ಬರ್ಲಿನ್ ಟ್ರಕ್ ದಾಳಿಯ ಶಂಕಿತ ಉಗ್ರ ಇಟಲಿ ಪೊಲೀಸರಿಂದ ಹತ್ಯೆ

Posted By:
Subscribe to Oneindia Kannada

ಬರ್ಲಿನ್, ಡಿಸೆಂಬರ್ 23: ಟ್ಯುನಿಷಿಯಾ ಪ್ರಜೆ, ಬರ್ಲಿನ್ ನಲ್ಲಿ ಡಿಸೆಂಬರ್ 19ರಂದು ನಡೆದ ಟ್ರಕ್ ದಾಳಿಯ ಶಂಕಿತ ಉಗ್ರನನ್ನು ಶುಕ್ರವಾರ ಇಟಲಿಯ ಮಿಲನ್ ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ. ಸಚಿವ ಮಾರ್ಕೋ ಮಿನಿಟಿ ಪತ್ರಿಕಾ ಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.

ವರದಿಗಳ ಪ್ರಕಾರ, ಕಾರಿನಲ್ಲಿ ಬರುತ್ತಿದ್ದ ಶಂಕಿತ ಅನಿಸ್ ಅಮ್ರಿಯನ್ನು ಮಧ್ಯರಾತ್ರಿ 3ರ ವೇಳೆ ನಿಲ್ಲಿಸಿ ಮಾಮೂಲಿನಂತೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಆಗ ಆತ ಪಿಸ್ಟಲ್ ಹೊರತೆಗೆದು ಶೂಟ್ ಮಾಡಲು ಯತ್ನಿಸಿದ್ದಾನೆ. ಆಗ ಆತನನ್ನು ಕೊಲ್ಲಲಾಗಿದೆ. ಸೋಮವಾರ ಬರ್ಲಿನ್ ನಲ್ಲಿ ಹನ್ನೆರಡು ಮಂದಿ ಟ್ರಕ್ ದಾಳಿಯಲ್ಲಿ ಬಲಿಯಾದ ನಂತರ ಅಮ್ರಿ ನಾಪತ್ತೆಯಾಗಿದ್ದ.[ಬರ್ಲಿನ್ ನಲ್ಲಿ ಜನರ ಮೇಲೆ ಟ್ರಕ್ ಹರಿಸಿ ಐಸಿಸ್ ಭೀಕರ ಹತ್ಯಾಕಾಂಡ]

Berlin truck attack suspect shot dead in Milan

ಆತನ ಇಟಲಿಯಲ್ಲಿ ಸಂಪರ್ಕಗಳಿದ್ದವು. ಟ್ಯುನಿಷಿಯಾಯದಿಂದ 2011ರಲ್ಲಿ ಇಟಲಿಗೆ ಬಂದಿದ್ದ. ನಿರಾಶ್ರಿತರ ಶಿಬಿರದಲ್ಲಿ ಗುಂಡು ಹಾರಿಸಿದ ಕಾರಣಕ್ಕೆ ಆತನಿಗೆ ಜೈಲು ಶಿಕ್ಷೆಯಾಗಿ, 2015ರಲ್ಲಿ ಬಿಡುಗಡೆಯಾಗಿತ್ತು. ಆ ನಂತರ ಜರ್ಮನಿಗೆ ಹೋಗಿದ್ದ. ಶಂಕಿತ ಉಗ್ರನ ಹತ್ಯೆಗೆ ಒಂದು ದಿನಕ್ಕೆ ಮುಂಚೆ ಉತ್ತರ ಡೆನ್ಮಾರ್ಕ್ ನ ಆಲ್ಬರ್ಗ್ ನಲ್ಲಿ ಉಗ್ರ ಕಾಣಿಸಿಕೊಂಡಿದ್ದ ಎಂದು ಪೊಲೀಸರು ಟ್ವೀಟ್ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Tunisian, who is suspected to have carried out the deadly Berlin truck attack of December 19, was shot dead by police in Milan on Friday, Italian media reported, citing security sources.
Please Wait while comments are loading...