• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋರಿಗೆ ಕೊರೊನಾವೈರಸ್ ಪಾಸಿಟಿವ್!

|

ಬ್ರಸಿಲಿಯಾ, ಜುಲೈ.07: ಕೊರೊನಾವೈರಸ್ ಸೋಂಕು ಯಾವಾಗ, ಯಾರಿಗೆ, ಯಾವ ರೀತಿಯಲ್ಲಿ, ಯಾವ ರೂಪದಲ್ಲಿ ವಕ್ಕರಿಸುತ್ತದೆ ಎನ್ನುವುದನ್ನು ಊಹಿಸುವುದಕ್ಕೂ ಆಗುತ್ತಿಲ್ಲ. ಕೊವಿಡ್-19 ಅಟ್ಟಹಾಸಕ್ಕೆ ನಲುಗಿದ ಬ್ರೆಜಿಲ್ ನಲ್ಲಿ ರಾಷ್ಟ್ರ ಅಧ್ಯಕ್ಷರಿಗೆ ಸೋಂಕು ಅಂಟಿಕೊಂಡಿದೆ.

   ಬೆಂಗಳೂರಿನಿಂದ ಬರುವವರಿಗೆ ಇಲ್ಲ ಪ್ರವೇಶ | Oneindia Kannada

   ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ರಾಜಧಾನಿ ಬ್ರಸಿಲಿಯಾದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಾತನಾಡಿದ ಅಧ್ಯಕ್ಷ ಜೈರ್ ಬೊಲ್ಸಾನಾರೋ ಅವರೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

   ಏರ್‌ಪೋರ್ಟ್‌ನಲ್ಲಿ ಇನ್ನು ರೊಬೊಟ್‌ಗಳದ್ದೇ ದರ್ಬಾರು, ಏನೇನು ಕೆಲಸ ಮಾಡುತ್ತೆ ಗೊತ್ತಾ?

   ದೇಶದ ಅಧ್ಯಕ್ಷ ಜೈರ್ ಬೊಲ್ಸೊನಾರೋ ಬಹಳಷ್ಟು ಬಾರಿ ಸಾರ್ವಜನಿಕವಾಗಿ ಬೆಂಬಲಿಗರೊಂದಿಗೆ ಕೈ ಕುಲುಕಿ ಬೆರೆತಿರುವ ಉದಾಹರಣೆಗಳಿವೆ. ಅಲ್ಲದೇ ಕೆಲವೊಂದು ಬಾರಿ ಮಾಸ್ಕ್ ಧರಿಸದೇ ಕಾರ್ಯಕರ್ತರ ನಡುವೆ ಸಂಚರಿಸಿದ್ದು ಸಾಕಷ್ಟು ಆತಂಕವನ್ನು ಹುಟ್ಟು ಹಾಕಿದೆ.

   ದೇಶದ ಜನಸಂಖ್ಯೆಯ ಶೇ.70ರಷ್ಟು ಮಂದಿಗೆ ಕೊರೊನಾವೈರಸ್:

   ಬ್ರೆಜಿಲ್ ನಲ್ಲಿ ದೇಶದಲ್ಲಿ ಜನಸಂಖ್ಯೆಯ ಶೇ.70ರಷ್ಟು ಮಂದಿಗೆ ಕೊೊರನಾವೈರಸ್ ಸೋಂಕು ಅಂಟಿಕೊಳ್ಳುತ್ತಿದ್ದು, ಇದನ್ನು ತಡೆಯುವುದಕ್ಕೆ ಯಾವುದೇ ಮಾರ್ಗಗಳಿಲ್ಲ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಇನ್ನು, ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇಶದ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ.

   ಬ್ರೆಜಿಲ್ ನಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಒಟ್ಟು 1,643,539 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 66,093 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. 1,072,229 ಸೋಂಕಿತರು ಗುಣಮುಖರಾಗಿದ್ದು, ಬಾಕಿ ಉಳಿದಿರುವ 505,217 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

   English summary
   Brazils President Jair Bolsonaro Tests Covid-19 Positive.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X