ಇಂಡಿಯಾ & ಚೀನಾ ಅಣ್ಣ, ತಮ್ಮ: ಚೀನಾ ಜೊತೆಗಿನ ಭಾರತದ ದುಶ್ಮನಿ ಖತಂ?

ಭಾರತ & ಚೀನಾ ನಡುವೆ ಹತ್ತಿರ ಹತ್ತಿರ ಮುಕ್ಕಾಲು ಶತಮಾನದ ದ್ವೇಷ, ದುಶ್ಮನಿ ಇದೆ. ಭಾರತ & ಚೀನಾ ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಸಂಧಾನ ಮಾಡಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂಬುದು ರಷ್ಯಾ ಆಸೆಯಾಗಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಈ ಆಸೆ ಇದೀಗ ಈಡೇರಿದೆ. ಇಂಡಿಯಾ & ಚೀನಾ ಅಣ್ಣ, ತಮ್ಮ ಅನ್ನೋದು ಮತ್ತೊಮ್ಮೆ ಜಗತ್ತಿಗೇ ಸಾರುವಂತಹ ಘಟನೆ ನಡೆದಿದೆ. ಏಷ್ಯಾ ಖಂಡದ ಅತ್ಯಂತ ದೊಡ್ಡ ದೇಶಗಳ ನಡುವೆ ಇಂದು ನಡೆದ ಘಟನೆ ಬಗ್ಗೆ ತಿಳಿಯೋಣ ಬನ್ನಿ.

ಭಾರತ ಸದಾ ಶಾಂತಿ ಬಯಸುವ ದೇಶ, ಇದೇ ಕಾರಣಕ್ಕೆ ಜಗತ್ತಿನಲ್ಲಿ ಎಲ್ಲೇ ಯುದ್ಧ ನಡೆದರು ಕೂಡ ಭಾರತ ಶಾಂತಿ ತತ್ವ ಪಾಲನೆ ಮಾಡಲು ಸಲಹೆ ನೀಡುತ್ತದೆ. ಹೀಗಿದ್ದಾಗ ಚೀನಾ ಮಾತ್ರ ಗಡಿ & ಇತರ ವಿಚಾರದಲ್ಲಿ ಭಾರತದ ವಿರುದ್ಧ ಪದೇ ಪದೇ ಕಿರಿಕ್ ಮಾಡುತ್ತಲೇ ಇರುತ್ತದೆ. ಹೀಗೆ ಏಷ್ಯಾದ ಎರಡು ಬೃಹತ್ ದೇಶಗಳು ಕಿತ್ತಾಟ ನಡೆಸುತ್ತಿರುವುದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಇಷ್ಟವೇ ಇರಲಿಲ್ಲ. ಹೀಗಾಗಿ ಪದೇ ಪದೇ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುವ ಬಗ್ಗೆ, ಮಾತುಕತೆ ಮೂಲಕವೇ ಸಮಸ್ಯೆ ಸರಿ ಮಾಡಿಕೊಳ್ಳುವ ಬಗ್ಗೆ ಹೇಳುತ್ತಿದ್ದರು. ಇದೀಗ, 'ಬ್ರಿಕ್ಸ್' ಸಮ್ಮೇಳನದ ವೇದಿಕೆ ಭಾರತ & ಚೀನಾ ನಡುವೆ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.

BRICS Summit PM Modi Engages in Talks with Chinese President Xi

ಹಳಸಿ ಹೋಗಿದ್ದ ಸಂಬಂಧ ಸರಿ ಆಗುತ್ತಾ?

ಹೌದು, 2024ರ 'ಬ್ರಿಕ್ಸ್' ಸಮ್ಮೇಳನ ವೇದಿಕೆಯಲ್ಲೇ ಭಾರತ & ಚೀನಾ ನಡುವೆ ಮಹತ್ವದ ಮಾತುಕತೆ ನಡೆದಿದೆ. ಬ್ರಿಕ್ಸ್‌ ಶೃಂಗಸಭೆ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ದೇಶಕ್ಕೆ ತೆರಳಿದ್ದಾರೆ. ಹೀಗೆ ರಷ್ಯಾದಲ್ಲಿ 'ಬ್ರಿಕ್ಸ್' ಶೃಂಗಸಭೆ ಜೊತೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಕೂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. 2020 ರಲ್ಲಿ ನಡೆದಿದ್ದ ಭೀಕರ ಘಟನೆ ನಂತರ ಚೀನಾ & ಭಾರತದ ಸಂಬಂಧ ಹಳಸಿ ಹೋಗಿತ್ತು. ಹೀಗಿದ್ದಾಗಲೇ ಸುಮಾರು 4 ವರ್ಷಗಳ ಬಳಿಕ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು & ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಡುವೆ ಮಹತ್ವದ ಚರ್ಚೆ ನಡೆದಿದೆ.

ಗಡಿಯಲ್ಲಿ ಇನ್ನು ಎಲ್ಲವೂ ಶಾಂತ?

ಭಾರತದ ಗಡಿ ಭಾಗ ಲಡಾಖ್‌ ಮತ್ತು ಚೀನಾದ ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಇದುವರೆಗೂ ಇಡೀ ಜಗತ್ತಿನಾದ್ಯಂತ ಚರ್ಚೆಯ ಕೇಂದ್ರ ಬಿಂದುವಾಗಿತ್ತು. ಆದರೆ ಎರಡೂ ದೇಶಗಳ ನಡುವೆ ಭಾರಿ ಮಹತ್ವದ ಚರ್ಚೆ ನಡೆದ ನಂತರ, ಭಾರತದ ಗಡಿ ಭಾಗ ಲಡಾಖ್‌ ಮತ್ತು ಚೀನಾದ ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿ ಎರಡೂ ದೇಶಗಳ ಯೋಧರು ಜಂಟಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ರೀತಿ ಕೆಲವು ದಿನಗಳ ಹಿಂದಷ್ಟೇ ಭಾರತ & ಚೀನಾ ಅಧಿಕಾರಿಗಳು ಚರ್ಚೆ ನಡೆಸಿದ್ದರು.

ಈ ರೀತಿ ಭಾರತ & ಚೀನಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಒಪ್ಪಂದ ಮಾಡಿಕೊಂಡ ನಂತರ, ಇದೀಗ ಮಹತ್ವದ ಸಭೆ ನಡೆಸಿವೆ. ಅದರಲ್ಲೂ ಭಾರತದ ಪ್ರಧಾನಿ ಮೋದಿ ಅವರು, ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆಗೆ ಹಲವು ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭಾರತ & ಚೀನಾ ಗಡಿಯಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವುದು ಮೊದಲ ಆದ್ಯತೆ ಎಂಬ ನಿರ್ಧಾರಕ್ಕೆ ಬಂದಿವೆ ಎರಡೂ ದೇಶಗಳು. ಅಲ್ಲದೆ ಈ ಮೂಲಕ 2 ದೇಶಗಳ ಸಂಬಂಧ ಸುಧಾರಣೆ ಕಡೆಗೆ ಹೆಜ್ಜೆ ಇಟ್ಟಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+