• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕ ಅಧ್ಯಕ್ಷ ಬೈಡನ್ ಸಂಧಾನ ಸೂತ್ರ!

|
Google Oneindia Kannada News

ಕೆಲವೇ ದಿನಗಳ ಹಿಂದಷ್ಟೇ ಅವರಿಬ್ಬರೂ ಒಬ್ಬರನ್ನೊಬ್ಬರು ಬೈದುಕೊಂಡಿದ್ದರು, ಒಬ್ಬರು ಕೊಲೆಗಾರ ಎಂದರೆ ಮತ್ತೊಬ್ಬರು ಆತ ಅಸಮರ್ಥ ಎಂದಿದ್ದರು. ಹೀಗೆ ಹಾವು-ಮುಂಗಸಿಯ ರೀತಿ ಕಿತ್ತಾಡಿದ್ದ ಪುಟಿನ್-ಬೈಡನ್‌ ಮಹತ್ವದ ಮಾತುಕತೆಗೆ ಕೂತಿದ್ದಾರೆ. ಯೆಸ್, ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಸ್ವಿಜರ್ಲ್ಯಾಂಡ್‌​ನಲ್ಲಿ ಮಾತುಕತೆಗೆ ಕೂತಿದ್ದಾರೆ. ಬೈಡನ್-ಪುಟಿನ್‌ರ ಭೇಟಿಗಾಗಿ 18ನೇ ಶತಮಾನದ ವಿಲ್ಲಾ ಒಂದನ್ನ ಬುಕ್ ಮಾಡಲಾಗಿದೆ.

ಭವ್ಯವಾದ ಅರಮನೆಯಂತಿರುವ ಈ ಜಾಗದಲ್ಲೇ ಇಬ್ಬರೂ ಪ್ರಭಾವಿ ನಾಯಕರು ಚರ್ಚೆಗೆ ಕೂತಿದ್ದಾರೆ. ಪುಟಿನ್‌ಗೆ ಬೈಡನ್‌ ಕಂಡರೆ ಕೆಂಡ ಕಾರುವಷ್ಟು ಕೋಪ ಹಾಗೇ ಬೈಡನ್‌ಗೆ ಪುಟಿನ್‌ ಕಂಡರೆ ಸಹನೆ ಕಳೆದುಕೊಳ್ಳುವಂತಹ ಪರಿಸ್ಥಿತಿದೆ. ಹೀಗಾಗಿ ಇಬ್ಬರೂ ನಾಯಕರು ಒಬ್ಬರ ಬಗ್ಗೆ ಮತ್ತೊಬ್ಬರು ಬೈದುಕೊಂಡಿದ್ದರು.

ಪುಟಿನ್ ಒಬ್ಬ ಕೊಲೆಗಾರ ಅಂತಾ ಬೈಡನ್ ಬೈದಿದ್ದರು. ಕೆಲವು ದಿನಗಳ ಹಿಂದಷ್ಟೇ ತಕ್ಕ ಉತ್ತರ ನೀಡಿದ್ದ ಪುಟಿನ್, ಪರೋಕ್ಷವಾಗಿ ಅಮೆರಿಕ ಅಧ್ಯಕ್ಷರಿಗೆ ಬಿಸಿ ಮುಟ್ಟಿಸಿದ್ದರು. ಈ ಮುನಿಸಿನ ಮಧ್ಯೆಯೂ ಪುಟಿನ್-ಬೈಡನ್ 5 ಗಂಟೆ ಕಾಲ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಕೊಲೆ, ಮೋಸದ ಆರೋಪ!

ಕೊಲೆ, ಮೋಸದ ಆರೋಪ!

ಅವನೊಬ್ಬ ಕೊಲೆಗಾರ, ಅವನೊಬ್ಬ ಮೋಸಗಾರ, ಅವನಿಂದ ನಮ್ಮ ದೇಶದ ಚುನಾವಣೆಯಲ್ಲಿ ಬೇರೆಯವರ ಹಸ್ತಕ್ಷೇಪ ಆಗಿತ್ತು. ಹೀಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಬೈಡನ್ ಮಾಡಿರುವ ಆರೋಪಗಳು ಒಂದೆರಡಲ್ಲ. ಅದರಲ್ಲೂ ಪುಟಿನ್ ಒಬ್ಬ ಕೊಲೆಗಾರ ಎಂದು ಬೈಡನ್ ಹೇಳಿದ್ದು ಅಮೆರಿಕ-ರಷ್ಯಾ ಸಂಬಂಧಕ್ಕೆ ಕೊಳ್ಳಿ ಇಟ್ಟಿತ್ತು. ಆದರೆ ಕಿಚ್ಚು ತಣ್ಣಗಾಗುವ ಸಮಯ ಬಂದಿದ್ದು, ಸುಧೀರ್ಘ ಮಾತುಕತೆಗೆ ನಾಯಕರು ಈಗ ಕೂತಿದ್ದಾರೆ. ಇದು ಅಮೆರಿಕ ಹಾಗೂ ರಷ್ಯಾ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಮಹತ್ವದ ಭೇಟಿಯಾಗಿದೆ. ಇಬ್ಬರೂ ಚರ್ಚಿಸುವ ಒಂದೊಂದು ಪದವೂ ಜಗತ್ತಿನ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ.

ಸ್ವಿಜರ್ಲ್ಯಾಂಡ್‌​ ಅಧ್ಯಕ್ಷರ ಆಹ್ವಾನ

ಸ್ವಿಜರ್ಲ್ಯಾಂಡ್‌​ ಅಧ್ಯಕ್ಷರ ಆಹ್ವಾನ

ಪುಟಿನ್-ಬೈಡನ್ ಭೇಟಿ ದಿನಾಂಕ ಹಾಗೂ ಸಮಯವನ್ನ 1 ತಿಂಗಳ ಹಿಂದೆಯೇ ನಿರ್ಧಾರಿಸಲಾಗಿತ್ತು. ರಷ್ಯಾ ಮತ್ತು ಅಮೆರಿಕ ಅಧಿಕಾರಿಗಳು ಮೀಟಿಂಗ್ ಫೈನಲ್ ಮಾಡಿದ್ದರು. ಆದರೆ ಈ ಭೇಟಿಗೂ ಒಂದು ಕಾರಣವಿದೆ, ಸ್ವಿಜರ್ಲ್ಯಾಂಡ್‌ನ ಅಧ್ಯಕ್ಷ ಗೈ ಪರ್ಮೆಲಿನ್ ಪುಟಿನ್ ಮತ್ತು ಬೈಡನ್‌ರನ್ನ ತಮ್ಮ ದೇಶಕ್ಕೆ ಆಹ್ವಾನಿಸಿದ್ರು. ಇದೇ ವೇಳೆ ಇಬ್ಬರೂ ಚರ್ಚೆ ಮಾಡಬಾರದು ಏಕೆ? ಅಂತಾ ಯೋಜನೆ ಹೊಳೆದಿತ್ತು. ಕೂಡಲೇ ಎರಡೂ ರಾಷ್ಟ್ರಗಳ ನಡುವೆ ಸಂವಹನ ನಡೆದು ಭೇಟಿಗೆ ಮುಹೂರ್ತ ಫಿಕ್ಸ್ ಆಗಿತ್ತು. ಇತ್ತೀಚೆಗೆ ಹಳಸುತ್ತಿರುವ ಎರಡೂ ರಾಷ್ಟ್ರಗಳ ಸಂಬಂಧ ಸುಧಾರಣೆಗೆ ಈ ಭೇಟಿ ಮಹತ್ವದ್ದಾಗಿದೆ. ಪುಟಿನ್ ಕೂಡ ಇದೇ ಮಾತನ್ನ ಹೇಳಿದ್ದರು, ರಷ್ಯಾ ಮತ್ತು ಅಮೆರಿಕ ಸಂಬಂಧ ಹಳಸುತ್ತಿದೆ ಎಂಬ ಸಂದೇಶ ನೀಡಿದ್ದರು. ಹೀಗಾಗಿ ಪುಟಿನ್ ಮತ್ತು ಬೈಡನ್ ಭೇಟಿ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.

ಟ್ರಂಪ್-ಪುಟಿನ್ ಪ್ರೀತಿ..!

ಟ್ರಂಪ್-ಪುಟಿನ್ ಪ್ರೀತಿ..!

ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ನೇಹದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಏಕೆಂದರೆ ಇಬ್ಬರೂ ಅಷ್ಟೊಂದು ಆತ್ಮೀಯರು. ಕೆಲವು ಆರೋಪಗಳ ಪ್ರಕಾರ ಟ್ರಂಪ್ ಗೆಲುವಿನಲ್ಲಿ ಪುಟಿನ್‌ರ ಕೈವಾಡ ಕೂಡ ಇದೆ ಎನ್ನಲಾಗುತ್ತದೆ. ಆದ್ರೆ ಇದಕ್ಕೆ ಪೂರಕವಾದ ಸಾಕ್ಷಿ ಒದಗಿಸುವಲ್ಲಿ ವಿರೋಧಿಗಳು ಸಕ್ಸಸ್ ಆಗಿಲ್ಲ. ಹೀಗೆ ಟ್ರಂಪ್ ಜೊತೆಗಿನ ಪುಟಿನ್ ಸ್ನೇಹ ಕೂಡ ಬೈಡನ್‌ಗೆ ಕೋಪ ತರಿಸುತ್ತಾ ಬಂದಿದೆ. ಚುನಾವಣೆ ಸಂದರ್ಭದಲ್ಲೂ ಬೈಡನ್ ಪರೋಕ್ಷವಾಗಿ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಎಚ್ಚರಿಕೆ ನೀಡಿದ್ದರು. ಗೆದ್ದ ನಂತರ ಕೂಡ ಈ ದ್ವೇಷ ಭಾವನೆ ಮುಂದುವರಿದಿತ್ತು. ಆದರೆ ಸೇಡಿನ ಕಿಚ್ಚಿಗೆ ನೀರು ಎರಚುವ ಕೆಲಸ ಈಗ ಆರಂಭವಾಗಿದೆ.

ಇಬ್ಬರ ಮಧ್ಯೆ ಬರೀ ಕಿರಿಕ್‌..!

ಇಬ್ಬರ ಮಧ್ಯೆ ಬರೀ ಕಿರಿಕ್‌..!

ಪುಟಿನ್ ವಿರುದ್ಧ ಕೆಂಡಕಾರುವ ಬೈಡನ್, ಸಮಯ ಸಿಕ್ಕಾಗೆಲ್ಲಾ ಪುಟಿನ್‌ ಬಗ್ಗೆ ಟೀಕೆ ಮಾಡ್ತಾನೆ ಇರ್ತಾರೆ. ಈ ರೀತಿ ಟೀಕೆ ಮಾಡುವ ಭರದಲ್ಲಿ ಪುಟಿನ್‌ರನ್ನ ಕೊಲೆಗಾರ ಎಂದಿದ್ದರು ಬೈಡನ್..! ಇದಕ್ಕೆ ರಷ್ಯಾ ತೀಕ್ಷ್ಣವಾಗೇ ಪ್ರತ್ಯುತ್ತರ ನೀಡಿತ್ತು. 'ಕ್ಷಮೆ ಕೇಳಿ, ಇಲ್ಲ ಪರಿಣಾಮ ನೆಟ್ಟಗಿರಲ್ಲ' ಅಂತಾ ವಾರ್ನಿಂಗ್ ಕೂಡ ಕೊಟ್ಟಿತ್ತು ರಷ್ಯಾ. ಮತ್ತೊಂದ್ಕಡೆ ಅಮೆರಿಕದಲ್ಲಿ ಪದೇ ಪದೆ ನಡೆಯುತ್ತಿದ್ದ ಸೈಬರ್ ದಾಳಿಯೂ ಬೈಡನ್‌ರ ಪಿತ್ತ ನೆತ್ತಿಗೇರಿಸಿತ್ತು. ಹೀಗೆ ಎರಡೂ ದೇಶಗಳ ನಡುವೆ ಬೆಂಕಿ ಹೊತ್ತಿ ಉರಿಯುವಾಗಲೇ ಸಂಧಾನ ಸೂತ್ರ ಮೊರೆ ಹೋಗಲಾಗಿದೆ.

English summary
US president Biden meets Putin in Switzerland & long hours meeting starts in Geneva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X