉಕ್ರೇನಿನ ಕಿಯೆವ್ ಎಂಬಲ್ಲಿ ನಿರಮತರವಾಗಿ ಸ್ನೋಫಾಲ್ ಆಗುತ್ತಿರುವ ಕಾರಣ ಇಲ್ಲಿನ ಜನರಿಗೆ ದಿನನಿತ್ಯದ ಬದುಕೇ ದುಸ್ಸಾಹಸ ಎನ್ನಿಸಿದೆ. ಹಗಲು-ರಾತ್ರಿಯ ವ್ಯತ್ಯಾಸವೇ ಇಲ್ಲ ಎಂಬಂತೆ ಸದಾ ಮಬ್ಬಾಗಿಯೇ ಇರುವ ಹವೆಯಲ್ಲಿ ರಸ್ತೆ ದಾಟಲು ಕಷ್ಟಪಡುತ್ತಿರುವ ವ್ಯಕ್ತಿಯೊಬ್ಬ ಕಡಿದ್ದು ಹೀಗೆ..!

ನಮಗೂ ಹಕ್ಕು ಕೊಡಿ!

ನಮಗೂ ಹಕ್ಕು ಕೊಡಿ!

ನಮ್ಮನ್ನೂ ಎಲ್ಲರಂತೆಯೇ ಕಾಣಿ. ನಮಗೂ ಬದುಕುವ ಹಕ್ಕು ನೀಡಿ ಎಂದು ಲಿಂಗ ಅಲ್ಪಸಂಖ್ಯಾತರು ಕೋಲ್ಕತ್ತಾದಲ್ಲಿ, ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಉದ್ವೇಗಕ್ಕೊಳಗಾದ ಲಿಂಗ ಅಲ್ಪಸಂಖ್ಯಾತರೊಬ್ಬರು ಕಂಡಿದ್ದು ಹೀಗೆ..!

ಗುಮ್ಮ ಅಲ್ಲಾರಿ, ನಾನು ಸ್ನೋಮ್ಯಾನ್!

ಗುಮ್ಮ ಅಲ್ಲಾರಿ, ನಾನು ಸ್ನೋಮ್ಯಾನ್!

ಇಂಗ್ಲೆಂಡಿನ ವೊರ್ಸೆಸ್ಟರ್ ಎಂಬಲ್ಲಿ ಬೆಂಚ್ ವೊಂದರ ಮೇಲೆ ಕುಳಿತಿದ್ದ ಸ್ನೋಮ್ಯಾನ್ ಮತ್ತು ಸ್ನೋ ಡಾಗ್ ಕಂಡಿದ್ದು ಹೀಗೆ. ಥೇಟು ಬಿಳಿ ಗುಮ್ಮನ ಹಾಗೇ ಕಾಣುವ ಇದನ್ನು ಕಂಡು ಯಾರಾದರೂ ಹೆದರಿಕೊಂಡರೂ ಅಚ್ಚರಿಯಿಲ್ಲ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ನಿರಂತರವಾಗಿ ಮಂಜಿನ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ.

English summary
Atleast 2 people died for the huge wildfire which occurs in Carpinteria in California, America. So far 141000 acres have burned. Still the wildfire is continuingm. Here are few pictures of interesting events of India and also international.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X