Get Updates
Get notified of breaking news, exclusive insights, and must-see stories!

ಅಬ್ಬಾ ಬಚಾವ್.. ಇಸ್ರೇಲ್‌ ನೆಲದಿಂದ ನಟಿ ನುಶ್ರತ್‌ ಭಾರತಕ್ಕೆ ವಾಪಸ್!

ಇಸ್ರೇಲ್ ನೆಲದಲ್ಲಿ ಯುದ್ಧ ಭೀಕರವಾಗುತ್ತಿದ್ದು, ಹಮಾಸ್ ಉಗ್ರರನ್ನು ಸದೆಬಡಿಯಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮತ್ತೊಂದ್ಕಡೆ ಉಗ್ರರು ಕೂಡ ಇಸ್ರೇಲ್ ಮೇಲೆ ದಾಳಿ ಮಾಡುತ್ತಿದ್ದು ಪರಿಸ್ಥಿತಿ ಕೈಮೀರಿ ಹೋಗಿದೆ. ಈ ವೇಳೆ ಬಾಲಿವುಡ್‌ ನಟಿ ನುಶ್ರತ್‌ ಭರುಚ್ಚಾ ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಕೊನೆಗೆ ಆಗಿದ್ದೇನು ಗೊತ್ತಾ?

ನಿನ್ನೆ ದಿಢೀರ್ ಇಸ್ರೇಲ್ ಮೇಲೆ ರಾಕೆಟ್ ಅಟ್ಯಾಕ್ ಆರಂಭಿಸಿದ್ದ ಹಮಾಸ್ ಬಂಡೋಕರರ ಗುಂಪು ಈಗಾಗಲೇ ಸಾಕಷ್ಟು ನಾಗಿರಕರನ್ನ ಅಪಹರಿಸಿರುವ ಆರೋಪ ಕೇಳಿಬಂದಿದೆ. ಹೀಗೆ ಎಲ್ಲೆಲ್ಲೂ ಗುಂಡು, ಬಾಂಬ್ ಸದ್ದು ಮೊಳಗುವ ಸಮಯದಲ್ಲೇ ಭಾರತೀಯರಿಗೂ ಆತಂಕ ಎದುರಾಗಿದೆ. ಹೀಗಾಗಿ ಸರ್ಕಾರವು ಕೂಡ ಇಸ್ರೇಲ್‌ನಲ್ಲಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿತ್ತಾದರೂ, ಭಯ ಕಡಿಮೆ ಆಗಿಲ್ಲ. ಈ ನಡುವೆ 9ನೇ ಹೈಫಾ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ನುಶ್ರತ್‌ ಭರುಚ್ಚಾ ಇಸ್ರೇಲ್‌ಗೆ ತೆರಳಿದ್ದರು. ಆದರೆ ದುರದೃಷ್ಟವಶಾತ್ ಯುದ್ಧ ಪೀಡಿತ ನೆಲದಲ್ಲಿ ಸಿಲುಕಿದ್ದರು.

Bollywood Actress Nushrratt Bharuccha safely reached Mumbai from war affected Israel

ರಾಜತಾಂತ್ರಿಕ ಅಧಿಕಾರಿಗಳ ಸಹಾಯ?

ಬಾಲಿವುಡ್ ನಟಿ ನುಶ್ರತ್‌ ಭರುಚ್ಚಾ ಇಸ್ರೇಲ್‌ನಲ್ಲಿ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಬಗ್ಗೆ ಅವರ ಜೊತೆಗಿದ್ದ ತಂಡ ಮಾಹಿತಿ ನೀಡಿತ್ತು. ಆ ನಂತರ ಭಾರತೀಯ ರಾಜತಾಂತ್ರಿಕ ಕಚೇರಿ ಸಹಾಯದಿಂದ ನಟಿ ನುಶ್ರತ್‌ ದೇಶಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಹೀಗೆ ಭಾರತದ ರಾಜತಾಂತ್ರಿಕ ಅಧಿಕಾರಿಗಳು ನಟಿಗೆ ಇಸ್ರೇಲ್‌ನಿಂದ ಸುರಕ್ಷಿತವಾಗಿ, ಭಾರತ ತಲುಪುವುದಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಇಂದು ಮುಂಬೈ ವಿಮಾನ ನಿಲ್ದಾಣಕ್ಕೆ ನಟಿ ನುಶ್ರತ್ ಸುರಕ್ಷಿತವಾಗಿ ಆಗಮಿಸಿದರು. ಈ ಮೂಲಕ ಆತಂಕವೊಂದು ಮರೆಯಾಗಿದೆ.

ಏನಾಗುತ್ತಿದೆ ಇಸ್ರೇಲ್ ನೆಲದಲ್ಲಿ?

ನಿನ್ನೆ ಬೆಳಗ್ಗೆ ಹಮಾಸ್ ಬಂಡುಕೋರರು ಇಸ್ರೇಲ್ ಕಡೆಗೆ 5000ಕ್ಕೂ ಹೆಚ್ಚು ರಾಕೆಟ್‌ನ್ನು ಒಂದೇ ಬಾರಿಗೆ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ಹೀಗಾಗಿಯೇ ಇಸ್ರೇಲ್ ಸೇನೆ ಯೋಧರು ಸಿದ್ಧವಾಗಿ ನಿಂತರು, ಈ ಸಮಯಕ್ಕೆ ಇಸ್ರೇಲ್ ಪ್ರಧಾನಿ ಕೂಡ ಯುದ್ಧವನ್ನ ಘೋಷಿಸಿಯೇ ಬಿಟ್ಟರು. ಹೀಗೆ ಶುರುವಾದ ಯುದ್ಧ ಒಂದೇ ದಿನಕ್ಕೆ ಸುಮಾರು 500 ಜನರ ಜೀವವನ್ನ ಬಲಿಪಡೆದಿದೆ ಎನ್ನಲಾಗಿದೆ. ಹಾಗೇ ಸಾಕಷ್ಟು ಜನ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.

ಸ್ನೇಹಿತನಿಗೆ ಅಮೆರಿಕ ಸಹಾಯ

ಹೀಗೆ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಯುದ್ಧ ಘೋಷಣೆ ಮಾಡಿದ ನಂತರ ಅಮೆರಿಕ ಕೂಡ ಭಾರಿ ಪ್ರಮಾಣದ ನೆರವು ಘೋಷಿಸಿದೆ. ಇನ್ನು ಯುದ್ಧ ಇನ್ನಷ್ಟು ಭೀಕರವಾಗುವ ಸಾಧ್ಯತೆಗಳು ದಟ್ಟವಾಗಿದೆ. ತಕ್ಷಣಕ್ಕೆ ಸುಮಾರು 8 ಬಿಲಿಯನ್ ಅಮೆರಿಕನ್ ಡಾಲರ್ ಸಹಾಯಕ್ಕೆ ಅಮೆರಿಕ ಮುಂದಾಗಿದೆ. ಇದು ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು 66 ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಇಷ್ಟು ದೊಡ್ಡ ಮೊತ್ತದ ಯುದ್ಧ ನೆರವಿಗೆ ಅಮೆರಿಕ ಸರ್ಕಾರ ಮುಂದೆ ಬಂದಿರುವುದು ಸಂಚಲನ ಸೃಷ್ಟಿಸಿದೆ.

Bollywood Actress Nushrratt Bharuccha safely reached Mumbai from war affected Israel

ಒಟ್ನಲ್ಲಿ ತನ್ನ ನೆಲದಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿದ ಕಾರಣ ಇಸ್ರೇಲ್ ಪಿತ್ತ ನೆತ್ತಿಗೇರಿದೆ. ಹೀಗಾಗಿ ವಾಯುದಾಳಿ ಮತ್ತು ಭೂ ದಾಳಿ ಮೂಲಕ ಗಾಜಾಪಟ್ಟಿಯಲ್ಲಿ ರಕ್ತಪಾತ ನಡೆಸುತ್ತಿದೆ. ಇನ್ನೊಂದು ಕಡೆ ಇಸ್ರೇಲ್‌ನ ಹಲವು ಪ್ರದೇಶ ಈಗಲೂ ಉಗ್ರರ ಹಿಡಿತದಲ್ಲೇ ಇವೆ. ಸಾವಿರಾರು ಹಮಾಸ್ ಬಂಡುಕೋರರು ಈ ಭಾಗದ ಪ್ರದೇಶಗಳಲ್ಲಿ ಗನ್ ಹಿಡಿದು ಹಿಂಸೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಂಕಷ್ಟದಲ್ಲಿ ಸಿಲುಕಿರುವ ವಿದೇಶಿಗರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ತಮ್ಮ ಪ್ರಜೆಗಳಿಗೆ ಈ ಕುರಿತು ಎಚ್ಚರಿಕೆಯನ್ನ ವಹಿಸುವಂತೆ ಸೂಚಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+