• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

100 ಪ್ರಯಾಣಿಕರಿದ್ದ ವಿಮಾನ ಟೇಕಾಫ್ ವೇಳೆ ಅಪಘಾತ: ಕನಿಷ್ಠ 14 ಸಾವು

|
   ಕಜಕಿಸ್ತಾನದ ಅಲ್ಮಾಟಿ ಸಮೀಪದಲ್ಲಿ ದುರಂತ | KAZAKISTHAN | AIR CRASH | ONEINDIA KANNADA

   ಅಲ್ಮಾಟಿ, ಡಿಸೆಂಬರ್ 27: ಕಜಕಿಸ್ತಾನದ ಅಲ್ಮಾಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 100 ಪ್ರಯಾಣಿಕರಿದ್ದ ಬೇಕ್ ಏರ್‌ಲೈನ್ ಸಂಸ್ಥೆಯ ಪ್ರಯಾಣಿಕ ವಿಮಾನವು ಟೇಕಾಫ್ ಆಗುವ ವೇಳೆ ಅಪಘಾತಕ್ಕೀಡಾಗಿದೆ.

   ಘಟನೆಯಲ್ಲಿ ಅಪಾರ ಸಾವು ನೋವು ಸಂಭವಿಸಿದೆ ಎಂದು ಹೇಳಲಾಗಿದೆ. ಮೃತಪಟ್ಟವರು ಹಾಗೂ ಬದುಕುಳಿದವರ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿಲ್ಲ. ದುರಂತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ.

   ಬೇಕ್ ಏರ್‌ಲೈನ್ ವಿಮಾನವು ಟೇಕಾಫ್ ಆಗುತ್ತಿದ್ದಂತೆಯೇ ತನ್ನ ನಿಯಂತ್ರಣ ಕಳೆದುಕೊಂಡು ಸಮೀಪದ ಎರಡು ಮಹಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕೆಲವರು ಬದುಕುಳಿದಿದ್ದಾರೆ. ತುರ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

   ವಿಮಾನದಲ್ಲಿ ಒಟ್ಟು 95 ಪ್ರಯಾಣಿಕರು ಮತ್ತು ಐವರು ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಇದ್ದರು. ಕಜಕಿಸ್ತಾನದ ಅತ್ಯಂತ ದೊಡ್ಡ ನಗರವಾದ ಅಲ್ಮಾಟಿ ಸಮೀಪದಲ್ಲಿ ಈ ದುರಂತ ಸಂಭವಿಸಿದೆ.

   ವಿಮಾನವು ಕಜಕಿಸ್ತಾನದ ಅಲ್ಮಾಟಿಯಿಂದ ರಾಜಧಾನಿ ನೂರ್ ಸುಲ್ತಾನ್ ಕಡೆಗೆ ಹೊರಟಿತ್ತು. ಸ್ಥಳೀಯ ಕಾಲಮಾನ ಬೆಳಿಗ್ಗೆ 7.22ರ ವೇಳೆಗೆ ವಿಮಾನ ಎತ್ತರಕ್ಕೇರುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡು ಮೊದಲು ಕಾಂಕ್ರೀಟ್ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ಬಳಿಕ ಎರಡು ಮಹಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.

   English summary
   Bek Air's passenger plane with 100 passengers on board has crashed just after take off from Almaty airport in Kazakhstan.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X