ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿ ಹತ್ಯೆ
ಅಲ್ಬನಿ (ಕ್ಯಾಲಿಫೋರ್ನಿಯಾ), ಮಾ.16: ಭಾರತೀಯ ಮೂಲದ ಮಹಿಳಾ ವಿದ್ಯಾರ್ಥಿನಿಯೊಬ್ಬರು ಹತ್ಯೆಯಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
37 ವರ್ಷ ವಯಸ್ಸಿನ ರಣಧೀರ್ ಕೌರ್ ಎಂಬ ಡೆಂಟಲ್ ವಿದ್ಯಾರ್ಥಿ ಮೃತ ದುರ್ದೈವಿ. ರಣಧೀರ್ ಕೌರ್ ಅವರ ಶವ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. [ಟೆಕ್ಕಿ ಪ್ರಭಾ ಕುಮಾರ್ ಅಂತಿಮ ದರ್ಶನ]
ಸ್ಥಳೀಯ ಸಿಖ್ ದೇಗುಲದಲ್ಲಿ ಸೇವೆ ಸಲ್ಲಿಸಿ ಮನೆಗೆ ಹಿಂತಿರುಗಿದ ಕೌರ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡ ಕೌರ್ ಮೃತಪಟ್ಟಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊ ಕ್ರಾನಿಕಲ್ ಪತ್ರಿಕೆ ಪ್ರಕಾರ, ಕೌರ್ ಅವರ ಮನೆಗೆ ಯಾರೋ ಆಗುಂತಕರು ಬಲವಂತವಾಗಿ ಪ್ರವೇಶಿಸಿದ ಕುರುಹುಗಳು ಸಿಕ್ಕಿಲ್ಲ. ಕೌರ್ ಅವರ ಬಗ್ಗೆ ತಿಳಿದವರೇ ಮಾಡಿರುವ ಕೃತ್ಯ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕೌರ್ ಅವರಿಗೆ ಸಂಬಂಧಪಟ್ಟ ಕೆಲ ವಸ್ತುಗಳು ಅವರಿದ್ದ ಅಪಾರ್ಟ್ಮೆಂಟ್ ನಿಂದ ಮೂರ್ನಾಲ್ಕು ಕಿ.ಮೀ ದೂರವಿರುವ ಕಸದ ಡಬ್ಬದಲ್ಲಿ ಕಂಡು ಬಂದಿದೆ. [ಪ್ರಭಾ ಹಂತಕರನ್ನು ಗಲ್ಲಿಗೇರಿಸಲಿ: ಶೋಕ ತಪ್ತ ತಂದೆ]
ಯು ಸಿ ಸ್ಯಾನ್ ಫ್ರಾನ್ಸಿಸ್ಕೊ ಅಧಿಕಾರಿಗಳು (ಯು ಸಿ ಎಸ್ ಎಫ್ @UCSF) ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದಂತವೈದ್ಯ ಸಮುದಾಯಕ್ಕೆ ಇದು ತುಂಬಲಾರದ ನಷ್ಟ ಎಂದು ವೆಬ್ ಸೈಟ್ ನಲ್ಲಿ ಬರೆಯಲಾಗಿದೆ. ಕೌರ್ ಅವರ ಸಾವಿನ ಕಾರಣ, ಕೊಲೆಗಾರರ ಸುಳಿವು ಇನ್ನೂ ಸಿಕ್ಕಿಲ್ಲ.[ಅಮೆರಿಕದ ದೇಗುಲ ಮೇಲೆ ದಾಳಿ]
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಡೆಂಟಿಸ್ಟ್ ಕೋರ್ಸ್ ವಿದ್ಯಾರ್ಥಿನಿಯಾಗಿದ್ದ ಕೌರ್ ಅವರು 2016ರ ಜೂನ್ ನಲ್ಲಿ ಪದವಿ ಪಡೆಯುವ ಉತ್ಸಾಹದಲ್ಲಿದ್ದರು.[ಭಾರತೀಯನ ಮೇಲಿನ ಹಲ್ಲೆ ಸತ್ಯ ಚಿಚ್ಚಿಡುವ ವಿಡಿಯೋ]
ಸ್ಥಳೀಯ ಪೊಲೀಸರು ಅಲಮೆಡಾ ಕೌಂಟಿಯ ಕ್ರಿಮಿನಾಲಿಸ್ಟ್ ಗಳನ್ನು ಕರೆಸಿಕೊಳ್ಳಲಾಗಿದ್ದು, 6 ಜನರ ನುರಿತ ತನಿಖಾಧಿಕಾರಿಗಳ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಸಿಕ್ಕರೆ ಅಲ್ಬನಿ ಹಾಗೂ ಪನಾಮಾ ಅವಿನ್ಯೂ ನಿವಾಸಿಗಳು (510) 525-7300 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications