ಇತಿಹಾಸದಲ್ಲಿ ಅಪರೂಪದ ಘಟನೆ: ಮಗುವಿಗೆ ಜನ್ಮ ನೀಡಲಿರುವ ಪುರುಷ

Posted By:
Subscribe to Oneindia Kannada

ಲಂಡನ್, ಜ 10 (ಪಿಟಿಐ) : ಇತಿಹಾಸದಲ್ಲಿ ಅಪರೂಪ ಎನ್ನಬಹುದಾದ ಪ್ರಕರಣವೊಂದರಲ್ಲಿ ಪುರುಷನೊಬ್ಬ ಮಗುವಿಗೆ ಜನ್ಮನೀಡಲಿದ್ದಾನೆ.

ಬ್ರಿಟನ್ ದೇಶದ ವೇಲ್ಸ್, ಗ್ಲೌಸೆಸ್ಟರ್ ನಿವಾಸಿಯಾಗಿರುವ ಹೇಡನ್ ಕ್ರಾಸ್ ಎನ್ನುವ ವ್ಯಕ್ತಿ ಇನ್ನೇನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮನೀಡಿದ ಮೊದಲ ಬ್ರಿಟನ್ ಪ್ರಜೆ ಎನಿಸಿಕೊಳ್ಳಲಿದ್ದಾನೆ. (ಸಂತಾನಪ್ರಾಪ್ತಿಯ ಐತಿಹ್ಯವಿರುವ ತೊಟ್ಟಿಲಮಡು ಹರಕೆ)

 British man to become first UK male to give birth

ಈ ಹಿಂದೆ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಇಪ್ಪತ್ತು ವರ್ಷದ ಹೇಡನ್, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪರಿಚಿತ ದಾನಿಯೊಬ್ಬರ ವೀರ್ಯ ಪಡೆದು ಗರ್ಭ ಧರಿಸಿದ್ದಾನೆಂದು ದಿ ಸನ್ ಪತ್ರಿಕೆಯವರದಿಯನ್ನಾಧರಿಸಿ ಪಿಟಿಐ ವರದಿ ಮಾಡಿದೆ.

ಹದಿನಾರು ವಾರಗಳ ಗರ್ಭಿಣಿಯಾಗಿರುವ ಹೇಡನ್, ಇದೊಂದು ಮಿಶ್ರ ಅನುಭವವಾಗಿದ್ದು, ಹುಟ್ಟುವ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದೇನೆಂದು ಹೇಳಿಕೊಂಡಿದ್ದಾನೆ.

ಮಗು ಪಡೆಯುವುದಕ್ಕಾಗಿ ಹೇಡನ್ ಕ್ರಾಸ್ ತನ್ನ ಲಿಂಗ ಪರಿವರ್ತನೆ ಪ್ರಕ್ರಿಯೆಯನ್ನು ನಿಲ್ಲಿಸಿರುವುದು ವಿಶೇಷ.

ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಗೆ (NHS) ಲಿಂಗ ಪರಿವರ್ತನೆಗಾಗಿ, ಒಬ್ಬರಿಗೆ ಅಂದಾಜು 29 ಸಾವಿರ ಪೌಂಡ್ ವೆಚ್ಚ ತಗುಲಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A British man has put his gender transition on hold to have a baby after finding a sperm donor on social media and is expected to become the first UK male to give birth.
Please Wait while comments are loading...