ಬಲೂಚಿಸ್ತಾನದಲ್ಲಿ ಬಾಂಬ್ ಸ್ಪೋಟ; ಪಾಕ್ ಪೊಲೀಸ್ ಸಾವು
ಕ್ವೆಟ್ಟಾ, ಅಕ್ಟೋಬರ್ 18: ಪಾಕಿಸ್ತಾನದ ಬಲೂಚಿಸ್ತಾನದ ಬಳಿ ಬಾಂಬ್ ಸ್ಪೋಟಗೊಂಡಿದೆ. ಪಾಕಿಸ್ತಾನದ ವಿಶ್ವವಿದ್ಯಾನಿಲಯವೊಂದರ ಹೊರಗೆ ನಿಲ್ಲಿಸಿದ್ದ ಪೊಲೀಸ್ ಬಸ್ ಬಳಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸೋಮವಾರ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಬಲೂಚಿಸ್ತಾನ ವಿಶ್ವವಿದ್ಯಾಲಯದ ಹೊರಗೆ ಈ ದಾಳಿ ನಡೆದಿದೆ ಎಂದು ಪ್ರಾಂತೀಯ ಆಂತರಿಕ ಸಚಿವ ಮೀರ್ ಜಿಯಾವುಲ್ಲಾ ಲಾಂಗೋವ್ ಹೇಳಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಘಟನೆಯ ಬಳಿಕ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
"ಸ್ಫೋಟದಲ್ಲಿ ಒಬ್ಬ ಪೊಲೀಸ್ ಸಾವನ್ನಪ್ಪಿದ್ದಾರೆ. 13 ಪೊಲೀಸರು, ರಸ್ತೆಯಲ್ಲಿ ಸಾಗುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ" ಎಂದು ಹಿರಿಯ ಆರೋಗ್ಯ ಅಧಿಕಾರಿ ಜಾವೇದ್ ಅಖ್ತರ್ ಹೇಳಿದರು.

ತೀವ್ರವಾಗಿ ಗಾಯಗೊಂಡವರನ್ನು ನಗರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದವರಿಗೆ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಅಖ್ತರ್ ಹೇಳಿದ್ದಾರೆ. ಪ್ರಾಂತೀಯ ಸರ್ಕಾರದ ವಕ್ತಾರ ಲಿಯಾಖತ್ ಶಹವಾನಿ ಅಲ್ ಜಜೀರಾಕ್ಕೆ ಸಾವಿನ ಸಂಖ್ಯೆಯನ್ನು 15 ಕ್ಕೂ ಹೆಚ್ಚು ಜನ ದೃಢಪಡಿಸಿದ್ದಾರೆ.
ಪ್ರಾಂತೀಯ ಭಯೋತ್ಪಾದನಾ ನಿಗ್ರಹ ವಿಭಾಗವು ಸ್ಫೋಟಕಗಳನ್ನು ಮೋಟಾರ್ ಸೈಕಲ್‌ನಲ್ಲಿ ನಡೆಸಿದೆ. ಪೊಲೀಸ್ ಟ್ರಕ್ ಹಾದು ಹೋಗುವಾಗ ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಲೂಚಿಸ್ತಾನ ಪ್ರಾಂತ್ಯದ ಪ್ರಾಂತೀಯ ರಾಜಧಾನಿಯಾದ ಕ್ವೆಟ್ಟಾದಲ್ಲಿ ಸಶಸ್ತ್ರ ಜನಾಂಗೀಯ ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳಿಂದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಆಗಾಗ ದಾಳಿಗಳನ್ನು ನಡೆಸುತ್ತಿದ್ದರೂ ಯಾವುದೇ ಗುಂಪು ತಕ್ಷಣವೇ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
Balochistan University Blast martyrs a policeman and injured 17 others..... pic.twitter.com/uD4JbA4H3B
— Zahid Ahmad ( زاہد احمد ) (जाहिद अहमद) (@ZahidAh09069102) October 18, 2021
ಬಲೂಚಿಸ್ತಾನ ಪ್ರಾಂತ್ಯದ ಜನಾಂಗೀಯ ಬಲೂಚ್ ಪ್ರದೇಶಗಳಿಗೆ ಹೆಚ್ಚಿನ ಹಕ್ಕುಗಳು, ಸ್ವಾಯತ್ತತೆ ಅಥವಾ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಪ್ರತ್ಯೇಕತಾವಾದಿ ಗುಂಪುಗಳು ಒಂದು ದಶಕದಿಂದಲೂ ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಬಾಂಬ್ ಸ್ಫೋಟಗಳು ಮತ್ತು ಹತ್ಯೆಗೆ ಗುರಿಯಾಗಿರಿಸಿಕೊಂಡಿವೆ.
ಪಾಕಿಸ್ತಾನದ ಭದ್ರತಾ ಪಡೆಗಳು ನಿಯಮಿತವಾಗಿ ಆ ಗುಂಪುಗಳ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸುತ್ತವೆ. ಪಾಕಿಸ್ತಾನದ ಜನಾಂಗೀಯ ಬಲೂಚ್ ಪ್ರತ್ಯೇಕತಾವಾದಿಗಳ ವಿರುದ್ಧದ ಯುದ್ಧದಲ್ಲಿ ಬಲವಂತದ ಕಣ್ಮರೆಗಳು ಮತ್ತು ಕಾನೂನು ಬಾಹಿರ ಹತ್ಯೆಗಳು ಸೇರಿದಂತೆ ವ್ಯಾಪಕ ದುರುಪಯೋಗದ ಆರೋಪಗಳು ದಾಖಲಾಗಿವೆ.












Click it and Unblock the Notifications